#Karnataka Election 2023, #CM #Gayitridevi prediction, #Karnataka new CMಬೆಂಗಳೂರು, ಮೇ. 11: ನರೇಂದ್ರ ಮೋದಿ ಪ್ರಧಾನಿ ಆಗುವ ಬಗ್ಗೆ ಭವಿಷ್ಯ ನುಡಿದಿದ್ದ ಮಾಡ್ರನ್ ಅಸ್ಟ್ರಾಲಜಿ ಪಿತಾಮಹ
ಬಿ.ವಿ. ರಾಮನ್ ಅವರ ಪುತ್ರಿ ಗಾಯಿತ್ರಿದೇವಿ ವಾಸುದೇವ್ ಅವರು ಈ ಬಾರಿ ಕರ್ನಾಟಕ ಸಿಎಂ ಯಾರಾಗುತ್ತಾರೆ ಎಂಬುದರ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಗಾಯಿತ್ರಿದೇವಿ ವಾಸುದೇವ್ ಅವರು ಈವರೆಗೂ ನುಡಿದಿರುವ ಅನೇಕ ಭವಿಷ್ಯಗಳು ನಿಜವಾಗಿವೆ. ಗಾಯಿತ್ರಿ ದೇವಿ ವಾಸುವೇವ್ ಪ್ರಶ್ನಾಶಾಸ್ತ್ರದ ಪ್ರಕಾರ ಈ ಬಾರಿ ಸಿಎಂ ಹುದ್ದೆ ಆಕಾಂಕ್ಷಿಗಳ ಅಗ್ರಪಟ್ಟಿಯಲ್ಲಿರುವರ ಪೈಕಿ ಯಾರೂ ಸಿಎಂ ಆಗಲ್ಲ ಎಂದು ಭವಿಷ್ಯವಾಣಿ ನುಡಿದಿದ್ದಾರೆ.
Siddaramaih will not became CM: ಕರ್ನಾಟಕ ವಿಧಾನಸಭೆ ಚುನಾವಣೆ 2023 ನಲ್ಲಿ ಕಾಂಗ್ರೆಸ್ ಬಹುಮತ ಗಳಿಸುತ್ತದೆ. ಕಾಂಗ್ರೆಸ್ ಸರ್ಕಾರ ರಚಿಸುತ್ತದೆ ಎಂಬ ಸಮೀಕ್ಷೆಗಳು ಹೊರ ಬಿದ್ದಿವೆ. ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಸಿದ್ದರಾಮಯ್ಯ ಅಥವಾ ಡಿ.ಕೆ. ಶಿವಕುಮಾರ್ ಸಿಎಂ ಆಗುತ್ತಾರೆ. ಮೂರನೇ ಆಯ್ಕೆ ಮಲ್ಲಿಕಾರ್ಜುನ ಖರ್ಗೆ ಹೆಸರು ಕೇಳಿ ಬರುತ್ತಿದೆ.
ಇನ್ನು ಬಿಜೆಪಿ ಬಹುಮತ ಗಳಿಸುವ ಬಗ್ಗೆಯೇ ಅನುಮಾನಗಳು ವ್ಯಕ್ತವಾಗಿವೆ. ಸಿಎಂ ಅಭ್ಯರ್ಥಿಯ ಬಗ್ಗೆ ಊಹೆ ಮಾಡಲಾಗುತ್ತಿಲ್ಲ. ಸಂಸದ ಪ್ರಹ್ಲಾದ್ ಜೋಶಿ ಹೆಸರು ಹೆಸರು ಬಿಟ್ಟರೆ ಬೇರೆ ಯಾರ ಹೆಸರು ಸಿಎಂ ಅಭ್ಯರ್ಥಿ ಹೆಸರು ಕೇಳಿ ಬರುತ್ತಿಲ್ಲ. ಒಂದು ವೇಳೆ ಸಮ್ಮಿಶ್ರ ಸರ್ಕಾರ ರಚನೆಯಾದರೆ ಕುಮಾರಸ್ವಾಮಿ ಸಿಎಂ ಆಗುವುದು ನಿಶ್ಚಿತ ಎಂಬ ಮಾತು ಮೊದಲಿನಿಂದಲೂ ಕೇಳಿ ಬರುತ್ತಿದೆ. ಆದ್ರೆ, ಮಾಡ್ರನ್ ಅಸ್ಟ್ರಾಲಜಿ ಪಿತಾಮಹ ಎಂದೇ ಖ್ಯಾತರಾಗಿರುವ ದಿವಂಗತ ಬಿ.ವಿ. ರಾಮನ್ ಪುತ್ರಿ ಗಾಯಿತ್ರಿದೇವಿ ವಾಸುದೇವ್ ಅವರ ಭವಿಷ್ಯವಾಣಿ ಇದೀಗ ರಾಜಕೀಯ ವಲಯದಲ್ಲಿ ಬಾರೀ ಸಂಚಲನ ಹುಟ್ಟುಹಾಕಿದೆ.
who will became Karnataka CM ? :
ಗಾಯಿತ್ರಿದೇವಿ ವಾಸುದೇವ್ ಅವರು ನುಡಿದಿರುವ ಭವಿಷ್ಯದ ಪ್ರಕಾರ, ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ,ಬಸವರಾಜ ಬೊಮ್ಮಾಯಿ, ಈ ಮೂವರಲ್ಲಿ ಯಾರೂ ಸಹ ಸಿಎಂ ಪಟ್ಟಕ್ಕೆ ಏರುವುದಿಲ್ಲ. ಇವರಲ್ಲಿ ಯಾರಿಗೂ ಈ ಬಾರಿ ಸಿಎಂ ಆಗುವ ಯೋಗವಿಲ್ಲ. ಸಿಎಂ ಪಟ್ಟ ಅಲಂಕರಿಸುವುದಾದರೆ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಿಎಂ ಆಗುವ ಯೋಗವಿದೆ. ಆದ್ರೆ ಅವರು ರಾಜಕೀಯ ನಿವೃತ್ತಿ ಪಡೆದಿದ್ದಾರೆ. ಹೀಗಾಗಿ ಶೋಭಾ ಕರಂದ್ಲಾಜೆ ಸಿಎಂ ಹುದ್ದೆ ಅಲಂಕರಿಸುವ ವಿರಳ ಸಾಧ್ಯತೆಯಿದೆ ಎಂದು ಗಾಯಿತ್ರಿ ದೇವಿ ಭವಿಷ್ಯ ನುಡಿದಿದ್ದಾರೆ.
ಡಿ.ಕೆ. ಶಿವಕುಮಾರ್ ಗೆ ಸಿಎಂ ಅಗುವ ಯೋಗವಿಲ್ಲ. ಸಿದ್ದರಾಮಯ್ಯ ಅವರಿಗೂ ಈ ಬಾರಿ ಸಿಎಂ ಹುದ್ದೆ ಆಗುವ ಯೋಗ ಕೂಡಿ ಬರಲ್ಲ. ಹೀಗಾಗಿ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೂ ಸಿಎಂ ಅಗುವ ಯೋಗವಿಲ್ಲ ಎಂದು ಹೇಳಿದ್ದಾರೆ. ಗಾಯಿತ್ರಿದೇವಿ ಭವಿಷ್ಯವಾಣಿ ನೋಡುವುದಾದರೆ ಹೊಸ ವ್ಯಕ್ತಿ ಸಿಎಂ ಹುದ್ದೆ ಅಲಂಕರಿಸುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.
ಯಾವ ಪಕ್ಷ ಅಧಿಕಾರಕ್ಕೆ : ಗಾಯಿತ್ರಿದೇವಿ ನುಡಿದಿರುವ ಭವಿಷ್ಯದ ಪ್ರಕಾರ ರಾಜ್ಯದಲ್ಲಿ ಈ ಬಾರಿ ಪೂರ್ಣ ಬಹುಮತ ಪಡೆಯದಿದ್ದರೂ ಬಿಜೆಪಿ ಸರ್ಕಾರ ರಚನೆ ಮಾಡುವ ಸಾಧ್ಯತೆಯಿದೆ. ಗಾಯಿತ್ರಿದೇವಿ ಅವರ ಭವಿಷ್ಯದ ಮಾತು ನಿಜವಾದಲ್ಲಿ ಭವಿಷ್ಯ ರಾಜ್ಯದಲ್ಲಿ ಜೆಡಿಎಸ್ ಬಿಜೆಪಿ ಸಮ್ಮಿಶ್ರ ಸರ್ಕಾರ ರಚನೆಯಾದರೆ ಶೋಭಾ ಕರಂದ್ಲಾಜೆ ಸಿಎಂ ಆಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಮಾಡ್ರನ್ ಅಸ್ಟ್ರಾಲಜಿ ಜನವರಿ ಅವೃತ್ತಿಯಲ್ಲಿ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಗಳಿಸುವ ಪಕ್ಷ ಹಾಗೂ ಸಿಎಂ ಹುದ್ದೆ ಅಲಂಕರಿಸುವರ ಬಗ್ಗೆ ಗಾಯಿತ್ರಿ ದೇವಿ ಭವಿಷ್ಯವಾಣಿ ನುಡಿದಿದ್ದು ಅದರಲ್ಲಿ ಈ ಅಂಶಗಳ ಬಗ್ಗೆ ಹೇಳಿದ್ದಾರೆ.
Gayitridevi true predictions: ಗಾಯಿತ್ರಿ ದೇವಿ ನುಡಿದಿರುವ ಭವಿಷ್ಯ ನಿಜ ಘಟನೆಗಳು:
ಬಿ.ವಿ ರಾಮನ್ ತನ್ನ ಜೀವನವನ್ನೇ ಜ್ಯೋತಿಷ್ಯ ಶಾಸ್ತ್ರಕ್ಕೆ ಮುಡುಪಾಗಿಟ್ಟಿದ್ದರು. ಹೀಗಾಗಿ ಅವರನ್ನು ಮಾಡ್ರನ್ ಅಸ್ಟ್ರಾಲಜಿ ಪಿತಾಮಹ ಎಂದೇ ಕರೆಯುತ್ತಾರೆ. ಅವರು ಮಾಡ್ರನ್ ಅಸ್ಟ್ರಾಲಜಿ ಎಂಬ ಮ್ಯಾಗಜಿನ್ ಹುಟ್ಟುಹಾಕಿದ್ದರು. 1998 ರಲ್ಲಿ ರಾಮನ್ ನಿಧನದ ನಂತರ ಅವರ ಪುತ್ರಿ ಗಾಯಿತ್ರಿದೇವಿ ವಾಸುದೇವ್ ಮ್ಯಾಗಜಿನ್ ಸಂಪಾದಕರಾಗಿದ್ದಾರೆ. ಅವರು ಯಾವ ರಾಜಕಾರಣಿಗೂ ವೈಯಕ್ತಿಕವಾಗಿ ಭವಿಷ್ಯ ನುಡಿಯುವುದಿಲ್ಲ. ರಾಜ್ಯ, ದೇಶದ ರಾಜಕೀಯ, ನಾಯಕರ ಬಗ್ಗೆ ಕೇಳುವ ಪ್ರಶ್ನೆಗಳಿಗೆ ಅವರ ಗ್ರಹಗತಿ ನೋಡಿಕೊಂಡು ಭವಿಷ್ಯ ನುಡಿಯುತ್ತಾರೆ. ಅವರು ಈವರೆಗೂ ನುಡಿದಿರುವ ಅನೇಕ ಭವಿಷ್ಯಗಳು ನಿಜವಾಗಿವೆ. ಜ್ಯೋತಿಷ್ಯಕ್ಕೆ ಸಂಬಂಧಿಸಿದಂತೆ ಸಂಸ್ಕೃತದಲ್ಲಿರುವ ಅನೇಕ ಪುಸ್ತಕಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡಿದ್ದು, ಅನೇಕ ಪುಸ್ತಕಗಳನ್ನು ಸ್ವತಃ ಬರೆದಿದ್ದಾರೆ.
ರಾಜೀವ್ ಗಾಂಧಿ ಹತ್ಯೆ ಹಾಗೂ ಇಂದಿರಾಗಾಂಧಿ ಅವರ ಅಧಿಕಾರ ಅಂತ್ಯದ ಭಗ್ಗೆ ಗಾಯಿತ್ರಿದೇವಿ ವಾಸುದೇವ್ ನುಡಿದಿದ್ದ ಭವಿಷ್ಯ ನಿಜವಾಗಿದೆ. 2004 ರಲ್ಲಿ ಭಾರತದಲ್ಲಿ ಸಂಭವಿಸಿದ ಭೀಕರ ಭೂಕಂಪದ ಬಗ್ಗೆ ಮೊದಲೇ ಭವಿಷ್ಯ ನುಡಿದಿದ್ದು ಅದು ಕೂಡ ನಿಜವಾಗಿದೆ.
ಜೋರ್ಡನ್ ಕಿಂಗ್ ಹುಸೇನ್ ಹಾಗೂ ಸದ್ದಾಂ ಹುಸೇನ್ ಅವರ ಜೀವ ಅಂತ್ಯವಾಗುವ ಬಗ್ಗೆಯೂ ಗಾಯಿತ್ರಿ ದೇವಿ ಮೊದಲೇ ನುಡಿದಿದ್ದ ಭವಿಷ್ಯವಾಣಿ ನೈಜವಾಗಿದ್ದು ಸ್ಮರಿಸಬಹುದು.
1991 – 92 ರಲ್ಲಿ ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ ಪ್ರಧಾನಿ ಹುದ್ದೆ ತ್ಯಾಗದ ಬಗ್ಗೆ ಗಾಯಿತ್ರಿದೇವಿ ನುಡಿದ ಭವಿಷ್ಯದಂತೆ ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಿತ್ತು. 2000 ನೇ ವರ್ಷದಲ್ಲಿ ಯುದ್ದದ ಬಗ್ಗೆ ಗಾಯಿತ್ರಿ ದೇವಿ ಹೇಳಿದ ಭವಿಷ್ಯದಂತೆ ಅಮೆರಿಕಾ ಮತ್ತು ಅಫ್ಗಾನಿಸ್ತಾನ್ ವಿರುದ್ಧ ಯುದ್ಧ ಮಾಡಿತ್ತು.
Prediction about PM Modi:
ಮೋದಿ ಬಗ್ಗೆ ಭವಿಷ್ಯ: ಪ್ರಧಾನಿ ನರೇಂದ್ರಮೋದಿ ಅವರು ಪ್ರಧಾನಿ ಅಗುವ ಬಗ್ಗೆ ಗಾಯಿತ್ರಿದೇವಿ ವಾಸುದೇವ್ ನುಡಿದಿದ್ದ ಭವಿಷ್ಯ ನಿಜವಾಗಿತ್ತು. ಹೀಗಾಗಿ ಸ್ವತಃ ಮೋದಿಯವರೆ ಗಾಯಿತ್ರಿದೇವಿ ಅವರಿಗೆ ಹೂವಿನ ಹಾರ ಹಾಕಿ ಗೌರವಿಸಿದ್ದರು. ಇವರ ಅನೇಕ ಭವಿಷ್ಯಗಳು ಈವರೆಗೂ ಘಟಿಸಿದ್ದು, ಅವರು ನುಡಿದಿರುವ ಭವಿಷ್ಯದ ಪ್ರಕಾರ ಈ ಬಾರಿ ಕರ್ನಾಟಕದಲ್ಲಿ ಮಹಿಳೆ ಸಿಎಂ ಅಗಬಹುದು. ಅಥವಾ ಬೇರೆ ಯಾರಾದರೂ ಅಗಬಹದು. ಸದ್ಯ ಸಿಎಂ ರೇಸ್ ನಲ್ಲಿರುವ ಯಾರಿಗೂ ಸಿಎಂ ಖುರ್ಚಿ ಅಲಂಕರಿಸುವ ಯೋಗವಿಲ್ಲ!