ಬೆಂಗಳೂರು, ಅ. 20: ರಾಜ್ಯ ಬರಗಾಲದಿಂದ ತತ್ತರಿಸುತ್ತಿದೆ. ಭೂಮಿಗೆ ಹಾಕಿದ ಬೀಜಗಳು ಮೊಳಕೆ ಹೊಡೆದಿಲ್ಲ. ಈಗಾಗಲೇ ತಾಪಮಾನ ಹೆಚ್ಚಾಗಿ ಎಲ್ಲೆಲ್ಲೂ ನೀರಿಗೂ ಆಹಾಕಾರ ತಲೆದೋರಿದೆ. ಇಂತಹ ಪರಿಸ್ಥಿತಿ ಯಲ್ಲಿ ರಾಜ್ಯದ ಶಾಸಕರಿಗೆ ಸರ್ಕಾರ ಬಂಪರ್ ಉಡುಗೊರೆ ನೀಡಿದೆ. ಸಚಿವರ ವಿಲಾಸಿ ಜೀವನಕ್ಕಾಗಿ ಸರ್ಕಾರ ಹೊಸ ಇನ್ನೋವಾ ಕಾರು ಖರೀದಿಸಿ ಶಾಸಕರಿಗೆ ನೀಡಿದೆ.
ರಾಜ್ಯದ 33 ಸಚಿವರಿಗೆ ದಸರಾ ಪ್ರಯುಕ್ತ ಹೊಸ ಇನ್ನೋವಾ ಕಾರುಗಳನ್ನು ಸರ್ಕಾರ ಉಡುಗೊರೆಯಾಗಿ ನೀಡಿದೆ. ಇದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದೆ.9.90 ಕೋಟಿ ರೂ. ವೆಚ್ಚದಲ್ಲಿ ಸಚಿವರಿಗೆ ಐಶರಾಮಿ ಇನ್ನೋವಾ ಕಾರು ವುಡುಗೊರೆಯಾಗಿ ನೀಡಲಾಗಿದೆ. ರಾಜ್ಯದಲ್ಲಿ ಬರಗಾಲ ಆವರಿಸಿ ಜನ ಸಂಕಷ್ಟಕ್ಕೆ ಈಡಾಗಿದ್ದಾರೆ. ಇನ್ನೊಂದಡೆ ಸರ್ಕಾರ ತನ್ನ ಗ್ಯಾರೆಂಟಿ ಯೋಜನೆಗಳಿಗೆ ಹಣ ಹೊಂದಿಸಲು ಹರ ಸಾಹಸ ಮಾಡುತ್ತಿದೆ. ಹಣ ಹೊಂದಿಸಲು ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುತ್ತಿಲ್ಲ.ಮಿಗಿಲಾಗಿ ಅನುತ್ಪಾದಕ ವೆಚ್ಚಗಳಿಗೆ ಕಡಿವಾಣ ಹಾಕಲು ಸಿದ್ದು ಸರ್ಕಾರ ಸರ್ವ ಪ್ರಯತ್ನ ಮಾಡುತ್ತಿದೆ. ಇದರ ನಡುವೆ ಸರ್ಕಾರ ಸಚಿವರ ವಿಲಾಸಿ ವೈಭೋಗಕ್ಕಾಗಿ 33 ಹೊಸ ಇನ್ನೋವಾ ಕಾರು ಖರೀದಿಸಿರುವುದು ಸಾರ್ವಜನಿಕ ಟೀಕೆಗೆ ಗುರಿಯಾಗಿದೆ.
ರಾಜ್ಯದಲ್ಲಿ ವಿದ್ಯುತ್ ಸಮಸ್ಯೆಯಿದೆ. ಮಳೆಯಿಲ್ಲದೇ ಬೆಳೆಗಳು ಕೈಕೊಟ್ಟಿವೆ. ಸರ್ಕಾರ ಕೊಡುತ್ತಿದ್ದ ಪಡಿತರ ಕಡಿತವಾಗಿ ಬಿಡಿಗಾಸು ಖಾತೆಗೆ ಹಾಕಲಾಗುತ್ತಿದೆ. ಗ್ಯಾರೆಂಟಿ ಯೋಜನೆಯಲ್ಲಿ ಲಕ್ಷಾಂತರ ಫಲಾನುಭವಿಗಳಿಗೆ ಈಗಲೂ ಒಂದು ರೂಪಾಯಿ ಸಿಕ್ಕಿಲ್ಲ. ಇಂತಹ ಸ್ಥಿತಿಯಲ್ಲಿ ಇನ್ನೊವಾ ಖರೀದಿಸುವ ಅಗತ್ಯವೇನುತ್ತು ಎಂಬ ಆಕ್ರೋಶದ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.
ಕಳೆದ ವರ್ಷವಷ್ಟೇ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಶಾಸಕರ ಮತ್ತು ಸಚಿವರ ವೇತನ ಭ ತ್ಯೆ ಹೆಚ್ಚಿಸಿತ್ತು. ಅದಕ್ಕೆ ಸರ್ಕಾರ ಘಟನೋತ್ತರ ಸಮ್ಮತಿ ಸೂಚಿಸಿದೆ. ಶಾಸಕರ ಮತ್ರು ಸಚಿವರ ವೇತನ ಹೆಚ್ಚಳವಾಗಿದೆ. ಇದರ ಜತೆ ಈಗ ಸಚಿವರಿಗೆ ಹೊಸ ಇನ್ನೋವಾ ನೀಡಲಾಗಿದೆ. ಇದು ಬೇಕಿತ್ತಾ ಎನ್ನುವ ಪ್ರಶ್ನೆ ಎದ್ದಿದೆ.