28.2 C
Bengaluru
Friday, September 20, 2024

ವಿಶ್ವ ನಗರಗಳ ಸಂಸ್ಕೃತಿ ವೇದಿಕೆಯಲ್ಲಿ ಸದಸ್ಯತ್ವ ಪಡೆದ ಭಾರತದ ಮೊದಲ ನಗರ ಬೆಂಗಳೂರು

ಬೆಂಗಳೂರು, ಜು. 28 : ವಿಶ್ವ ನಗರಗಳ ಸಂಸ್ಕೃತಿ ವೇದಿಕೆಗೆ ಬೆಂಗಳೂರು ನಗರ ಸೇರ್ಪಡೆಗೊಂಡಿದೆ. ಈ ಮೂಲಕ ಡಬ್ಲ್ಯುಸಿಸಿಎಫ್ ಸದಸ್ಯತ್ವ ಪಡೆದ ಭಾರತದ ಮೊದಲ ನಗರ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಇದು ಬೆಂಗಳೂರು ನಗರಕ್ಕೆ ಸಂದ ಮತ್ತೊಂದು ಕಿರೀಟ. ಬೆಂಗಳುರು ನಗರ ಹಲವು ಐಟಿ ಹಬ್‌ ಎಂದೇ ಹೆಸರು ಪಡೆದಿದ್ದು, ಇದರೊಂದಿಗೆ ಸಂಸ್ಕೃತಿ ಹಾಗೂ ಸೃಜನಾತ್ಮಕತೆಯೂ ಸಮೃದ್ಧೀಯಾಗಿದೆ. ಇಲ್ಲಿನ ಜನ ಸಂಸ್ಕೃತಿ, ಆರ್ಥಿಕತೆ, ಆಹಾರ, ಕಾಸ್ಮೋಪಾಲಿಟನ್‌, ವಸ್ತು ಸಂಗ್ರಹಾಲಯ ಸೇರಿದಂತೆ ಪ್ರತಿಯೊಂದರಲ್ಲೂ ಮುಂದಿದೆ ಎಂದು ಹೇಳಲಾಗಿದೆ.

ಎಲ್ಲಾ ಬಗೆಯ ಜನರಿಗೂ ಜಾಗ ನೀಡುವ ಬೆಂಗಳೂರು ನಗರ ಮಹಾನಗರವಾಗಿದೆ. ಬೆಂಗಳೂರಿನಲ್ಲಿ ಬೆಳೆಯಲು ಹಾಗೂ ಇತರರನ್ನು ಕೈ ಹಿಡಿದು ನಡೆಸಲು ಕೂಡ ಅದ್ಭುತವಾದ ಜಾಗವಾಗಿದೆ. ಇನ್ನು ಡಬ್ಲ್ಯುಸಿಸಿಎಫ್ ಅನ್ನು 2012 ರಲ್ಲಿ ಲಂಡನ್‌ನ ಮೇಯರ್ ಸ್ಥಾಪನೆ ಮಾಡಿದರು. ಇದರ ಮೂಲಕ 40 ನಗರಗಳನ್ನು ಸಂಪರ್ಕಿಸಲಿದ್ದು, ಭವಿಷ್ಯದ ಸಮೃದ್ಧಿಗಾಗಿ ನಗರಗಳ ಸಾಂಸ್ಕೃತಿಕ ಮಹತ್ವವನ್ನು ಹಂಚಿಕೊಳ್ಳುತ್ತದೆ. ಈ ಪಟ್ಟಿಯಲ್ಲಿ ಬೆಂಗಳೂರು 41ನೇ ಸದಸ್ಯತ್ವವನ್ನು ಪಡೆದಿದ್ದರೆ, ನ್ಯೂಯಾರ್ಕ್, ಪ್ಯಾರಿಸ್, ಟೋಕಿಯೋ, ದುಬೈ, ಲಂಡನ್ ಸೇರಿದಂತೆ ಹಲವು ದೇಶಗಳ 40 ನಗರಗಳು ಸೇರಿಕೊಂಡಿವೆ.

ಇನ್ನು ಅನ್‌ ಬಾಕ್ಸಿಂಗ್‌ ಬಿಎಲ್‌ ಆರ್ ಫೌಂಡೇಶನ್ ಸಹಯೋಗದೊಂದಿಗೆ ಡಬ್ಲ್ಯುಸಿಸಿಎಫ್ ಕಾರ್ಯ ನಿರ್ವಹಿಸಲಿದೆ. ಡಬ್ಲ್ಯುಸಿಸಿಎಫ್ ಭಾಗವಾಗಿ ಡಿಸೆಂಬರ್‌ ತಿಂಗಳಿನಲ್ಲಿ ಬೆಂಗಳೂರು ಉತ್ಸವವನ್ನು ನಡೆಸುವ ಚಿಂತನೆ ನಡೆಸಲಾಗಿದೆ. ಅನ್‌ ಬಾಕ್ಸಿಂಗ್‌ ಬಿಎಲ್‌ ಆರ್‌ ಸಂಸ್ಥಾಪಕ ಹಾಗೂ ಅಧ್ಯ ಆಗಿರುವ ಪ್ರಶಾಂತ್ ಪ್ರಕಾಶ್ ಅವರು ಬೆಂಗೂರು ಉತ್ಸವವನ್ನು ಡಬ್ಲ್ಯುಸಿಸಿಎಫ್ ಸಹಯೋಗದೊಂದಿಗೆ ನಡೆಸಲಿದೆ.

Related News

spot_img

Revenue Alerts

spot_img

News

spot_img