29.2 C
Bengaluru
Sunday, February 25, 2024

ಅಧ್ಯಕ್ಷರಾಗಿ ಜಯಪ್ರಕಾಶ್ ಹೆಗ್ಡೆ ಅಧಿಕಾರಾವಧಿ ಜನವರಿ ವರೆಗೆ ವಿಸ್ತರಣೆ

#Jayaprakash Hegde’s #tenure # president #extended #till January

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಜಾತಿ ಗಣತಿ ವರದಿ ಚರ್ಚೆ ಬೆನ್ನಲ್ಲೇ ಇದೀಗ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರ ಮರುನೇಮಕಾತಿ ಮಾಡಲಾಗಿದೆ. ಎರಡು ತಿಂಗಳ ಅವಧಿಗೆ ಅಂದರೆ 2024 ಜನವರಿ 31ರವರೆಗೆ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಜಯಪ್ರಕಾಶ್ ಹೆಗ್ಡೆ ಅವರನ್ನು ಮರುನೇಮಕಗೊಳಿಸಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.ಆಯೋಗದ ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ ಹಾಗೂ ಐವರು ಸದಸ್ಯರ ಅಧಿಕಾರವನ್ನು 2024ರ ಜನವರಿ 31ರವರೆಗೆ ಮರು ನೇಮಕ ಮಾಡಲಾಗಿದೆ. ಇವರೆಲ್ಲರ ಅವಧಿಯ ನವೆಂಬರ್​ 26ಕ್ಕೆ ಮುಕ್ತಾಯಗೊಳ್ಳುತ್ತಿತ್ತು. ಅವರೆಲ್ಲರ ಅವಧಿ ವಿಸ್ತರಣೆಗೆ ಅವಕಾಶ ಇಲ್ಲದ ಕಾರಣ ಮರು ನೇಮಕ ಆದೇಶ ಹೊರಡಿಸಲಾಗಿದೆ. ಈ ಮೂಲಕ ಡಿಸೆಂಬರ್‌ ಒಳಗೆ ಜಾತಿ ಗಣತಿ ವರದಿಯನ್ನು (Caste Census Report) ಸ್ವೀಕರಿಸಲು ಸಿಎಂ ಸಿದ್ದರಾಮಯ್ಯ ಯೋಜನೆ ರೂಪಿಸಿದ್ದಾರೆ.ಆಯೋಗ ಅಧ್ಯಕ್ಷರ ಮೂರು ವರ್ಷಗಳ ಅಧಿಕಾರ ಅವಧಿಯು ಇದೇ 26ಕ್ಕೆ ಮುಕ್ತಾಯವಾಗುತ್ತಿದ್ದು, ಅದರೊಂದಿಗೆ ಇಡೀ ಆಯೋಗದ ಅವಧಿಯೂ ಕೊನೆಯಾಗುತ್ತಿದೆ. ಎಚ್. ಕಾಂತರಾಜ ನೇತೃತ್ವದ ಹಿಂದಿನ ಆಯೋಗ 2015ರಲ್ಲಿ ನಡೆಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ( ಜಾತಿ ಜನಗಣತಿ) ದತ್ತಾಂಶವನ್ನು ವಿಶ್ಲೇಷಿಸಿ ವರದಿ ಸಿದ್ಧಪಡಿಸುವ ಕೆಲಸದಲ್ಲಿ ಹಾಲಿ ಆಯೋಗ ನಿರತವಾಗಿದೆ.ಜಯಪ್ರಕಾಶ್​ ಹೆಗ್ಡೆ ಅವರೊಂದಿಗೆ ಸದಸ್ಯರಾದ ಕಲ್ಯಾಣ್​ ಕುಮಾ್ ಎಚ್​. ಎಸ್​, ರಾಜಶೇಖರ್ ಬಿ. ಎಸ್​, ಅರುಣ್​ ಕುಮಾರ್​, ಕೆ. ಟಿ ಸುವರ್ಣ, ಶಾರದಾ ನಾಯ್ಕ ಅವರನ್ನೂ ಮರು ನೇಮಕ ಮಾಡಲಾಗಿದೆ.

Related News

spot_img

Revenue Alerts

spot_img

News

spot_img