24.8 C
Bengaluru
Sunday, May 19, 2024

ಕರ್ನಾಟಕ ವಿಧಾನಸಭಾ ಚುನಾವಣೆ 2023;ಯಾವ ಜಿಲ್ಲೆಗಳಲ್ಲಿ ಎಷ್ಟು ಮತದಾನ? ಶೇಕಡಾವಾರು ಮತದಾನದ ಮಾಹಿತಿ

ಬೆಂಗಳೂರು ಮೇ11; ವಿಧಾನಸಭೆ ಚುನಾವಣೆ 2023 (Karnataka Assembly Elections) ಮುಕ್ತಾಯಗೊಂಡಿದ್ದು, ರಾಜ್ಯದಾದ್ಯಂತ ಸಂಜೆ 5 ಗಂಟೆ ವರೆಗಿನ ಲೆಕ್ಕಾಚಾರ ಪ್ರಕಾರ ಶೇ 65.69 ರಷ್ಟು ಮತದಾನವಾಗಿದೆ. ರಾಜ್ಯದ 2600ಕ್ಕೂ ಹೆಚ್ಚು ಆಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.ರಾಜ್ಯದ ಬಹುತೇಕ ಮತಗಟ್ಟೆಗಳಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರು ಆಗಮಿಸಿದ್ದು, ಸಾಲಿನಲ್ಲಿ ನಿಂತು ತಮ್ಮ ಇಷ್ಟದ ಅಭ್ಯರ್ಥಿಗಳಿಗೆ ಮತ ಚಲಾಯಿಸಿದ್ದಾರೆ.ರಾಜ್ಯಾದ್ಯಂತ ಶಾಂತಿಯುತ ಮತದಾನವಾಗಿದ್ದು, ಚುನಾವಣಾ ಆಯೋಗದ ಅಂಕಿ ಅಂಶಗಳ ಪ್ರಕಾರ ಈ ಬಾರಿ ಮತದಾನವು ಕಳೆದ ಬಾರಿಗಿಂತಲೂ ಹೆಚ್ಚಾಗಿದೆಅತಿ ಹೆಚ್ಚು ಮತದಾನ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಾಗಿದೆ. ಆ ಬಳಿಕ ರಾಮನಗರ ಜಿಲ್ಲೆ ಇದೆ. ಸಂಜೆ 5ರವರೆಗೆ ಶೇ.65.69ರಷ್ಟು ಮತದಾನ ಆಗಿದೆ. ಬೆಳಿಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆದಿದೆ. ಹಾಗಾದರೆ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಈವರೆಗಿನ ಮಾಹಿತಿಯಂತೆ ಶೇಕಡಾವಾರು ಮತದಾನ ವಿವರ ಹೀಗಿದೆ,

ಬೆಂಗಳೂರು ಗ್ರಾಮಾಂತರ ಜಿಲ್ಲೆ ಶೇ. 85 ಮತದಾನ

ಹೊಸಕೋಟೆ ವಿಧಾನಸಭಾ ಕ್ಷೇತ್ರ: 90.86%

ದೇವನಹಳ್ಳಿ ವಿಧಾನಸಭಾ ಕ್ಷೇತ್ರ: 84.61%

ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ: 84.30%

ನೆಲಮಂಗಲ ವಿಧಾನಸಭಾ ಕ್ಷೇತ್ರ: 79.60%

ಕೋಲಾರ ಜಿಲ್ಲೆಯಲ್ಲಿ ಶೇಕಡಾ 81.22 ಮತದಾನ

ಜಿಲ್ಲೆಯ 6 ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಮುಕ್ತಾಯ

ಶ್ರೀನಿವಾಸಪುರ -87.13% ಮತದಾನ

ಮುಳಬಾಗಿಲು -79.35 % ಮತದಾನ

ಕೆಜಿಎಫ್ -74.2 % ಮತದಾನ

ಬಂಗಾರಪೇಟೆ -79.7% ಮತದಾನ

ಕೋಲಾರ -78.57% ಮತದಾನ

ಮಾಲೂರು -88.6% ಮತದಾನ

 

ಗದಗ ಜಿಲ್ಲೆಯಲ್ಲಿ ಶೇಕಡಾ 77.18 ಮತದಾನ

ಶಿರಹಟ್ಟಿ -ಶೇಕಡಾ 71
ಗದಗ -ಶೇಕಡಾ 75.68
ರೋಣ -ಶೇಕಡಾ75.49
ನರಗುಂದ -ಶೇಕಡಾ79.46

ಉಡುಪಿ ಜಿಲ್ಲೆಯಲ್ಲಿ ಒಟ್ಟು ಶೇಕಡಾ 78.39 ಮತದಾನ

ಉಡುಪಿ -75.84%

ಕುಂದಾಪುರ -78.94%

ಕಾಪು -78.79%

ಕಾರ್ಕಳ -81.25%

ಬೈಂದೂರು -77.64%

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಶೇಕಡಾ 78.10 ರಷ್ಟು ಮತದಾನ

ಚಿಕ್ಕಮಗಳೂರು -72.21%

ತರೀಕೆರೆ -78.21%

ಕಡೂರು -80.88%

ಶೃಂಗೇರಿ -81.79%

ಮೂಡಿಗೆರೆ -77.47%

ವಿಜಯನಗರ ಜಿಲ್ಲೆಯಲ್ಲಿ ಒಟ್ಟು ಶೇಕಡಾ 77.62 ಮತದಾನ

ಹೂವಿನಹಡಗಲಿ -ಶೇಕಡಾ 77.31,

ಹಗರಿಬೊಮ್ಮನಹಳ್ಳಿ -ಶೇಕಡಾ 81.14,

ವಿಜಯನಗರ -ಶೇಕಡಾ 71.65,

ಕೂಡ್ಲಿಗಿ -ಶೇಕಡಾ 79.48

ಬಳ್ಳಾರಿ ಜಿಲ್ಲೆಯಲ್ಲಿ ಶೇಕಡಾ 75.47 ಮತದಾನ

ಕಂಪ್ಲಿ -ಶೇಕಡಾ 84.43

ಸಿರಗುಪ್ಪ -ಶೇಕಡಾ 73.30

ಬಳ್ಳಾರಿ ಗ್ರಾಮೀಣ -ಶೇಕಡಾ 76.10

ಬಳ್ಳಾರಿ ನಗರ -ಶೇಕಡಾ 67.96

ಸಂಡೂರು -ಶೇಕಡಾ 77.07

ಹರಪನಹಳ್ಳಿ -ಶೇಕಡಾ 79.3

ಧಾರವಾಡ ಜಿಲ್ಲೆಯಲ್ಲಿ ಶೇಕಡಾ 73.19 ಮತದಾನ

ನವಲಗುಂದ ವಿಧಾನಸಭಾ ಮತಕ್ಷೇತ್ರ ಶೇಕಡಾ 76.99 ಮತದಾನ

ಕುಂದಗೋಳ ವಿಧಾನಸಭಾ ಮತಕ್ಷೇತ್ರ ಶೇಕಡಾ 82.82 ಮತದಾನ

ಧಾರವಾಡ ವಿಧಾನಸಭಾ ಮತಕ್ಷೇತ್ರ ಶೇಕಡಾ 76.99 ಮತದಾನ

ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಮತಕ್ಷೇಯ ಶೇಕಡಾ 70.74 ಮತದಾನ

ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಮತಕ್ಷೇತ್ರ ಶೇಕಡಾ 64.30 ಮತದಾನ

ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಮತಕ್ಷೇತ್ರ ಶೇಕಡಾ 64.33 ಮತದಾನ

ಕಲಘಟಗಿ ವಿಧಾನಸಭಾ ಮತಕ್ಷೇತ್ರ ಶೇಕಡಾ 81.78 ಮತದಾನ

ಬೀದರ್ ಜಿಲ್ಲೆಯಲ್ಲಿ ಶೇಕಡಾ 71.66 ಮತದಾನ

ಬಸವಕಲ್ಯಾಣ ಕ್ಷೇತ್ರ- 70.69% ರಷ್ಟು ಮತದಾನ

ಹುಮನಾಬಾದ್ ಕ್ಷೇತ್ರ-73.26% ರಷ್ಟು ಮತದಾನ

ಬೀದರ್ ದಕ್ಷಿಣ ಕ್ಷೇತ್ರ-73.97% ರಷ್ಟು ಮತದಾನ

ಬೀದರ್ ಉತ್ತರ ಕ್ಷೇತ್ರ-65.67% ರಷ್ಟು ಮತದಾನ

ಭಾಲ್ಕಿ ಕ್ಷೇತ್ರ- 74.84% ರಷ್ಟು ಮತದಾನ

ಔರಾದ ಕ್ಷೇತ್ರ-71.69% ರಷ್ಟು ಮತದಾನ

ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇಕಡಾ 74.66 ಮತದಾನ

ಕಾರವಾರ & ಅಂಕೋಲಾ ಕ್ಷೇತ್ರದಲ್ಲಿ ಶೇಕಡಾ 70.81 ಮತದಾನ

ಕುಮಟಾ ಕ್ಷೇತ್ರದಲ್ಲಿ ಶೇಕಡಾ 70.28 ಮತದಾನ

ಭಟ್ಕಳ ಕ್ಷೇತ್ರದಲ್ಲಿ ಶೇಕಡಾ 77.47 ಮತದಾನ

ಶಿರಸಿ ಕ್ಷೇತ್ರದಲ್ಲಿ ಶೇಕಡಾ 78.62 ಮತದಾನ

ಯಲ್ಲಾಪುರ ಕ್ಷೇತ್ರದಲ್ಲಿ ಶೇಕಡಾ 79.65 ಮತದಾನ

ಹಳಿಯಾಳ ಕ್ಷೇತ್ರದಲ್ಲಿ ಶೇಕಡಾ 74.90 ಮತದಾನ

ವಿಜಯಪುರ ಜಿಲ್ಲೆಯಲ್ಲಿ ಶೇಕಡಾ 67.77 ರಷ್ಟು ಮತದಾನ

ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಶೇಕಡಾ 68.79

ದೇವರಹಿಪ್ಪರಗಿ ಶೇಕಡಾ 66.81

ಬಸವನ ಬಾಗೇವಾಡಿ ಶೇಕಡಾ 69.85

ಬಬಲೇಶ್ವರ ಶೇಕಡಾ 77.60

ಬಿಜಾಪೂರ ನಗರ ಶೇಕಡಾ 64.43

ನಾಗಠಾಣ ಮತಕ್ಷೇತ್ರದಲ್ಲಿ ಶೇಕಡಾ 65.87

ಇಂಡಿ ಶೇಕಡಾ 70.52

ಸಿಂದಗಿ ಶೇಕಡಾ 67.77

ಮಂಡ್ಯ ಜಿಲ್ಲೆಯಲ್ಲಿ ಮತದಾನ ಅಂತ್ಯವಾಗಿದ್ದು, ಸಂಜೆ 6 ಗಂಟೆವರೆಗೆ ಒಟ್ಟಾರೆ ಶೇಕಡಾ 82.30 % ರಷ್ಟು ಮತದಾನವಾಗಿದೆ.

186 ಮಳವಳ್ಳಿ- 75.39%

187 ಮದ್ದೂರು-82.71 %

188 ಮೇಲುಕೋಟೆ- 90.21%

189 ಮಂಡ್ಯ-75.69 %

190 ಶ್ರೀರಂಗಪಟ್ಟಣ- 83.81%

191 ನಾಗಮಂಗಲ- 87.40%

192 ಕೆ.ಆರ್ ಪೇಟೆ- 82.83%

 

Related News

spot_img

Revenue Alerts

spot_img

News

spot_img