25.8 C
Bengaluru
Friday, November 22, 2024

ಅಕ್ರಮ ಆಸ್ತಿ : ಅಜಿತ್ ರೈ ಕೋಟ್ಯಂತರ ರೂಪಾಯಿ ಮೌಲ್ಯದ ಬೇನಾಮಿ ಆಸ್ತಿ ತನಿಖೆಗೆ ಎಸ್ಐಟಿ ರಚನೆ.

ಬೆಂಗಳೂರು : ವ್ಯಕ್ತಿಯೊಬ್ಬನ ಅಕ್ರಮ ಆಸ್ತಿ ಪ್ರಕರಣದ ತನಿಖೆಗೆ ಲೋಕಾಯುಕ್ತದಲ್ಲಿ ಎಸ್‌ಐಟಿ ರಚನೆಯಾಗಿರುವುದು ಇದೇ ಮೊದಲು.

ಐನೂರು ಕೋಟಿ ರೂ.ಗೂ ಅಧಿಕ ಮೌಲ್ಯದ ಬೇನಾಮಿ ಆಸ್ತಿ ಹೊಂದಿರುವ ಆರೋಪದ ಮೇಲೆ ಬಂಧಿತರಾಗಿರುವ ಕೆ.ಆರ್.ಪುರ ತಾಲೂಕು ತಹಶೀಲ್ದಾರ್ ಅಜಿತ್ ಕುಮಾರ್ ರೈ ವಿರುದ್ಧದ ಪ್ರಕರಣಗಳ ತನಿಖೆಗೆ ಲೋಕಾಯುಕ್ತ ಪೊಲೀಸ್ ಇಲಾಖೆಯಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ ಎಂದು ತಿಳಿದು ಬಂದಿದೆ.

ಲೋಕಾಯುಕ್ತ ಬೆಂಗಳೂರು ನಗರ ಘಟಕದ ಡಿವೈಎಸ್ಪಿ ಪ್ರಮೋದ್ ಕುಮಾರ್ ನೇತೃತ್ವದ ಎಸ್ಐಟಿ ತಂಡದಲ್ಲಿ ಇಬ್ಬರು ಡಿವೈಎಸ್ ಪಿಗಳು ಹಾಗೂ ನಾಲ್ವರು ಇನ್ಸ್ ಪೆಕ್ಟರ್ ಗಳ ತಂಡ ರಚನೆಯಾಗಿದೆ.

ಕೋಟ್ಯಂತರ ರೂ. ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಬಂಧಿತರಾಗಿರುವ ಅಜಿತ್ ಕುಮಾರ್ ರೈ ಅವರನ್ನು 7 ದಿನಗಳ ಕಾಲ ಲೋಕಾಯುಕ್ತ ಕಸ್ಟಡಿಗೆ ಒಪ್ಪಿಸಿ ನಗರದ 78ನೇ ಸಿಸಿ ನ್ಯಾಯಾಲಯ ಶುಕ್ರವಾರ ಆದೇಶಿಸಿದೆ.

ಜೂನ್ 28ರಂದು ಲೋಕಾಯುಕ್ತ ಪೊಲೀಸರು ಅಜಿತ್ ರೈ ಅವರ ಮನೆ, ಕಚೇರಿ ಸೇರಿದಂತೆ 10 ಕಡೆ ದಾಳಿ ನಡೆಸಿ ರಾತ್ರಿವರೆಗೂ ತಪಾಸಣೆ ಮುಂದುವರಿಸಿ ಗುರುವಾರ ಬೆಳಗ್ಗೆ ಬಂಧಿಸಿದ್ದರು.

ಶೋಧ ಕಾರ್ಯ ಇನ್ನೂ ಅಂತಿಮ ಹಂತಕ್ಕೆ ಬಂದಿಲ್ಲ. ಲೋಕಾಯುಕ್ತ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಜತೆಗೆ, ಮುಟ್ಟುಗೋಲು ಹಾಕಿಕೊಂಡಿರುವ ಪರಂಪರೆ ಮತ್ತು ಸ್ಥಿರಾಸ್ತಿಗಳ ಮೌಲ್ಯಮಾಪನ ನಡೆಸುತ್ತಿದ್ದಾರೆ.

ಅದೂ ಅಲ್ಲದೆ ತಂದೆಯ ಮರಣದ ನಂತರ ಕಂದಾಯ ಇಲಾಖೆಯಲ್ಲಿ ಅನುಕಂಪದ ಆಧಾರದ ಮೇಲೆ ಎಫ್ ಡಿಎ ಹುದ್ದೆ ಪಡೆದಿದ್ದ ಅಜಿತ್ ಕ್ರಮೇಣ ತಹಶೀಲ್ದಾರ್ ಹುದ್ದೆಗೆ ಬಡ್ತಿ ಹೊಂದಿದ್ದರು. ತಮ್ಮ ವೃತ್ತಿ ಜೀವನದ ಬಹುಪಾಲು ದೊಡ್ಡಬಳ್ಳಾಪುರ, ದೇವನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದಿದ್ದಾರೆ. ಇದೇ ಭಾಗದಲ್ಲಿ 150 ಎಕರೆಗೂ ಹೆಚ್ಚು ಜಮೀನು ಬೇನಾಮಿ ಹೆಸರಿನಲ್ಲಿದೆ. ಇಲ್ಲಿಯವರೆಗೆ, 150 ರಿಂದ 160 ಕಾರ್ಯಗಳು ಅವರ ನಿವಾಸಗಳಲ್ಲಿ 200 ಎಕರೆ ಭೂಮಿಯನ್ನು ಸ್ವೀಕರಿಸಲಾಗಿದೆ. ಈ ಜಮೀನುಗಳ ಮೌಲ್ಯ ಸುಮಾರು 100 ಕೋಟಿ ರೂ. ದಾಟಬಹುದು ಹೆಚ್ಚಿನ ಆಸ್ತಿ ಅಜಿತ್ ಆಪ್ತ ಗೌರವ್ ಶೆಟ್ಟಿ ಹೆಸರಿನಲ್ಲಿದೆ ಎನ್ನಲಾಗಿದೆ.

Related News

spot_img

Revenue Alerts

spot_img

News

spot_img