22.4 C
Bengaluru
Saturday, June 15, 2024

ಆಧಾರ ಮತ್ತು ಪ್ಯಾನ್​ನ್ನು ಲಿಂಕ್​ ಮಾಡದೇ ಐಟಿಆರ್​ ಫೈಲ್​ ಮಾಡಿದರೆ 6000ರೂ.ವರೆಗೆ ದಂಡ!

ನವದೆಹಲಿ ಜುಲೈ 10 : ಆಧಾರ್ ‌ನೊಂದಿಗೆ ಪ್ಯಾನ್ ಲಿಂಕ್ ಮಾಡಲು ಈ ವರ್ಷದ ಜೂನ್ 30ರ ತನಕ ಗಡುವು ನೀಡಲಾಗಿತ್ತು. ಒಂದು ವೇಳೆ ಇದನ್ನು ಮಾಡಲು ವಿಫಲರಾದರೆ, ಜುಲೈ 1, 2023ರಂದು ಅವರ ಪ್ಯಾನ್​ ಅಮಾನ್ಯವಾಗುತ್ತದೆ ಎಂದು ಹೇಳಲಾಗಿದೆ. ಒಂದು ವೇಳೆ ಪ್ಯಾನ್​ ನಿಷ್ಕ್ರಿಯಗೊಂಡರೆ ಪ್ಯಾನ್​ ಕಾರ್ಡ್​ ಆಧಾರಿತ ಕೆಲವು ಸೇವೆಗಳನ್ನು ಪಡೆಯಲು ತಮ್ಮ ಖಾತೆಗಳನ್ನು ಬಳಸಲು ಸಾಧ್ಯವಾಗುವುದಿಲ್ಲ ಎಂದು ಸೂಚಿಲಾಗಿದೆ.

ಆದರೆ ಇದೀಗ ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡದೆ ಮಾಡುವಂತಹ ಯಾವುದೇ ಆದಾಯ ತೆರಿಗೆ ರಿಟರ್ನ್(ITR) ಸಲ್ಲಿಸುವವರಿಗೆ 6000ದ ವರೆಗೂ ದಂಡ ವಿಧಿಸುತ್ತೇವೆಂದು ಹಣಕಾಸು ಇಲಾಖೆ ಎಚ್ಚರಿಕೆ ನೀಡಿದೆ.ಮೇಲಾಗಿ, 2023ರ ಜುಲೈ 31ರ ಮೊದಲು ನಿಮ್ಮ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸಲು ನಿಮಗೆ ಸಾಧ್ಯವಾಗದೇ ಇರಬಹುದು. ಏಕೆಂದರೆ ITR ಗಡುವು ಒಂದು ತಿಂಗಳಿಗಿಂತ ಕಡಿಮೆಯಿರುತ್ತದೆ. ಒಂದು ವೇಳೆ ಈಗಾಗಲೇ ನೀವೂ ದಂಡ ಪಾವತಿಸಿದ ನಂತರವೂ ಪ್ಯಾನ್​ ನಿಷ್ಕ್ರಿಯವಾಗಿದ್ದರೆ, ಅದು ಮತ್ತೆ ಸಕ್ರಿಯವಾಗಲು 30 ದಿನಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಲಾಗಿದೆ.ಆಧಾರ ಮತ್ತು ಪ್ಯಾನ್​ನ್ನು ಲಿಂಕ್​ ಮಾಡದೇ ಐಟಿಆರ್​ ಫೈಲ್​ ಮಾಡಿದರೆ 6000ರೂ.ವರೆಗೆ ದಂಡ ವಿಧಿಸಲಾಗುವುದು ಎಂದು ಹಣಕಾಸು ಇಲಾಖೆ ಎಚ್ಚರಿಕೆ ನೀಡಿದೆ.

ಒಂದು ವೇಳೆ ಪ್ಯಾನ್ ಕಾರ್ಡ್​ನಿಂದಾಗಿ ಐಟಿಆರ್​ ಫೈಲ್​ ಮಾಡುವುದು ತಡವಾದರೆ,ಏನು ಮಾಡಬೇಕು?

ಒಂದು ವೇಳೆ ಪ್ಯಾನ್ ಕಾರ್ಡ್​ನಿಂದಾಗಿ ಐಟಿಆರ್​ ಫೈಲ್​ ಮಾಡುವುದು ತಡವಾದರೆ, ಇದಕ್ಕೂ ಕೂಡ ದಂಡವಿದ್ದು ಸುಮಾರು 5,000 ರೂ. ಕಟ್ಟಬೇಕಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಆದ್ದರಿಂದ, ನಿಮ್ಮ PAN ಪ್ರಸ್ತುತ ನಿಷ್ಕ್ರಿಯವಾಗಿದ್ದರೆ ನೀವು 5,000 ರೂಪಾಯಿಗಳ ತಡವಾದ ಫೈಲಿಂಗ್ ಶುಲ್ಕ ಜತೆಗೆ ಪ್ಯಾನ್ ಮತ್ತು ಆಧಾರ್​​ನ್ನು ಲಿಂಕ್​ಗಾಗಿ 1,000 ರೂ. ಶುಲ್ಕವನ್ನು ಪಾವತಿಸಬೇಕಾಗುತ್ತದೆ.ತಮ್ಮ ಆಧಾರ್​​ನ್ನು ಪ್ಯಾನ್‌ನೊಂದಿಗೆ ಲಿಂಕ್ ಮಾಡದ ತೆರಿಗೆದಾರರು ಆದಷ್ಟು ಬೇಗ ಮಾಡಬೇಕು.

ಆದಾಯ ತೆರಿಗೆಯ ತಡವಾದ ರಿಟರ್ನ್‌ಗಳನ್ನು ಸಲ್ಲಿಸಲು ಯಾವಾಗ ಕೊನೆಯ ದಿನ?

ತಮ್ಮ ಆದಾಯ ತೆರಿಗೆ ರಿಟರ್ನ್‌ಗಳನ್ನು ನಿಗದಿತ ದಿನಾಂಕದೊಳಗೆ ಅಂದರೆ 31 ಜುಲೈ 2023 ರೊಳಗೆ ಸಲ್ಲಿಸಬೇಕು ಎಂದು ಶಿಫಾರಸು ಮಾಡಲಾಗಿದೆ. ಜುಲೈ 31 ರೊಳಗೆ ತಮ್ಮ ಆದಾಯ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸಲು ಸಾಧ್ಯವಾಗದ ತೆರಿಗೆದಾರರು 31ನೇ ಡಿಸೆಂಬರ್ 2023ರವರೆಗೆ ತಡವಾದ ರಿಟರ್ನ್‌ಗಳನ್ನು ಸಲ್ಲಿಸಬಹುದು.

Related News

spot_img

Revenue Alerts

spot_img

News

spot_img