21.4 C
Bengaluru
Saturday, July 27, 2024

ಮಹಿಳಾ ಸಮ್ಮಾನ್‌ ಖಾತೆ ತೆರೆಯಲು ಈಗಲೇ ಅರ್ಜಿ ಹಾಕಿ: ಸರ್ಕಾರದ ಲಾಭ ಪಡೆಯಿರಿ..

ಬೆಂಗಳೂರು, ಏ. 03 : 2023-24ರ ಕೇಂದ್ರ ಬಜೆಟ್ ನಲ್ಲಿ ಮಹಿಳಾ ಸಮ್ಮಾನ್ ಉಳಿತಾಯ ಪತ್ರದ ಬಗ್ಗೆ ಘೋಷಣೆ ಮಾಡಲಾಗಿತ್ತು. ಏ. 1ರಿಂದಲೇ ಅಂಚೆ ಕಚೇರಿಗಳಲ್ಲಿ ಈ ಉಳಿತಾಯ ಯೋಜನೆ ಪ್ರಾರಂಭಗೊಂಡಿದೆ. ಮಹಿಳೆಯರ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ ಇದನ್ನು ಪ್ರಾರಂಬಿಸಿದೆ. ಮಹಿಳಾ ವಿಕಾಸ ಪತ್ರಕ್ಕೆ ಮೆಚ್ಯುರಿಟಿ ಅವಧಿಯನ್ನು 2 ವರ್ಷಗಳಿಗೆ ಕೇಂದ್ರ ಸರ್ಕಾರ ವಿಧಿಸಲಾಗಿದೆ. ಹಾಗಾದರೆ ಬನ್ನಿ ಯಾರು ಮಹಿಳಾ ಸಮ್ಮಾನ್‌ ಉಳಿತಾಯ ಪತ್ರವನ್ನು ತೆರೆಯಬಹುದು..? ಇದಕ್ಕೆ ಅರ್ಹತೆಗಳು ಏನಿರಬೇಕು ಎಂಬ ಎಲ್ಲಾ ವಿಚಾರಗಳ ಬಗ್ಗೆ ಮಾಹಿತಿ ಪಡೆಯೋಣ.

ಮಹಿಳಾ ಸಮ್ಮಾನ್ ಉಳಿತಾಯ ಪತ್ರವನ್ನು ಪ್ರತಿಯೊಬ್ಬ ಭಾರತೀಯ ಮಹಿಳೆಯರು ತೆರೆಯಬಹುದಾಗಿದೆ. ಬಾಲಕಿಯರಿಗೆ ಅವರ ವಾರಸುದಾರರು ಖಾತೆಯನ್ನು ತೆರೆಯಬಹುದು. ಈ ಯೋಜನೆಯಲ್ಲಿ ಒಂದು ಬಾರಿ ಮಾತ್ರವೇ ಠೇವಣಿ ಮಾಡಲು ಅವಕಾಶವನ್ನು ನೀಡಲಾಗಿದೆ. ಹಾಗಾಗಿ, ಎಷ್ಟು ಠೇವಣಿ ಮಾಡಬೇಕು ಎಂಬುದನ್ನು ಮಹಿಳೆಯರು ಮೊದಲೇ ನಿರ್ಧಾರ ಮಾಡಬೇಕು. ಲೆಕ್ಕಾಚಾರ ಹಾಕಿ, ಅನುಕೂಲವನ್ನು ನೋಡಿಕೊಂಡು, ಅದಕ್ಕೆ ತಕ್ಕಂತೆ ಠೇವಣಿ ಮಾಡಬೇಕು. ಮಹಿಳಾ ಸಮ್ಮಾನ್ ಖಾತೆಯನ್ನು ತೆರೆದ ಬಳಿಕ ಕನಿಷ್ಠ 1,000 ರೂ.ಗಳನ್ನು ಠೇವಣಿ ಮಾಡಲೇಬೇಕು. ಗರಿಷ್ಠ 2 ಲಕ್ಷ ರೂ.ಗಳವರೆಗೆ ಠೇವಣಿ ಮಾಡಲು ಅವಕಾಶವಿದೆ.

ಈ ಯೋಜನೆಗೆ ವಾರ್ಷಿಕ ಶೇ. 7.5ರಷ್ಟು ಬಡ್ಡಿದರವನ್ನು ಸರ್ಕಾರ ನಿಗದಿ ಮಾಡಿದೆ. ಇದರ ಬಡ್ಡಿಯ ಮೊತ್ತವನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಆದರೆ, ಬಡ್ಡಿಯನ್ನು ವರ್ಗಾಯಿಸಲು ಕೆಲ ನಿಬಂಧನೆಗಳು ಇವೆ. ಇಲ್ಲದೇ ಹೋದಲ್ಲಿ ಅಂಚೆ ಕಚೇರಿ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. 2025ರ ಮಾ. 31ರೊಳಗೆ ಅರ್ಜಿ ನಮೂನೆ – 1 ಅನ್ನು ಸಲ್ಲಿಸಬಹುದು. ಈ ಮೂಲಕ ಖಾತೆಯನ್ನು ತೆರೆಯಲು ಮಹಿಳೆಯರಿಗೆ ಅವಕಾಶವಿದೆ. 2 ವರ್ಷಗಳ ಬಳಿಕ ಈ ಯೋಜನೆ ಮೆಚ್ಯುರಿಟಿ ಹೊಂದಲಿದ್ದು, ಹಣವನ್ನು ಅರ್ಜಿ ನಮೂನೆ -2 ಅನ್ನು ಸಲ್ಲಿಸಿ ಪಡೆಯಬಹುದು.

ಇನ್ನು ಮೆಚ್ಯೂರಿಟಿ ಆದ ಬಳಿಕ ಖಾತೆಯಲ್ಲಿರುವ ಹಣದ ಪೈಸೆಗಳ ಲೆಕ್ಕಾಚಾರವನ್ನು ಸರಿಸಮಾನವಾಗಿ ವಿತರಿಸಲು ಯೋಜಿಸಿದೆ. ಅಂದರೆ, 50 ಪೈಸೆಗಿಂತ ಹೆಚ್ಚಿಗೆ ಇದ್ದರೆ ಒಂದು ರೂಪಾಯಿ ಕೊಡಲು ಇಲ್ಲವೇ 50 ಪೈಸೆಗಿಂತ ಕಡಿಮೆ ಇದ್ದಲ್ಲಿ ಒಂದು ರೂಪಾಯಿ ಕಡಿಮೆ ಕೊಡುತ್ತದೆ. ಈನ್ನು ಖಾತೆಯನ್ನು ಮೆಚ್ಯುರಿಟಿಗೂ ಮುನ್ನವೇ ನಿಷ್ಕ್ರಿಯಗೊಳಿಸಲು ಸಾಧ್ಯವಿಲ್ಲ. ಆದರೆ, ಖಾತೆದಾರರು ಮರಣ ಹೊಂದಿದರೆ, ಇಲ್ಲವೇ ಗಂಭೀರ ಕಾಯಿಲೆಗೆ ತುತ್ತಾದರೆ ಹಾಗೂ ಬಾಲಕಿಯರ ವಾರಸುದಾರರು ಸಾವನ್ನಪ್ಪಿದರೆ ಮಾತ್ರವೇ ಖಾತೆಯನ್ನು ನಿಷ್ಕ್ರಿಯಗೊಳಿಸಲು ಅವಕಾಶವಿದೆ. ಖಾತೆಯನ್ನು ನಿಷ್ಕ್ರಿಯಗೊಳಿಸಿ, ಸಂಪೂರ್ಣ ಹಣವನ್ನು ಡ್ರಾ ಮಾಡಬಹುದಾಗಿದೆ.

Related News

spot_img

Revenue Alerts

spot_img

News

spot_img