21 C
Bengaluru
Tuesday, December 3, 2024

ಸರ್ಕಾರಿ ನೌಕರರಿಗೆ ಜನ್‌ಧನ್‌ ವಿಮಾ ಪಾಲಿಸಿ

#Jandhan #insurance #policy # government # employees

ಬೆಂಗಳೂರು: ರಾಜ್ಯ ಸರ್ಕಾರದ ಸೇವೆಯಲ್ಲಿರುವ ಎಲ್ಲ ಅಧಿಕಾರಿ, ಸಿಬ್ಬಂದಿ ವರ್ಗದವರು ಬೇರೆ ಯೋಜನೆಗಳಲ್ಲಿ ವಿಮೆ ಮಾಡಿಸಿದ್ದರೂ ಪ್ರಧಾನ ಮಂತ್ರಿ ಜನ್‌ಧನ್‌ ಯೋಜನೆಯಡಿ ವಿಮಾ ಪಾಲಿಸಿ ಮಾಡಿಸಲು ಪ್ರೇರೇಪಿಸುವಂತೆ ಸರ್ಕಾರಿ ನೌಕರರ ಸಂಘಕ್ಕೆ ಆರ್ಥಿಕ ಇಲಾಖೆ ಪತ್ರ ಬರೆದಿದೆ. ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆಗೆ ವಾರ್ಷಿಕ 436 ರೂ. ಪ್ರೀಮಿಯಂ ಅನ್ನು ವಿಮಾದಾರರ ಬ್ಯಾಂಕ್‌ ಖಾತೆ ಮೂಲಕ ಪಾವತಿಸಬೇಕಾಗುತ್ತದೆ. ಯಾವುದೇ ಕಾರಣದಿಂದ ವಿಮಾದಾರ ಮೃತರಾದರೆ ಅವಲಂಬಿತ ಕುಟುಂಬ ಸದಸ್ಯರಿಗೆ 2 ಲಕ್ಷ ರೂ. ವಿಮೆ ನೆರವು ಸಿಗಲಿದೆ. ಈ ಯೋಜನೆ 50 ವರ್ಷದೊಳಗಿನವರಿಗೆ ಮಾತ್ರ ಲಭ್ಯವಿರುತ್ತದೆ. ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಯು ಅಪಘಾತ ವಿಮಾ(Accident Insurance)
_ ಯೋಜನೆಯಾಗಿದ್ದು, ವಾರ್ಷಿಕ 20 ರೂ. ಪ್ರೀಮಿಯಂ ಪಾವತಿಸುವುದು, ಒಂದು ವೇಳೆ ಅಪಘಾತವಾಗಿ ಮೃತಪಟ್ಟರೆ ಅಥವಾ ಶಾಶ್ವತವಾಗಿ ಅಂಗವಿಕಲತೆಗೆ 1 ಲಕ್ಷ ರೂ. ವಿಮಾ ಮೊತ್ತದ ನೆರವು ಸಿಗಲಿದೆ. ಮಾಹಿತಿಗೆ ಬಹುಮಹಡಿ ಕಟ್ಟಡದಲ್ಲಿರುವ ಆರ್ಥಿಕ ಇಲಾಖೆಯ ಸಲಹೆಗಾರರ ನ್ನು ಸಂಪರ್ಕಿಸಬಹುದು.(ಫೋನ್ : 22032499).ಬೇರೆ ಯೋಜನೆಗಳಲ್ಲಿ ವಿಮಾ ಪಾಲಿಸಿ ಮಾಡಿಸಿದ್ದರೂ ಸಹ ಈ ಯೋಜನೆಗಳಡಿ ವಿಮಾ ಪಾಲಿಸಿ ಮಾಡಿಸುವಂತೆ ಸದಸ್ಯರನ್ನು ಮನವೊಲಿಸುವಂತೆ ಸರ್ಕಾರದ ಕಾರ್ಯದರ್ಶಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರನ್ನು ಕೋರಿದ್ದಾರೆ.ಸರ್ಕಾರದ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ, ಸಿಬ್ಬಂದಿ ವರ್ಗದವರು ಅನಿರೀಕ್ಷಿತ ಸಂದರ್ಭಗಳಲ್ಲಿ ಅಥವಾ ಅಪಘಾತಕ್ಕೊಳಗಾದಲ್ಲಿ ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ಆರ್ಥಿಕ ಭದ್ರತೆ ಒದಗಿಸುವ ದೃಷ್ಟಿಯಿಂದ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಗಳಡಿ ವಿಮಾ ಪಾಲಿಸಿ ಮಾಡಿಸಲು ತಮ್ಮ ಸದಸ್ಯರಿಗೆ ಪ್ರೇರೇಪಿಸುವಂತೆ ಸೂಚಿಸಲಾಗಿದೆ.

Related News

spot_img

Revenue Alerts

spot_img

News

spot_img