24.4 C
Bengaluru
Sunday, September 8, 2024

ಕರ್ನಾಟಕ ಸಿಎಂ ಆಯ್ಕೆ ಕಗ್ಗಂಟು: ಮುಖ್ಯಮಂತ್ರಿ ನೇಮಕ ಬಗ್ಗೆ ಸಂವಿಧಾನ ಏನು ಹೇಳುತ್ತದೆ ?

#Indian Constitution #CM, #Karnataka, #Siddaramaih  #Dk Shiva Kumar

ಬೆಂಗಳೂರು, ಮೇ. 17: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 135 ಕ್ಷೇತ್ರಗಳಲ್ಲಿ ಜಯಬೇರಿ ಬಾರಿಸಿದ್ರೂ ಕೂಡ ಇನ್ನೂ ಸಿಎಂ ಹುದ್ದೆ ಅಲಂಕರಿಸುವ ಬಗ್ಗೆ ಕಗ್ಗಂಟು ಶುರುವಾಗಿದೆ. ಸಿಎಂ ಗಾದಿಯ ಕಚ್ಚಾಟ ದೆಹಲಿ ಹೈಕಮಾಂಡ್ ಅಂಗಳಕ್ಕೆ ತಲುಪಿದೆ. ಒಂದಡೆ ಸಿದ್ದರಾಮಯ್ಯ ನಾನೇ ಸಿಎಂ ಆಗಬೇಕು ಎಂದು ಹೇಳುತ್ತಿದ್ದಾರೆ. ಅತ್ತ ಡಿಕೆಶಿ ನಾನು ಸಿಎಂ ಅಗಲೇಬೇಕು ಎಂದು ಪಟ್ಟು ಹಿಡಿದುಕೂತಿದ್ದಾರೆ. ಹೀಗಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಗಳಿಸಿದ್ರೂ ಸಿಎಂ ಯಾರು ಎಂಬುದಕ್ಕೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಕರ್ನಾಟಕ ಸಿಎಂ ಅಭ್ಯರ್ಥಿಯ ಆಯ್ಕೆ ಎಐಸಿಸಿ ಹೈಕಮಾಂಡ್ ಅಂಗಳ ತಲುಪಿದೆ. ಮುಖ್ಯಮಂತ್ರಿ ಹುದ್ದೆ ಸಾಂವಿಧಾನಿಕ ಹುದ್ದೆ ? ಸಿಎಂ ಯಾರು ಅಗಲು ಅರ್ಹರು ? ಅವರ ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ ? ಅವರ ವೇತನ ಭತ್ಯೆ ಕುರಿತ ಸಮಗ್ರ ವಿವರ ಇಲ್ಲಿದೆ.

ಸಿಎಂ ಆಯ್ಕೆ ಪ್ರಕ್ರಿಯೆ : ಭಾರತದ ಸಂವಿಧಾನದ ವಿಧಿ 163 ಮತ್ತು 164 ಮುಖ್ಯಮಂತ್ರಿಯ ಆಯ್ಕೆ ಬಗ್ಗೆ ಹೇಳುತ್ತದೆ. ಆರ್ಟಿಕಲ್ 163 ಪ್ರಕಾರ ರಾಜ್ಯಪಾಲರಿಗೆ ಸಹಾಯ ಮಾಡಲು ಮಂತ್ರಿ ಮಂಡಲ ಇರಬೇಕು. ಮಂತ್ರಿಮಂಡಲಕ್ಕೆ ಒಬ್ಬ ನಾಯಕ ( ಸಿಎಂ ) ಇರಬೇಕು ಎಂದು ಹೇಳುತ್ತದೆ. ಅರ್ಟಿಕಲ್ 164 ಪ್ರಕಾರ ಒಂದು ರಾಜ್ಯದಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಬಹುಮತ ಗಳಿಸುವ ಪಕ್ಷದ ಶಾಸಕರಲ್ಲಿ ಒಬ್ಬರನ್ನು ಶಾಸಕರಾಂಗ ಪಕ್ಷದ ನಾಯಕರನ್ನಾಗಿ ನೇಮಿಸಲಾಗುತ್ತದೆ. ಶಾಸಕಾಂಗ ಪಕ್ಷದ ನಾಯಕರೇ ಸರ್ಕಾರ ರಚನೆ ಕುರಿತು ರಾಜ್ಯಪಾಲರಿಗೆ ಮನವಿ ಸಲ್ಲಿಸುತ್ತಾರೆ. ರಾಜ್ಯಪಾಲರು ಶಾಸಕಾಂಗ ಪಕ್ಷದ ನಾಯಕನನ್ನು ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡುತ್ತಾರೆ. ರಾಜ್ಯಪಾಲರು ಹೆಸರಿಗೆ ಸರ್ಕಾರದ ಮುಖ್ಯಸ್ಥರಾಗಿರುತ್ತಾರೆ. ಮುಖ್ಯಮಂತ್ರಿಯೇ ಸರ್ಕಾರದ ನಿಜವಾದ ಮುಖ್ಯಸ್ಥರು. ಸಂವಿಧಾನದ ವಿಧಿ 164 ಪ್ರಕಾರ ಬಹುಮತ ಗಳಿಸಿದ ಪಕ್ಷದ ಸದಸ್ಯರು ನೇಮಿಸಿದ ನಾಯಕನನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಿ ರಾಜ್ಯಪಾಲರು ಪ್ರಮಾಣ ವಚನ ಬೋದಿಸುತ್ತಾರೆ.

ಪಕ್ಷಕ್ಕೂ, ಹೈಕಮಾಂಡ್‌ ಗೂಉ ಸಿಎಂ ಅಯ್ಕೆಗೂ ಯಾವುದೇ ಸಂಬಂಧವಿಲ್ಲ. ಆದ್ರೆ ಇವತ್ತಿನ ರಾಜಕೀಯದಲ್ಲಿ ಸಿಎಂ ಅಭ್ಯರ್ಥಿಯನ್ನು ಆತನ ಸಮರ್ಥತೆ ಮೇರೆಗೆ ಪಕ್ಷದ ಮುಖ್ಯಸ್ಥರ ಘೋಷಣೆ ಮಾಡುತ್ತಾರೆ. ಆದ್ರೆ ಹೈಕಮಾಂಡ್ ಘೊಷಣೆಗೆ ಯಾವುದೇ ಮಾನ್ಯತೆ ಇರುವುದಿಲ್ಲ. ವಾಸ್ತವದಲ್ಲಿ ಹೈಕಮಾಂಡ್ ನಿರ್ಧರಿಸಿದ ವ್ಯಕ್ತಿಯನ್ನೇ ಶಾಸನ ಸಭೆಯ ಮುಖ್ಯಸ್ಥರನ್ನಾಗಿ ನೇಮಿಸಲಾಗುತ್ತದೆ. ಸಿಎಂ ಆಯ್ಕೆ ಬಗ್ಗೆ ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸದಿದ್ದರೂ ಪ್ರಧಾನಿ ಆಯ್ಕೆ ಪ್ರಕ್ರಿಯೆ ನಿಯಮಗಳೇ ಸಿಎಂ ಆಯ್ಕೆಗೆ ಅನ್ವಯ ಆಗುತ್ತವೆ.

ಯಾವುದೇ ವ್ಯಕ್ತಿ ಸಿಎಂ ಅಗಲು ಅತನ ಶಾಸನಭೆಯ ಸದಸ್ಯನಾಗಿರಬೆಕು. ವಿಧಾನ ಸಭೆ ಆಗಿರಲಿ, ವಿಧಾನ ಪರಿಷತ್ ಅಗಿರಲಿ, ಒಂದು ವೇಳೆ ಸಮರ್ಥ ನಾಯಕ ನಾಗಿದ್ದು, ಸಿಎಂ ಆಗಿ ಆಯ್ಕೆಯಾದರೆ ಅವರು ಮುಂದಿನ ಆರು ತಿಂಗಳಲ್ಲಿ ಚುನಾವಣೆ ಎದುರಿಸಿ ಶಾಸಕನಾಗಿ ಅಯ್ಕೆಯಾಗಬೇಕು. ಅದು ವಿಧಾನ ಸಭೆ ಆಗಿರಲಿ, ವಿಧಾನ ಪರಿಷತ್ ಅಗಿರಲಿ ಆಯ್ಕೆಯಾಗಲೇಬೇಕು.

ಬಹುಮತ ಗಳಿಸಿದ ಪಕ್ಷದ ಶಾಸಕರು ಅಯ್ಕೆ ಮಾಡಿದವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಅಯ್ಕೆ ಮಾಡಿ ರಾಜ್ಯಪಾಲರಿಗೆ ಶಿಫಾರಸು ಮಾಡುತ್ತಾರೆ. ಅವರನ್ನೆ ಸಿಎಂ ಅಗಿ ನೇಮಕ ಮಾಡಿ ರಾಜ್ಯಪಾಲರು ಪ್ರಮಾಣ ವಚನ ಬೋಧಿಸುತ್ತಾರೆ.

ಸಾರ್ವತ್ರಿಕ ಚುನಾವಣೆಯಲ್ಲಿ ಒಂದು ಪಕ್ಷ ಬಹುಮತ ಗಳಿಸದ ಪಕ್ಷದಲ್ಲಿ ಅತಿ ಹೆಚ್ಚು ಶಾಸಕರು ಇರುವ ಪಕ್ಷಕ್ಕೆ ಸರ್ಕಾರ ರಚನೆ ಮಾಡಲು ರಾಜ್ಯಪಾಲರು ಅವಕಾಶ ನೀಡುತ್ತಾರೆ. ಈ ವೇಳೆ ಅನ್ಯ ಪಕ್ಷಗಳ ಶಾಸಕರ ಬೆಂಬಲ ಪಡೆದು ಸಮ್ಮಿಶ್ರ ಸರ್ಕಾರ ರಚನೆ ಮಾಡಬಹುದು. ಬಿಜೆಪಿ ಜೆಡಿಎಸ್ ಸಮ್ಮಿಶ್ರ ಸರ್ಕಾರ ಇದಕ್ಕೆ ಉದಾಹರಣೆ. ಸರ್ಕಾರ ರಚನೆ ಮಾಡಿದ ಒಂದು ತಿಂಗಳ ಒಳಗೆ ಬಹುಮತ ಸಾಬೀತು ಪಡಿಸಬೇಕು. ಒಮ್ಮೆ ಸಿಎಂ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ರಾಜ್ಯಪಾಲರು ವಜಾ ಮಾಡಲು ಬರುವುದಿಲ್ಲ. ಬಹುಮತ ಕಳೆದುಕೊಂಡಲ್ಲಿ ಸಿಎಂ ರಾಜೀನಾಮೆ ಸಲ್ಲಿಸಬೇಕು. ಹೊರತು ಪಡಿಸಿ ಸಿಎಂ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸುವಂತಿಲ್ಲ. ಸಿಎಂ ಹುದ್ದೆಯಲ್ಲಿದ್ದಾಗಲೇ ಏನಾದರೂ ಕ್ರಿಮಿನಲ್ ಅಪರಾಧ ಕೃತ್ಯ ಎಸಗಿ ಬಂಧನಕ್ಕೆ ಒಳಗಾದರೆ ಸಿಎಂ ಅನಿವಾರ್ಯವಾಗಿ ರಾಜೀನಾಮೆ ನೀಡಬೇಕಾಗುತ್ತದೆ.

ಮುಖ್ಯಮಂತ್ರಿ ಪದವಿಯಲ್ಲಿ ಇರುವ ವ್ಯಕ್ತಿ ಅಕಾಲಿಕ ಮರಣಕ್ಕೆ ತುತ್ತಾದರೆ, ಶಾಸಕಾಂಗ ಪಕ್ಷದ ಸದಸ್ಯರು ಅಯ್ಕೆ ಮಾಡಿದವರನ್ನು ಮುಖ್ಯಮಂತ್ರಿ ಹುದ್ದೆಗೆ ಶಿಫಾರಸು ಮಾಡಬಹುದು. ಅಂತಹವರಿಗೆ ರಾಜ್ಯಪಾಲರು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿ ಪ್ರಮಾಣ ವಚನ ಬೋಧಿಸುತ್ತಾರೆ.

ಮುಖ್ಯಮಂತ್ರಿಯ ಅಧಿಕಾರ ಅವಧಿ:

ಮುಖ್ಯಮಂತ್ರಿಗಳ ಅಧಿಕಾರ ಅವಧಿ ನಿಗದಿ ಪಡಿಸಿಲ್ಲ. ಒಂದು ಪಕ್ಷ ಸರ್ಕಾರ ರಚನೆ ಮಾಡಿದರೆ ಐದು ವರ್ಷದ ವರೆಗೆ ಅಸ್ತಿತ್ವದಲ್ಲಿರುತ್ತದೆ. ಒಂದು ವೇಳೆ ಬಹುಮತ ಕಳೆದುಕೊಂಡರೆ ಸರ್ಕಾರ ಬಿದ್ದು ಹೋಗುತ್ತದೆ. ಮುಖ್ಯಮಂತ್ರಿಯನ್ನು ಸೀಮಿತ ಅವಧಿಗೆ ಒಬ್ಬರನ್ನು ನೇಮಿಸಬಹುದು. ಉಳಿದ ಕಾಲಕ್ಕೆ ಇನ್ನೊಬ್ಬರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ನೇಮಿಸಿ ಸಿಎಂ ಆಗಿ ಆಯ್ಕೆ ಮಾಡಲು ಅವಕಾಶವಿದೆ.

ಕರ್ನಾಟಕ ಸಿಎಂ ವೇತನ ಭತ್ಯೆ: ಶಾಸಕರಾಗಿ ಅಯ್ಕೆಯಾಗುವ ಪ್ರತಿಯೊಬ್ಬರು ಸರ್ಕಾರದಿಂದಲೇ ವೇತನ ಭತ್ಯೆ ಪಡೆಯಲು ಅರ್ಹರಾಗಿರುತ್ತಾರೆ. ಆದ್ರೆ ಭಾರತದ ವಿವಿಧ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳ ಮತ್ತು ಶಾಸಕರ ವೇತನ ಭತ್ಯೆಗಳಲ್ಲಿ ತಾರತಮ್ಯವಿದೆ. ದೇಶದಲ್ಲಿ ತೆಲಂಗಾಣ ಮುಖ್ಯಮಂತ್ರಿ ಅತಿ ಹೆಚ್ಚು ವೇತನ ಮತ್ತು ಭತ್ಯೆ ಪಡೆಯುತ್ತಾರೆ. 4.10 ಲಕ್ಷ ರೂ. ವೇತನ ಹಾಗೂ 2.50 ಲಕ್ಷ ರೂ. ಇತರೆ ಭತ್ಯೆ ಪಡೆಯುತ್ತಾರೆ. ಅದೇ ರೀತಿ ಕರ್ನಾಟಕಲ್ಲಿ ಇತ್ತೀಚೆಗೆ ಮುಖ್ಯಮಂತ್ರಿ, ಮಂತ್ರಿ ಹಾಗೂ ಶಾಸಕರ ವೇತನ – ಭತ್ಯೆ ಪರಿಷ್ಕರಣೆ ಮಾಡಿದ್ದು, ಅದರ ಪ್ರಕಾರ ಮಂತ್ರಿಗಳ ವೇತನ 75 ಸಾವಿರ, ಮನೆ ಬಾಡಿಗೆ 1.20 ಲಕ್ಷ , 2 ಸಾವಿರ ಲೀಟರ್ ಇಂಧನ ವೆಚ್ಚ, ಮನೆ ನಿರ್ವಹಣಾ ವೆಚ್ಚ 30 ಸಾವಿರ, ಪ್ರಯಾಣ ಭತ್ಯೆ ದಿನಕ್ಕೆ 2500 ರೂ. ಇನ್ನಿತರೆ ಸೇರಿ ಬರೋಬ್ಬರಿ ನಾಲ್ಕು ಲಕ್ಷ ದಷ್ಟೇ ಪಡೆಯುತ್ತಾರೆ. ಶಾಸಕರಿಗೆ ಮಾಸಿಕ 40 ಸಾವಿರ ವೇತನ, ಮನೆ ಬಾಡಿಗೆ ಭತ್ಯೆ, ಇತರೆ ಭತ್ಯೆ ಗಳನ್ನು ನೀಡಲಾಗುತ್ತದೆ.

Related News

spot_img

Revenue Alerts

spot_img

News

spot_img