31.8 C
Bengaluru
Friday, April 12, 2024

Karnataka Govt Holidays 2024: 2024ಸಾಲಿಗೆ ಸಾರ್ವತ್ರಿಕ ರಜೆ- ಪರಿಮಿತ ರಜೆʼ ಗಳ ಪಟ್ಟಿ ಬಿಡುಗಡೆ

#Karnataka Govt Holidays 2024 # List of General Holidays #Limited holidays #List relesed

ಬೆಂಗಳೂರು;ಸರ್ಕಾರವು 2024ನೇ ಸಾಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಸಾರ್ವಜನಿಕ ಮಾಹಿತಿಗಾಗಿ ಈ ಕೆಳಕಂಡಂತೆ ಪ್ರಕಟಿಸಲಾಗಿದೆ.ಕೆಲವೊಂದು ಬದಲಾವಣೆ ಹೊರತುಪಡಿಸಿದರೆ, ನಿಗದಿಪಡಿಸಿದ ದಿನಾಂಕಗಳಿಗೆ ರಜೆ ಇರಲಿದೆ.ಎಲ್ಲಾ ಎರಡನೇ ಶನಿವಾರ. ನಾಲ್ಕನೇ ಶನಿವಾರ ಮತ್ತು ಭಾನುವಾರಗಳು ಹಾಗೂ ಈ ಕೆಳಕಂಡ ದಿನಗಳು

ಜನವರಿ 15, ಸೋಮವಾರ: ಉತ್ತರಾಯಣ ಪುಣ್ಯಕಾಲ, ಮಕರ ಸಕ್ರಾಂತಿ

ಜನವರಿ 26, ಶುಕ್ರವಾರ: ಗಣರಾಜ್ಯೋತ್ಸವ

ಮಾರ್ಚ್ 8, ಶುಕ್ರವಾರ: ಮಹಾ ಶಿವರಾತ್ರಿ

ಮಾರ್ಚ್ 29, ಶುಕ್ರವಾರ: ಗುಡ್​ ಫ್ರೈಡೆ

ಏಪ್ರಿಲ್ 9, ಮಂಗಳವಾರ: ಯುಗಾದಿ ಹಬ್ಬ

ಏಪ್ರಿಲ್ 11, ಗುರುವಾರ: ಖುತುಬ್ ಎ ರಂಜಾನ್

ಮೇ 1, ಬುಧವಾರ: ಕಾರ್ಮಿಕರ ದಿನಾಚರಣೆ

ಮೇ 10, ಶುಕ್ರವಾರ: ಬಸವ ಜಯಂತಿ, ಅಕ್ಷಯ ತೃತೀಯ

ಜೂನ್ 17, ಸೋಮವಾರ: ಬಕ್ರೀದ್

ಜುಲೈ 17, ಬುಧವಾರ: ಮೊಹರಂ ಕಡೇ ದಿನ

ಆಗಸ್ಟ್ 15, ಗುರುವಾರ: ಸ್ವಾತಂತ್ರ್ಯ ದಿನಚಾರಣೆ

ಸೆಪ್ಟೆಂಬರ್ 7, ಶನಿವಾರ: ವರಸಿದ್ಧಿ ವಿನಾಯಕ ವೃತ

ಸೆಪ್ಟೆಂಬರ್ 16, ಸೋಮವಾರ: ಈದ್ ಮಿಲಾದ್

ಅಕ್ಟೋಬರ್ 2, ಬುಧವಾರ: ಗಾಂಧಿ ಜಯಂತಿ, ಮಹಾಲಯ ಅಮವಾಸ್ಯೆ

ಅಕ್ಟೋಬರ್ 11, ಶುಕ್ರವಾರ: ಮಹಾನವಮಿ, ಆಯುಧಪೂಜೆ

ಅಕ್ಟೋಬರ್ 17, ಗುರುವಾರ: ಮಹರ್ಷಿ ವಾಲ್ಮೀಕಿ ಜಯಂತಿ

ಅಕ್ಟೋಬರ್ 31, ಗುರುವಾರ: ನರಕ ಚತುರ್ದಶಿ

ನವೆಂಬರ್ 1, ಶುಕ್ರವಾರ: ಕನ್ನಡ ರಾಜ್ಯೋತ್ಸವ

ನವೆಂಬರ್ 2, ಶನಿವಾರ: ಬಲಿಪಾಡ್ಯಮಿ, ದೀಪವಾಳಿ

ನವೆಂಬರ್ 18. ಸೋಮವಾರ: ಕನಕದಾಸ ಜಯಂತಿ

ಡಿಸೆಂಬರ್ 25, ಬುಧವಾರ: ಕ್ರಿಸ್​ಮಸ್

ಈ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಡಾ।। ಬಿ. ಆರ್. ಅಂಬೇಡ್ಕರ್ ಜಯಂತಿ (14.04.202 ಮತ್ತು ಮಹಾವೀರ ಜಯಂತಿ (21.04.2024) ಹಾಗೂ ಎರಡನೇ ಶನಿವಾರದಂದು ಬರುವ ವಿಜಯದಶವಿ (12.10.2024) ಈ ರಜೆ ಪಟ್ಟಿಯಲ್ಲಿ ನಮೂದಿಸಿರುವುದಿಲ್ಲ.ಸಾರ್ವತ್ರಿಕ ರಜಾ ದಿನಗಳಲ್ಲಿ ರಾಜ್ಯಾದ್ಯಂತ ಸರ್ಕಾರಿ ಕಛೇರಿಗಳು ಮುಚ್ಚಲ್ಪಡುತ್ತವೆ. ಕಛೇರಿಯ ಜರೂರು ಕೆಲಸವನ್ನು ವಿಲೇವಾರಿ ಮಾಡುವ ಬಗ್ಗೆ ಇಲಾಖಾ ಮುಖ್ಯಸ್ತರುಗಳು ಸೂಕ್ತ ವ್ಯವಸ್ಥೆ ಮಾಡತಕ್ಕದ್ದು.ಈ ಪಟ್ಟಿಯಲ್ಲಿ ಸೇರಿಸಲಾಗಿರುವ ಮುಸಲ್ಮಾನ ಬಾಂಧವರ ಹಬ್ಬಗಳು ನಿಗಧಿತ ದಿನಾಂಕದಂದು ಬೀಳದಿದ್ದರೆ ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನ ಬಾಂಧವರಿಗೆ ನಿಗಧಿತ ರಜೆಗೆ ಬದಲಾಗಿ ಹಬ್ಬದ ದಿವಸ ರಜಾ ಮಂಜೂರು ಮಾಡಬಹುದು. ದಿನಾಂಕ:03.09.2024 (ಮಂಗಳವಾರ) ಕೈಲ್ ಮೂಹೂರ್ತ, ದಿನಾಂಕ:17.10.2024 (ಗುರುವಾರ) ತುಲಾ ಸಂಕ್ರಮಣ ಹಾಗೂ ದಿನಾಂಕ:14.12.2024 (ಶನಿವಾರ) ಹುತ್ತರಿ ಹಬ್ಬವನ್ನು ಆಚರಿಸಲು ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಘೋಷಿಸಿದೆ.

ಪರಿಮಿತ ರಜಾ ದಿನಗಳ ಪಟ್ಟಿ(Limited holidays)

* ಜನವರಿ 1, ಸೋಮವಾರ; ಹೊಸ ವರ್ಷದ ಆರಂಭ

* ಮಾರ್ಚ್ 25, ಸೋಮವಾರ; ಹೋಳಿ ಹಬ್ಬ

* ಮಾರ್ಚ್ 30, ಶನಿವಾರ; ಹೋಲಿ ಸ್ಯಾಟರ್ ಡೇ

* ಏಪ್ರಿಲ್ 5, ಶುಕ್ರವಾರ; ಜುಮಾತ್-ಉಲ್-ವಿದಾ

* ಏಪ್ರಿಲ್ 6, ಶನಿವಾರ; ಶಬ್-ಎ-ಖದ್ರ್

* ಏಪ್ರಿಲ್ 17, ಬುಧವಾರ; ಶ್ರೀ ರಾಮನವಮಿ

* ಮೇ 23, ಗುರುವಾರ; ಬುದ್ಧ ಪೂರ್ಣಿಮಾ

* ಆಗಸ್ಟ್ 16, ಶುಕ್ರವಾರ; ವರಮಹಾಲಕ್ಷ್ಮೀ ಹಬ್ಬ

* ಆಗಸ್ಟ್ 19, ಸೋಮವಾರ; ಋಗ್, ಯಜುರ್ ಉಪಕರ್ಮ

* ಆಗಸ್ಟ್ 20, ಮಂಗಳವಾರ; ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ

* ಆಗಸ್ಟ್ 26, ಸೋಮವಾರ; ಶ್ರೀ ಕೃಷ್ಣ ಜನ್ಮಾಷ್ಠಮಿ

* ಸೆಪ್ಟೆಂಬರ್ 6, ಶುಕ್ರವಾರ; ಗೌರಿ ವೃತ

* ಸೆಪ್ಟೆಂಬರ್ 17, ಮಂಗಳವಾರ; ವಿಶ್ವಕರ್ಮ ಜಯಂತಿ

* ನವೆಂಬರ್ 15, ಶುಕ್ರವಾರ; ಗುರು ನಾನಕ್ ಜಯಂತಿ

ಅನಂತ ಪದ್ಮನಾಭ ವ್ರತ (16.09.2024) ಸೋಮವಾರ ಈದ್-ಮಿಲಾದ್ ಹಾಗೂ ತುಲಾ ಸಂಕ್ರಮಣ (17.10.2024) ಗುರುವಾರ ಮಹರ್ಷಿ ವಾಲ್ಮೀಕಿ ಜಯಂತಿ ನಿಮಿತ್ತ ಘೋಷಿಸಿರುವ ಸಾರ್ವತ್ರಿಕ ರಜಾ ದಿನಗಳಂದು ಬರುವುದರಿಂದ ಈ ರಜೆ ಪಟ್ಟಿಯಲ್ಲಿ ನಮೂದಿಸಿರುವುದಿಲ್ಲ.

Govt holidays (ಕನ್ನಡ) (2)

Related News

spot_img

Revenue Alerts

spot_img

News

spot_img