26.3 C
Bengaluru
Friday, October 4, 2024

ಅತೀ ಹೆಚ್ಚು ಸಂಬಳ ಬೇಕಾ..? ಹಾಗಿದ್ದರೆ ಬೆಂಗಳೂರಿಗೆ ಬನ್ನಿ ಎನ್ನುತ್ತಿದೆ ಈ ಸರ್ವೆ

ಬೆಂಗಳೂರು, ಮೇ. 26 : ಭಾರತದಲ್ಲಿ ಇಷ್ಟು ದಿನ ಒಂದೊಂದು ನಗರಗಳು ಒಂದೊಂದು ಕಾರಣಗಳಿಗೆ ನಂಬರ್ ಒನ್ ಆಗಿರುತ್ತಿತ್ತು. ಆದರೆ ಇತ್ತೀಚೆಗೆ ಬೆಂಗಳೂರು ಪ್ರತಿಯೊಂದು ವಿಚಾರದಲ್ಲೂ ನಂಬರ್ ಒನ್ ಸ್ಥಾನವನ್ನು ಪಡೆದುಕೊಳ್ಳುತ್ತಿದೆ. ಬೆಂಗಳೂರು ತೀರಾ ಕಾಸ್ಟ್ಲಿ ನಗರವಾಗಿದೆ. ಅದಕ್ಕೆ ಸರಿಯಾಗುವಂತೆ ಬೆಂಗಳೂರಿನಲ್ಲಿ ಇಡೀ ದೇಶದ ಇತರೆ ನಗರಗಳಿಗಿಂತಲೂ ಹೆಚ್ಚು ಸಂಬಳವನ್ನು ನೀಡುವುದರಲ್ಲೂ ನಂಬರ್ ಒನ್ ಸ್ಥಾನಕ್ಕೆ ಏರಿದೆ. ಈ ಬಗ್ಗೆ ಸರ್ವೆ ಕೂಡ ಆಗಿದ್ದು, ಇದರಲ್ಲಿ ಏನೆಲ್ಲಾ ಮಾಹಿತಿ ನೀಡಲಾಗಿದೆ ಎಂಬುದನ್ನು ನೋಡೋಣ ಬನ್ನಿ.

ಡಚ್ ಮೂಲದ ಜಾಗತಿಕ ಎಚ್‌ಆರ್ ಸೇವಾ ಸಂಸ್ಥೆ ರ್ಯಾಂಡ್‌ಸ್ಟಡ್ ಇನ್‌ಸೈಟ್ಸ್ ಸ್ಯಾಲರಿ ಟ್ರೆಂಡ್ಸ್ ವರದಿ 2019ರ ಸರ್ವೆ ಮಾಡಿದೆ. ಇದರ ಪ್ರಕಾರ, ಬೆಂಗಳೂರಿನಲ್ಲಿರುವ ಕಂಪನಿಗಳು ಉದ್ಯೋಗಿಗಳಿಗೆ ಕೊಡುವ ಸಂಬಳ ಇತರೆ ನಗರಗಳಿಗಿಂತಲೂ ಅಧಿಕವಾಗಿದೆ. ಕಂಪನಿಗಳು ವಾರ್ಷಿಕವಾಗಿ ಸಿಟಿಸಿಯು ಸಿಕ್ಕಾಪಟ್ಟೆ ಹೆಚ್ಚು ನೀಡುತ್ತಿದೆ. ಈ ಬಗ್ಗೆ ಎಚ್‌ಆರ್ ಸೇವಾ ಸಂಸ್ಥೆ ರ್ಯಾಂಡ್‌ಸ್ಟಡ್ ಇನ್‌ಸೈಟ್ಸ್ ಸ್ಯಾಲರಿ ಟ್ರೆಂಡ್ಸ್ ದೇಶದ ಪ್ರಮುಖ 8 ನಗರಗಳಲ್ಲಿ ಸರ್ವೆ ಮಾಡಿದೆ. ಸುಮಾರು 15 ರೀತಿಯ ಇಂಡಸ್ಟ್ರಿಗಳ 1 ಲಕ್ಷ ಉದ್ಯೋಗಿಗಳನ್ನು ಈ ಸಂಸ್ಥೆ ಅಧ್ಯಯನಕ್ಕೊಳ ಪಡಿಸಿದೆ.

ಇನ್ನು ಇದರ ವರದಿ ಪ್ರಕಾರ ಐಟಿ ಇಂಡಸ್ಟ್ರಿಯಲ್ಲಿಯೇ ಅತೀ ಹೆಚ್ಚು ಸಂಬಳವನ್ನು ನೀಡಲಾಗುತ್ತಿದೆ. ಜೂನಿಯರ್‌ ಲೆವೆಲ್‌ ನಲ್ಲಿ ಐಟಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ವಾರ್ಷಿಕ 4.56 ಲಕ್ಷದಷ್ಟು ಸಿಟಿಸಿ ಇದ್ದರೆ, ಮಧ್ಯಮ ಲೆವೆಲ್‌ ನಲ್ಲಿರುವವರಿಗೆ 16.45 ಲಕ್ಷದಷ್ಟು ಸಿಟಿಸಿ ಇದೆ. ಹೀಗೆ ಸೀನಿಯರ್‌ಗಳಿಗೆ 35.84ರಷ್ಟಿದೆ. ಇದು ಭಾರತದ ಇತರೆ ನಗರಗಳಿಗಿಂತಲೂ ಅಧಿಕ ಸಿಟಿಸಿ ಸಿಗುತ್ತಿದೆ. ಇದರಲ್ಲಿ ಮಿಡ್ ಲೆವೆಲ್ ಉದ್ಯೋಗಿಗಳಿಗೆ ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ಹೆಚ್ಚು ಸಂಬಳ ಸಿಗುತ್ತಿದೆ.

ಐಟಿ ಬಿಟ್ಟರೆ, ಕಾಮರ್ಸ್ ವಲಯದಲ್ಲಿ ಹೆಚ್ಚು ಸಂಬಂಳ ಸಿಗುತ್ತಿದ್ದು, ಹೆಚ್ಚಾಗಿ ಜಿಎಸ್‌ಟಿ ಕಾಂಪ್ಲಯನ್ಸ್ ಸ್ಪೆಶಲಿಸ್ಟ್ಸ್, ಅಕೌಂಟೆಂಟ್ಸ್, ಮ್ಯಾನೇಜ್‌‌ಮೆಂಟ್ ಕನ್ಸಲ್ಟೆಂಟ್ಸ್ ಹಾಗೂ ಲಾಯರ್ಸ್ಗಳಿಗೆ ಹೆಚ್ಚಿನ ಡಿಮ್ಯಾಂಡ್ ಇದೆ. ಇನ್ನು ಕ್ಲೌಡ್, ಪ್ರಾಡಕ್ಟ್ ಮ್ಯಾನೇಜ್‌ಮೆಂಟ್, ಅನಲಿಟಿಕ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಹಾಗೂ ಆಟೋಮೇಶನ್‌ನಂಥಹ ಡಿಜಿಟಲ್ ಕೌಶಲ್ಯ ಹೊಂದಿರುವವರಿಗೆ ಬೇಡಿಕೆ ಇದೆ.

Related News

spot_img

Revenue Alerts

spot_img

News

spot_img