ಬೆಂಗಳೂರು, ಏ. 13 : ಕೊನೆಗೂ ಕಣಿಮಿಣಿಕೆ ಹಂತ-1 ಯೋಜನೆಗೆ ಮರುಜೀವ ಸಿಕ್ಕಿದೆ. ಏಳು ವರ್ಷಗಳ ಹಿಂದೆ ಅಪಾರ ನಷ್ಟವಾದ ಹಿನ್ನೆಲೆ ಈ ಯೋಜನೆಯನ್ನು ಗುತ್ತಿಗೆದಾರರು ಕೈ ಬಿಟ್ಟಿದ್ದರು. ಮೈಸೂರು ರಸ್ತೆಯಲ್ಲಿರುವ ಕಣ್ಮಿಣಿಕೆಯ ಮೊದಲ ಹಂತದ ಯೋಜನೆಗೆ ಮರುಜೀವ ನೀಡಲು ಈಗ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ.
ಇತ್ತೀಚೆಗೆ ಬಿಡಿಎ ಆಡಳಿತ ಮಂಡಳಿ ಸಭೆ ನಡೆದಿತ್ತು. ಈ ಸಭೆಯಲ್ಲಿ ಯೋಜನೆಗೆ ಮರುಜೀವ ನೀಡಲು ಒಪ್ಪಿಗೆಯನ್ನು ನೀಡಲಾಗಿತ್ತು. ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ತೆರವುಗೊಂಡ ಬಳಿಕ ಯೋಜನೆಗೆ ಗುತ್ತಿಗೆ ನೀಡಲು ಅಧಿಕಾರಿಗಳು ಸಿದ್ಧತೆಯನ್ನು ನಡೆಸಿದ್ದಾರೆ. ಬೆಂಗಳೂರಿನಾದ್ಯಂತ 167 ಕೋಟಿ ರೂ.ಗಳ ವಸತಿ ಯೋಜನೆಗಳು ಪ್ರಾರಂಭವಅಗಿವೆ. ಈ ಪೈಕಿ, ಕಣಿಮಿಣಿಕೆ ಯೋಜನೆ ಹಳ್ಳ ಹಿಡಿದಿತ್ತು.
ಕಣಿಮಿಣಿಕೆಯಲ್ಲಿ ಯೋಜನೆ ಅಡಿಯಲ್ಲಿ ಒಟ್ಟು 608 ಒಂದು ಬಿಹೆಚ್ಕೆ, 384 ಎರಡು ಬಿಹೆಚ್ಕೆ ಹಾಗೂ 320 ಮೂರು ಬಿಹೆಚ್ಕೆ ಫ್ಲಾಟ್‌ಗಳು ನಿರ್ಮಾಣವಾಗಬೇಕಿತ್ತು. ಗುತ್ತಿಗೆದಾರರಾದ ದೀಪಕ್ ಕೇಬಲ್ಸ್ (ಭಾರತ) ಕಣಿಮಿಣಿಕೆಯಲ್ಲಿನ ಯೋಜನೆಯನ್ನು ಡಿಸೆಂಬರ್ 2014 ರೊಳಗೆ ಪೂರ್ಣಗೊಳಿಸಬೇಕಿತ್ತು. 19 ಬ್ಲಾಕ್ಗಳ ಪೈಕಿ ಕೇವಲ 7 ಬ್ಲಾಕ್‌ಗಳನ್ನು ಪೂರ್ಣಗೊಳಿಸಿದ್ದರು. ಪ್ರತಿ ಬ್ಲಾಕ್‌ಗೆ 40 ಫ್ಲಾಟ್‌ಗಳು ಇರುತ್ತವೆ. ಇನ್ನು ಏಳು ಬ್ಲಾಕ್ ಗಳಲ್ಲೂ ಇರುವ ಎಲ್ಲವೂ 1 ಬಿಹೆಚ್ಕೆ ಆಗಿವೆ.
ಇನ್ನು ಈ ಫ್ಲಾಟ್ ಗಳಲ್ಲಿ ಮೂಲಭೂತ ರಚನೆಗಳಷ್ಟನ್ನೇ ನಿರ್ಮಾಣ ಮಾಡಿದ್ದು, ಒಳಾಂಗಣವಿಲ್ಲ. ಹೀಗಾಗಿ ರೂ.20 ಕೋಟಿ ಗಳನ್ನು ನೀಡಲಾಗಿತ್ತು. ಇದರಿಂದ ಬಿಡಿಎಗೆ ನಷ್ಟವಾಗಿದೆ. ಹೀಗಾಗಿ ಗುತ್ತಿಗೆಯಿಂದ ಹೊರ ನಡೆಯಬೇಕಾಯ್ತು. ಈ ಕಾಮಗಾರಿಯಿಂದ ಬಿಡಿಎ ಕೋಟಿಗಟ್ಟಲೆ ನಷ್ಟವನ್ನು ಅನುಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇನ್ನು 27.2 ಕೋಟಿ ಪಾವತಿಸಿದ ನಂತರ ಬಿಡಿಎ 2016ರ ಏಪ್ರಿಲ್‌ನಲ್ಲಿ ಒಪ್ಪಂದವನ್ನು ಮುಕ್ತಾಯಗೊಳಿಸಿದೆ ಎಂದು ಲೆಕ್ಕಪರಿಶೋಧಕರು ಕಂಡುಕೊಂಡಿದ್ದಾರೆ. ಇದು ಸಾಕಾಗುವುದಿಲ್ಲ ಎಂಬಂತೆ, ಬಿಡಿಎ ಸೆಪ್ಟೆಂಬರ್ 2016 ರಲ್ಲಿ ಯೋಜನೆಯ 5 ನೇ ಹಂತವನ್ನು ಪ್ರಾರಂಭಿಸಿತು. ಇದು 432 ಫ್ಲಾಟ್‌ಗಳನ್ನು 184.9 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಯೋಜಿಸಿದೆ.
ಆದರೆ ಈಗಾಗಲೇ ಹಂತ 2 ರಿಂದ ಹಂತ 4 ರ ಅಡಿಯಲ್ಲಿ ಪೂರ್ಣಗೊಂಡ 1,068 ಫ್ಲಾಟ್ಗಳು ಮಾರಾಟಕ್ಕಿಡಲಾಗಿದೆ. ಆದರೆ, ಯಾರೂ ಕೂಡ ಫ್ಲಾಟ್ ಗಳನ್ನು ಖರೀದಿಸಲು ಮುಂದೆ ಬರುತ್ತಿಲ್ಲ. ಅಷ್ಟೇ ಅಲ್ಲದೇ, ಕಣಿಮಿಣಿಕೆಗೆ ಸರಿಯಾದ ಸಂಪರ್ಕವಿಲ್ಲ ಎಂದು ಫ್ಲಾಟ್ ಮಾರಾಟವಾಗುತ್ತಿಲ್ಲ. ಇಲ್ಲಿ ನಿರ್ಮಾಣವಾಗಿರುವ ಫ್ಲಾಟ್ ಗಳು ಅಷ್ಟೂ ಕೂಡ ವ್ಯರ್ಥ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.