24.2 C
Bengaluru
Friday, September 20, 2024

ನೌಕರರ ಗ್ರಾಚ್ಯುಟಿಗೆ ವಿಮೆ ರಕ್ಷಣೆ ಕಡ್ಡಾಯ!

ಬೆಂಗಳೂರು;ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಗ್ರಾಚ್ಯುಯಿಟಿ ಕಾಯ್ದೆಯ 25 ವರ್ಷಗಳ ಬಳಿಕ ರಾಜ್ಯದಲ್ಲಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಖಾಸಗಿ ಸಂಸ್ಥೆಗಳ ಉದ್ಯೋಗಿಗಳ ಗ್ರಾಚ್ಯುಟಿ ಮೊತ್ತಕ್ಕೆ ವಿಮೆಯ ರಕ್ಷಣೆಯನ್ನು ಒದಗಿಸಲು, ಕಾರ್ಮಿಕ ಇಲಾಖೆಯು ಕರ್ನಾಟಕ ಕಡ್ಡಾಯ ಗ್ರಾಚ್ಯುಟಿ ವಿಮಾ ನಿಯಮಗಳು-2024′ ಅನ್ನು ಜಾರಿಗೊಳಿಸಿ ಅಧಿಸೂಚನೆ ಹೊರಡಿಸಿದೆ. ಈ ಮೂಲಕ ಖಾಸಗಿ ಉದ್ದಿಮೆಗಳು/ ಉದ್ಯೋಗದಾತ(Employer) ಸಂಸ್ಥೆಗಳು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದರೂ ನೌಕರರ ಗ್ರಾಚ್ಯುಟಿಗೆ ರಕ್ಷಣೆ ದೊರಕಲಿದೆ.ಬಹುತೇಕ ಸಂದರ್ಭಗಳಲ್ಲಿ ನೌಕರರು ಗ್ರಾಚ್ಯುಯಿಟಿಯಿಂದ ವಂಚಿತರಾಗುತ್ತಿದ್ದರು.ಈ ರೀತಿಯ ಸಂಕಷ್ಟದಿಂದ ನೌಕರರನ್ನು ರಕ್ಷಿಸಲು ‘ಗ್ರಾಚ್ಯುಯಿಟಿ ಪಾವತಿ ಕಾಯ್ದೆ–1972’(Payment of Gratuity Act)ಕ್ಕೆ 1987ರಲ್ಲಿ ತಿದ್ದುಪಡಿ ತಂದಿದ್ದ ಕೇಂದ್ರ ಸರ್ಕಾರ, ಗ್ರಾಚ್ಯುಯಿಟಿ ಮೊತ್ತಕ್ಕೆ ವಿಮಾ ರಕ್ಷಣೆ (Insurance coverage)ಒದಗಿಸುವುದನ್ನು ಕಡ್ಡಾಯಗೊಳಿಸಿತ್ತು. ಆದರೆ, ಈ ತಿದ್ದುಪಡಿಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ನಿಯಮಗಳನ್ನು ರೂಪಿಸಿರಲಿಲ್ಲ.ಈಗ ನಿಯಮವು ಜಾರಿಯಾದ ದಿನದಿಂದ ಎರಡು ತಿಂಗಳೊಳಗೆ ಎಲ್ಲ ಉದ್ಯೋಗದಾತರು ತಮ್ಮ ನೌಕರರ ಗ್ರಾಚ್ಯುಯಿಟಿ ಮೊತ್ತಕ್ಕೆ ಭಾರತೀಯ ಜೀವ ವಿಮಾ ನಿಗಮ (LIC) ಅಥವಾ ಅದೇ ರೀತಿಯ ಕಾನೂನುಬದ್ಧ ವಿಮಾ ಕಂಪನಿಗಳಿಂದ ಪಾಲಿಸಿ ಖರೀದಿಸುವುದು ಕಡ್ಡಾಯ. ಆ ಬಳಿಕ ತಮ್ಮ ಎಲ್ಲ ನೌಕರರ ಹೆಸರಿನೊಂದಿಗೆ ವಿಮಾ ಕಂತು ಪಾವತಿಸಬೇಕು ಎಂಬ ಅಂಶ ಕಡ್ಡಾಯ ಗ್ರಾಚ್ಯುಯಿಟಿ ವಿಮಾ ನಿಯಮಗಳಲ್ಲಿದೆ.ರಾಜ್ಯದಲ್ಲಿ 60 ಲಕ್ಷದಿಂದ 70 ಲಕ್ಷ ನೌಕರರಿಗೆ ಹೊಸ ನಿಯಮದಿಂದ ಅನುಕೂಲ ಆಗಲಿದೆ.ವಿಮೆಯನ್ನು ಪಡೆದ ದಿನಾಂಕದಿಂದ ಮೂವತ್ತು ದಿನಗಳ ಒಳಗಾಗಿ, ನಿಗದಿತ ಸ್ವರೂಪದಲ್ಲಿ ನಿಯಂತ್ರಣ ಪ್ರಾಧಿಕಾರದಲ್ಲಿ ನೋಂದಣಿಯನ್ನು ಪಡೆಯಲು ಉದ್ಯೋಗದಾತನು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಇದಲ್ಲದೆ, ವಿಮೆ ಮಾಡಿದ ನೌಕರರು ಅಥವಾ ಪಾಲಿಸಿಗಳು(Policy) ಅಥವಾ ಯಾವುದೇ ಇತರ ಸಂಬಂಧಿತ ಮಾಹಿತಿಯಲ್ಲಿ ಬದಲಾವಣೆ ಉಂಟಾದಾಗ, ಉದ್ಯೋಗದಾತರು ನಿಯಂತ್ರಣ ಪ್ರಾಧಿಕಾರಕ್ಕೆ ವಿವರಗಳನ್ನು ಒದಗಿಸಬೇಕಾಗುತ್ತದೆ.

Related News

spot_img

Revenue Alerts

spot_img

News

spot_img