21 C
Bengaluru
Sunday, October 27, 2024

ಭಾರತೀಯರು 2023 ರಲ್ಲಿ ಈ 10 ರಾಷ್ಟ್ರಗಳಿಗೆ ವೀಸಾ ಮುಕ್ತವಾಗಿ ಭೇಟಿ ನೀಡಬಹುದು!

ರಜಾ ತೆಗೆದುಕೊಂಡು ವಿದೇಶಗಳಿಗೆ ಹೋಗೋ ಪ್ಲಾನ್ ಮಾಡೋರಿಗೆ ಇಲ್ಲಿದೆ ಗುಡ್‌ನ್ಯೂಸ್. ನೀವು ಈ ವರ್ಷ ಹೊರದೇಶಗಳಿಗೆ ಹೋಗೋ ಐಡಿಯಾ ಇಟ್ಕೊಂಡಿದ್ರೆ ತಪ್ಪದೇ ಈ ಸುದ್ದಿ ಓದಿ. ಯಾಕಂದ್ರೆ ಇಲ್ಲಿರೋ 10 ದೇಶಗಳಿಗೆ ನೀವು ಭಾರತೀಯ ಪಾಸ್‌ಪೋರ್ಟ್‌ ಹೊಂದಿದ್ದರೆ 2023ರಲ್ಲಿ ವೀಸಾ ಇಲ್ಲದೇ ಪ್ರಯಾಣ ಬೆಳೆಸಬಹುದು. ಹಾಗಿದ್ದರೆ ವೀಸಾ ಮುಕ್ತವಾಗಿ ಪ್ರಯಾಣಿಸಬಹುದಾದ ಸುಂದರವಾದ ಆ 10 ದೇಶಗಳು ಯಾವುದು? ಇಲ್ಲಿದೆ ಮಾಹಿತಿ…

ಬಾರ್ಬಡೋಸ್‌
ಬಾರ್ಬಡೋಸ್ ಸುಂದರವಾದ ಕೆರಿಬಿಯನ್ ದೇಶಗಳಲ್ಲಿ ಒಂದಾಗಿದೆ. ಉಷ್ಣವಲಯದ ದ್ವೀಪದ ವಿಹಾರಕ್ಕೆ ಉತ್ಸುಕರಾಗಿರುವವರಿಗೆ ಸ್ಥಳವಾಗಿದೆ.ಇಲ್ಲಿ ಐಷಾರಾಮಿ ಹೋಟೆಲ್ಗಳು, ಬಿಳಿ ಮರಳುಗಳು ಸೇರಿದಂತೆ ಕಣ್ಣುಕುಕ್ಕುವ ಪ್ರವಾಸಿ ಆಕರ್ಷಣೆಗಳಿವೆ. ಇಲ್ಲಿ 90 ದಿನಗಳವರೆಗೆ ಯಾವುದೇ ವೀಸಾ ಅಗತ್ಯವಿಲ್ಲದೆ ಉಳಿಯಬಹುದು.ಬಿಳಿ ಮರಳುಗಳು ಮತ್ತು ಮರೆಯಲಾಗದ ಆತಿಥ್ಯ ಇವಲ್ಲವೂ ನಿಮ್ಮನ್ನು ಇಲ್ಲೇ ಉಳಿಯುವಂತೆ ಮಾಡುತ್ತದೆ.
ಭೂತಾನ್‌
14 ದಿನಗಳ ಕಾಲ ಯಾವುದಾದರೂ ದೇಶಕ್ಕೆ ಟ್ರಿಪ್ ಹೋಗ್ಬೇಕು ಅನ್ನೋ ಯೋಜನೆಯನ್ನು ನೀವು ಹಾಕಿಕೊಂಡಿದ್ದರೆ ಖಂಡಿತವಾಗಿಯೂ ಭೂತಾನ್ ದೇಶಕ್ಕೆ ಹೋಗಬಹುದು.ವೀಸಾದ ಅಗತ್ಯವಿಲ್ಲ.ಭೂತಾನ್ ಪ್ರವಾಸ ಎಂತವರನ್ನು ಬೆರಗುಗೊಳಿಸುತ್ತದೆ.ಭೂತಾನ್ ವಿಶ್ವದ ಅತ್ಯಂತ ಸಂತೋಷದಾಯಕ ದೇಶಗಳ ಸಾಲಿನಲ್ಲಿ ಮೊದಲನೇ ಸ್ಥಾನ ಪಡೆದುಕೊಂಡಿದೆ. ಯಾಕೆ ಅನ್ನೋದನ್ನು ತಿಳಿಯಲು ಭೂತಾನ್ ಪ್ರವಾಸ ಹೋಗಿ ಬರಬಹುದು.ಭಾರತದ ಅತ್ಯಂತ ಸುಂದರವಾದ ನೆರೆಹೊರೆಯ ದೇಶಗಳ ಪೈಕಿ ಭೂತಾನ್ ಕೂಡ ಒಂದು.

ಫಿಜಿ

ಭಾರತೀಯರು ವೀಸಾ ಇಲ್ಲದೆಯೇ ಬರೋಬ್ಬರಿ 120 ದಿನಗಳ ಕಾಲ ನೀವು ಫಿಜಿ ದೇಶದಲ್ಲಿ ಸುತ್ತಾಡಬಹುದು.ಫಿಜಿ ಸುಂದರವಾದ ಭೂದೃಶ್ಯಗಳು, ಹವಳಗಳು, ಸರೋವರಗಳನ್ನು ಹೊಂದಿದೆ.ಫಿಜಿ ದೇಶಕ್ಕೆ ಪ್ರವಾಸ ಪ್ರಿಯರು ಖಂಡಿತವಾಗಿಯೂ ಒಂದು ಸಲ ಹೋಗಿ ಬರಬಹುದು.ಕಣ್ಣು ಕೋರೈಸುವ ಭೂದೃಶ್ಯಗಳು, ಹವಳಗಳು, ಆಕರ್ಷಿಸುವ ಕೆರೆಗಳು ಸೇರಿದಂತೆ ಇನ್ನಿತರ ಆಕರ್ಷಕ ಸ್ಥಳಗಳಿಂದ ಫಿಜಿ ದೇಶವು ನಿಮ್ಮನ್ನು ಮೈಮರೆಯುವಂತೆ ಮಾಡುತ್ತದೆ.

4.ಜಮೈಕಾ
ಜಮೈಕಾ: ಜಮೈಕಾ ದೇಶ ಭಾರತೀಯ ಪಾಸ್‌ಪೋರ್ಟ್‌ ಹೊಂದಿರುವವರಿಗೆ ವೀಸಾಮುಕ್ತ ಪ್ರಯಾಣವನ್ನು ಅನುಮತಿಸುವ ಮತ್ತೊಂದು ದೇಶವಾಗಿದೆ. ಅತ್ಯಾಕರ್ಷಕ ಪರ್ವತಗಳು, ಮಳೆ ಕಾಡುಗಳು, ಶಾಂತ ಸ್ವಭಾವದ ಕಡಲ ತೀರಗಳು ನಿಮ್ಮನ್ನು ಮತ್ತೆ ಮತ್ತೆ ಜಮೈಕಾಗೆ ಬರುವಂತೆ ಮಾಡುತ್ತದೆ. ಇದರ ಜೊತೆಗೆ ಕೆಲವು ಐಷಾರಾಮಿ ಪ್ರದೇಶಗಳು ಕೂಡ ನಿಮ್ಮನ್ನು ಆಕರ್ಷಿಸುತ್ತದೆ.

ಕಝಾಕಿಸ್ತಾನ್‌
ಇಲ್ಲಿ ಅಲ್ಮಾಟಿ, ಅದ್ಭುತವಾದ ವಾಸ್ತುಶಿಲ್ಪಗಳನ್ನು ಹೊಂದಿರುವ ತಾಣಗಳು, ಮನೋಹರವಾದ ದೃಶ್ಯಾವಳಿಗಳಿಗೆ ಹೆಚ್ಚು ಹೆಸರುವಾಸಿಯಾಗಿದೆ.14 ದಿನಗಳವರೆಗೆ ವೀಸಾಮುಕ್ತ ಪ್ರಯಾಣವನ್ನು ಮಾಡಬಹುದು.
6.ಮಾರಿಷಸ್: ಭಾರತೀಯರನ್ನು ಆತ್ಮೀಯವಾಗು ಸ್ವಾಗತಿಸುವ ಮಾರಿಷಸ್‌ನಲ್ಲಿ ಬೆರಗುಗೊಳಿಸುವ ಕಡಲತೀರಗಳು, ಉಷ್ಣವಲಯದ ಆಹ್ಲಾದಕರ ವಾತಾವರಣ ನಿಮ್ಮ ಮನಸ್ಸನ್ನು ಮತ್ತಷ್ಟು ಹಿತಗೊಳಿಸುತ್ತದೆ. ಒಂದೊಳ್ಳೆಯ ಪ್ರವಾಸ ಅನುಭವ ಪಡೆಯಬೇಕಿದ್ದರೆ ಮಾರಿಷಸ್‌ಗೆ ಟ್ರಿಪ್ ಪ್ಲಾನ್ ಹಾಕಿ.

ನೇಪಾಳ
ನೇಪಾಳ ಭಾರತದ ನೆರೆ ರಾಷ್ಟ್ರ.ಹಿಮಾಲಯದ ಅದ್ಭುತವಾದ ನೋಟವನ್ನು, ದೃಶ್ಯಾವಳಿಗಳನ್ನು ಕಣ್ತುಂಬಿಕೊಳ್ಳಲು ನೇಪಾಳ ಬೆಸ್ಟ್. ಅಲ್ಲದೆ, ನೇಪಾಳ ಕೂಡ ಭಾರತೀಯರಿಗೆ ವೀಸಾ ಮುಕ್ತ ಪ್ರಯಾಣಕ್ಕೆ ಅನುಮತಿ ನೀಡಿದೆ.ಚಾರಣಕ್ಕೂ ನೇಪಾಳ ಹೇಳಿ ಮಾಡಿಸಿದ ದೇಶ. ಎವರೆಸ್ಟ್‌ ಹತ್ತಬೇಕಿದ್ದರೆ ನೇಪಾಳಕ್ಕೆ ಹೋಗಬಹುದು.

ಸೈಂಟ್ ಕಿಟ್ಸ್‌ ಮತ್ತು ನೆವಿಸ್: ಇವು ಅವಳಿ ದ್ವೀಪವಾಗಿದ್ದು, ನಿರ್ಮಲವಾದ ಕಡಲತೀರಗಳನ್ನು ಹೊಂದಿದೆ.90 ದಿನಗಳ ಕಾಲ ವೀಸಾ ಇಲ್ಲದೇ ಟೂರ್ ಮಾಡಬೇಕು ಅನ್ನೋ ಪ್ಲಾನ್ ನೀವು ಹಾಕಿಕೊಂಡಿದ್ದರೆ ಖಂಡಿತವಾಗಿಯೂ ಸೈಂಟ್ ಕಿಟ್ಸ್‌ ಮತ್ತು ನೆವಿಸ್‌ಗೆ ಭೇಟಿ ನೀಡಬಹುದು. ಅವಳಿ ದ್ವೀಪ ರಾಷ್ಟ್ರವಾಗಿರುವ ಸೈಂಟ್ ಕಿಟ್ಸ್‌ ಮತ್ತು ನೆವಿಸ್ ಪ್ರಪಂಚದ ಅತ್ಯಂತ ಸುಂದರ ಕಡಲತೀರಗಳ ಪೈಕಿ ಮೇಲ್ಪಂಕ್ತಿಯಲ್ಲಿ ನಿಲ್ಲುತ್ತದೆ. ಪ್ರೇಮಿಗಳಿಗಂತೂ ಇಲ್ಲಿ ಸ್ವರ್ಗ ಸದೃಶ್ಯವಾದ ಅನುಭವಗಳು ಉಂಟಾಗುತ್ತದೆ.

ಸೈಂಟ್ ವಿನ್ಸೆಂಟ್ ಮತ್ತು ಗ್ರೆನೆಡೈನ್ಸ್:ಐಷಾರಾಮಿ ಪ್ರವಾಸಕ್ಕೆ ಇದೊಂದು ಸ್ವರ್ಗವೇ ಸರಿ. ಈ ದೇಶದಲ್ಲಿ ನೀವು ವೀಸಾದ ಅಗತ್ಯವಿಲ್ಲದೆ ಸುಮಾರು ಒಂದು ತಿಂಗಳ ಕಾಲ ಸುತ್ತಾಡಬಹುದು. ಹಡಗುಗಳಲ್ಲಿ ಪ್ರಯಾಣಿಸುವುದುನ್ನು ನೀವು ಇಷ್ಟಪಡುವವರಾಗಿದ್ದರೆ ಖಂಡಿತವಾಗಿಯೂ ಈ ದೇಶವನ್ನು ಮಾತ್ರ ಮಿಸ್ ಮಾಡಿಕೊಳ್ಳಲೇಬೇಡಿ. ಇಲ್ಲಿ ಹಲವಾರು ಸುಂದರವಾದ ದ್ವೀಪಗಳಿದ್ದು, ಇಲ್ಲಿ ಉಳಿದುಕೊಳ್ಳಲು ನೀವು ಮುಂಚಿತವಾಗಿಯೂ ಬುಕ್ ಮಾಡಿಕೊಳ್ಳಬಹುದು.

ಟ್ರಿನಿಡಾಡ್ ಮತ್ತು ಟೊಬ್ಯಾಗೋ: ವಿಶ್ವದ ಅನೇಕ ದೇಶಗಳನ್ನು ಸುತ್ತುವ ಹವ್ಯಾಸ ನೀವು ಹೊಂದಿದ್ದರೆ ದ್ವೀಪ ರಾಷ್ಟ್ರವಾದ ಟ್ರಿನಿಡಾಡ್ ಮತ್ತು ಟೊಬ್ಯಾಗೋ ಅನ್ನು ಖಂಡಿತವಾಗಿಯೂ ಮಿಸ್ ಮಾಡಿಕೊಳ್ಳಬೇಡಿ. ಪ್ರಕೃತಿ ಮತ್ತು ವನ್ಯಜೀವಿ ಪ್ರಿಯರಿಗೆ ಅತ್ಯದ್ಭುತವಾದ ಪ್ರದೇಶವಾದ ಇಲ್ಲಿ ವಿಶ್ವದ ನಾನಾ ಬಗೆಯ ವೈವಿಧ್ಯಮಯ ಪಕ್ಷಿಗಳನ್ನು ಕಾಣಲು ಸಾಧ್ಯವಿದೆ. ಸುಮಾರು 90 ದಿನಗಳ ಕಾಲ ಇಲ್ಲಿ ನೀವು ವೀಸಾ ಇಲ್ಲದೆ ಉಳಿದುಕೊಳ್ಳಬಹುದು.ಟ್ರಿನಿಡಾಡ್ ಮತ್ತು ಟೊಬಾಗೊ ದ್ವೀಪ ರಾಷ್ಟ್ರಗಳು ಬೆಸ್ಟ್ ಎಂದೇ ಹೇಳಬಹುದು.

Related News

spot_img

Revenue Alerts

spot_img

News

spot_img