21.2 C
Bengaluru
Tuesday, December 3, 2024

IT Raid:ಚೀನಾದ ಕಂಪ್ಯೂಟರ್ ತಯಾರಕ ಲೆನೊವೊ ಕಚೇರಿಗಳ ಮೇಲೆ ಐಟಿ ದಾಳಿ

ನವದೆಹಲಿ;ಲ್ಯಾಪ್‌ಟಾಪ್ ಮತ್ತು ಟ್ಯಾಬ್ಲೆಟ್‌ಗಳನ್ನು ತಯಾರಿಸುವ ಮತ್ತು ಮಾರಾಟ ಮಾಡುವ ಲೆನೊವೊ ಕಂಪನಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ಲೆನೊವೊ ಮೂಲತಃ ಚೀನಾ ಮೂಲದ ಕಂಪನಿಯಾಗಿದೆ. ಮುಂಬೈ, ಬೆಂಗಳೂರು, ಗುರಗಾಂವ್ ನಗರಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಈ ಕಂಪನಿಯ ವಿರುದ್ಧ ತೆರಿಗೆ ವಂಚನೆ ಸೇರಿದಂತೆ ವಿವಿಧ ದೂರುಗಳು ಬಂದಿವೆ ಎನ್ನಲಾಗಿದೆ. ದೂರುಗಳ ಆಧಾರದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಂಪನಿ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ.ಆದಾಯ ತೆರಿಗೆ ತಪ್ಪು ಮಾಹಿತಿ, ಸುಳ್ಳು ಮಾಹಿತಿ (Income tax evasion) ನೀಡಿದ ಹಿನ್ನೆಲೆಯಲ್ಲಿ ಈ ದಾಳಿ (IT Raid) ನಡೆದಿದೆ ಎಂದು ಹೇಳಲಾಗುತ್ತಿದೆ.ಅಧಿಕಾರಿಗಳು ಭೇಟಿಯ ಸಮಯದಲ್ಲಿ ಲೆನೋವೋ ಉದ್ಯೋಗಿಗಳ ಲ್ಯಾಪ್‌ಟಾಪ್‌ಗಳನ್ನು ಪರಿಶೀಲಿಸಿದರು. ವಿಚಾರಣೆಯ ಭಾಗವಾಗಿ ಭೇಟಿಯ ಸಮಯದಲ್ಲಿ ಅಧಿಕಾರಿಗಳು ಲೆನೋವೋ ಕಂಪನಿಯ ಹಿರಿಯ ನಿರ್ವಹಣಾ ವ್ಯಕ್ತಿಗಳನ್ನು ಸಂಪರ್ಕಿಸಲು ಪ್ರಯತ್ನಿಸದರು. ಆದರೆ, ಸಾಧ್ಯವಾಗಿಲ್ಲ ಎಂದು ಮೂಲಗಳು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.ತಮ್ಮ ಕಚೇರಿಯ ಮೇಲೆ ಐಟಿ ರೇಡ್ ಖಚಿತಪಡಿಸಿರುವ ಲೆನೋವೋ, ಅಧಿಕಾರಗಳಿಗೆ ಸಹಕಾರ ನೀಡುತ್ತಿದ್ದೇವೆ ಮತ್ತು ಅಗತ್ಯವಿರುವ ಎಲ್ಲ ಬೆಂಬಲವನ್ನು ನಾವು ಅವರಿಗೆ ನೀಡುತ್ತೇವೆ.ಎಂದು ಲೆನೋವೋ ಹೇಳಿದೆ.

Related News

spot_img

Revenue Alerts

spot_img

News

spot_img