ಬೆಂಗಳೂರು, ಜು. 24 : ಆಧಾರ್ ಕಾರ್ಡ್ನಲ್ಲಿ 12 ಅಂಕಿಗಳ ಸಂಖ್ಯೆ, ವಿಳಾಸ, ಹೆಸರು, ಜನ್ಮ ದಿನಾಂಕ, ಫೋಟೋ ಕೂಡ ಇರುತ್ತದೆ. ಅಷ್ಟೇ ಅಲ್ಲದೇ, ಆಧಾರ್ ಕಾರ್ಡ್ ನಲ್ಲಿ ಮೊಬೈಲ್ ಸಂಖೆ, ಬೆರಳಚ್ಚು, ಕಣ್ಣಿನ ಪಾಪೆಯವನ್ನು ಸ್ಕ್ಯಾನ್ ಮಾಡಿರಲಾಗುತ್ತದೆ. ಇದು ವ್ಯಕ್ತಿಯ ಬಗ್ಗೆ ಮಾಹಿತಿ ಪಡೆಯಲು ಸುಲಭವಾಗುತ್ತದೆ. ವಿಳಾಸ ಸೇರಿದಂತೆ ಆಗಾಗ ಆಧಾರ್ ಕಾರ್ಡ್ ಅನ್ನು ಅಪ್ ಡೇಟ್ ಮಾಡುತ್ತಿರಬೇಕು. ಆದರೆ, ಇದರಲ್ಲಿ ಬರುವ ಫೋಟೋ ಗಳು ಹೆಚ್ಚು ಜನರಿಗೆ ಇಷ್ಟವಾಗುವುದಿಲ್ಲ.
ಕೆಲವರು ಆಧಾರ್ ಕಾರ್ಡ್ನಲ್ಲಿ ಮುದ್ರಿಸಲಾದ ತಮ್ಮದೇ ಫೋಟೋವನ್ನು ಇಷ್ಟಪಡುವುದಿಲ್ಲ ಅಥವಾ ಜನರು ಆಧಾರ್ ಕಾರ್ಡ್ನಲ್ಲಿ ನಮೂದಿಸಿದ ಫೋಟೋವನ್ನು ಬದಲಾಯಿಸಲು ಬಯಸುತ್ತಾರೆ. ಇಷ್ಟು ದಿನ ಇದಕ್ಕೆ ಅವಕಾಶ ಇರಲಿಲ್ಲ. ಆದರೆ, ಈಗ ಆಧಾರ್ ಕಾರ್ಡ್ನಲ್ಲಿರುವ ಫೋಟೋವನ್ನು ಸಹ ಬದಲಾಯಿಸಬಹುದು. ನೀವು ಆಧಾರ್ ಕಾರ್ಡ್ನಲ್ಲಿ ಫೋಟೋವನ್ನು ಬದಲಾಯಿಸಲು ಬಯಸಿದರೆ, ಅದಕ್ಕಾಗಿ ಕೆಲವು ಹಂತಗಳನ್ನು ಅನುಸರಿಸಬೇಕು. ಇದರೊಂದಿಗೆ ಆಧಾರ್ ಕಾರ್ಡ್ನ ಫೋಟೋವನ್ನು ಬದಲಾಯಿಸಬಹುದು.
ಮೊದಲು UIDAI ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಥವಾ ಈ ಲಿಂಕ್ ಅನ್ನು ಕ್ಲಿಕ್ ಮಾಡಿ https://uidai.gov.in/. ಈಗ ‘ಅಪ್ಡೇಟ್ ಆಧಾರ್’ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ. ಆಧಾರ್ ನೋಂದಣಿ ಫಾರ್ಮ್ ಅನ್ನು ಡೌನ್ಲೋಡ್ ಮಾಡಿ ಮತ್ತು ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ. ಫಾರ್ಮ್ ಅನ್ನು ಹತ್ತಿರದ ಆಧಾರ್ ನೋಂದಣಿ ಕೇಂದ್ರದಲ್ಲಿ ಸಲ್ಲಿಸಿ. ಪ್ರಸ್ತುತ ಇರುವ ಆಧಾರ್ ಉದ್ಯೋಗಿ ಬಯೋಮೆಟ್ರಿಕ್ ಪರಿಶೀಲನೆಯ ಮೂಲಕ ಎಲ್ಲಾ ವಿವರಗಳನ್ನು ಪರಿಶೀಲಿಸುತ್ತಾರೆ.
ಉದ್ಯೋಗಿ ನಿಮ್ಮ ಆಧಾರ್ ಕಾರ್ಡ್ನಲ್ಲಿ ನವೀಕರಿಸಲಾಗುವ ಹೊಸ ಫೋಟೋವನ್ನು ಕ್ಲಿಕ್ ಮಾಡುತ್ತಾರೆ. 100 ರೂ. ಶುಲ್ಕ ಮತ್ತು ಜಿಎಸ್ಟಿಯನ್ನು ಪಾವತಿಸಬೇಕಾಗುತ್ತದೆ. ಆಧಾರ್ ಉದ್ಯೋಗಿ ನಿಮಗೆ ಸ್ವೀಕೃತಿ ಸ್ಲಿಪ್ ಮತ್ತು ನವೀಕರಣ ವಿನಂತಿ ಸಂಖ್ಯೆಯನ್ನು (URN) ನೀಡುತ್ತಾರೆ. ನಿಮ್ಮ ಫೋಟೋವನ್ನು 90 ದಿನಗಳಲ್ಲಿ ನವೀಕರಿಸಲಾಗುತ್ತದೆ. ಇದರ ನಂತರ ನೀವು ನಿಮ್ಮ ಅರ್ಜಿಯನ್ನು ಆನ್ಲೈನ್ನಲ್ಲಿ ಟ್ರ್ಯಾಕ್ ಮಾಡಬಹುದು.
UIDAI ನ ಅಧಿಕೃತ ವೆಬ್ಸೈಟ್ನಲ್ಲಿ URN ಸಂಖ್ಯೆಯನ್ನು ಬಳಸಿಕೊಂಡು ನೀವು ಹೊಸ ಆಧಾರ್ ಕಾರ್ಡ್ನ ಸ್ಥಿತಿಯನ್ನು ಸಹ ಟ್ರ್ಯಾಕ್ ಮಾಡಬಹುದು. ನೀವು ಒದಗಿಸಿದ ವಿವರಗಳನ್ನು ಆಧಾರ್ ಪೋರ್ಟಲ್ನಲ್ಲಿ ನವೀಕರಿಸಲು 90 ದಿನಗಳನ್ನು ತೆಗೆದುಕೊಳ್ಳುತ್ತದೆ. ನೀವು ನೀಡಿದ ವಿವರಗಳು ಮತ್ತು ಫೋಟೋವನ್ನು ನವೀಕರಿಸಿದ ನಂತರ, ಹೊಸ ಪ್ರತಿಯನ್ನು ಡೌನ್ಲೋಡ್ ಮಾಡಬಹುದು.
ಡೌನ್ ಲೋಡ್ ಮಾಡಿದ ಬಳಿಕ ಅದನ್ನು ಮುದ್ರಿಸಬಹುದು. ಆಗ ನಿಮ್ಮ ಆಧಾರ್ ಕಾರ್ಡ್ ನಲ್ಲಿನ ಮುಖ ಸುಂದರವಾಗಿರುತ್ತದೆ. ಆಧಾರ್ ಕಾರ್ಡ್ನಲ್ಲಿ ಫೋಟೋವನ್ನು ನವೀಕರಿಸುವ ಸಂಪೂರ್ಣ ಪ್ರಕ್ರಿಯೆಯನ್ನು ಆನ್ಲೈನ್ನಲ್ಲಿ ಮಾಡಲು ಸಾಧ್ಯವಿಲ್ಲ ಎಂದು ಗಮನಿಸಬೇಕು. ಇದಕ್ಕಾಗಿ ಮೂಲ ಕೇಂದ್ರಕ್ಕೆ ಹೋಗಬೇಕು.