25.4 C
Bengaluru
Saturday, July 27, 2024

ಯಶಸ್ವಿನಿ ಆರೋಗ್ಯ ವಿಮಾ ಯೋಜನೆ ಕಾರ್ಡ್ ಇದ್ದರೆ 5 ಲಕ್ಷ ರೂ ಸೌಲಭ್ಯ,ಈ ಕಾರ್ಡ್‌ ಮಾಡಿಸಿಕೊಳ್ಳಲು ನಾಳೆ ಕೊನೆ ದಿನ

ಬೆಂಗಳೂರು;ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯು(Yashasvini Health Insurance Scheme) ಕರ್ನಾಟಕ ಸರ್ಕಾರವು ಪ್ರಾರಂಭಿಸಿದ ಸರ್ಕಾರಿ ಆರೋಗ್ಯ ಯೋಜನೆಯಾಗಿದೆ. ಇದು ರೈತರ ಅತ್ಯಂತ ಜನಪ್ರಿಯ ಆರೋಗ್ಯ ವಿಮಾ ಯೋಜನೆಗಳಲ್ಲಿ ಒಂದಾಗಿದೆ.ಅತೀ ಕಡಿಮೆ ಖರ್ಚಿನಲ್ಲಿ ಆರೋಗ್ಯ ವಿಮೆ ಸೌಲಭ್ಯ(Health insurance facility) ಪಡೆಯಲು ಸಹಕಾರಿ ಸಂಘಗಳ ಮೂಲಕವಾಗಿ ಯಶಸ್ವಿನಿ ಕಾರ್ಡ್ ಮಾಡಿಸಿಕೊಳ್ಳಲು ಅರ್ಜಿ ಸಲ್ಲಿಸಲು ಕೊನೆಯ ಅವಕಾಶವಾಗಿದೆ. 2023-24ನೇ ಸಾಲಿಗೆ ಯಶಸ್ವಿನಿ ಯೋಜನೆಯಲ್ಲಿ ಸದಸ್ಯರಾಗಲು & ಸದಸ್ಯತ್ವ ನವೀಕರಣಗೊಳಿಸಲು ಫೆ. 29 ಕೊನೆ ದಿನಾಂಕವಾಗಿದೆ. ಈಗಾಗಲೇ ಯಶಸ್ವಿನಿ ಯೋಜನೆಯಲ್ಲಿ ನೋಂದಣಿ ಮಾಡಿಕೊಂಡವರು ಆಯಾ ಸಂಘದಲ್ಲಿಯೇ ಹಣ ಸಂದಾಯ ಮಾಡಿಕೊಂಡು, ಸದಸ್ಯತ್ವವನ್ನು ನವೀಕರಣ ಮಾಡಿಕೊಳ್ಳಬಹುದಾಗಿದೆ.ಇನ್ನು, ನಗರವಾಸಿಗಳಿಗೆ ಮನೆಯ ಕುಟುಂಬದ ನಾಲ್ಕು ಸದಸ್ಯರಿಗೆ ಸೇರಿ 1000 ರೂಪಾಯಿ ಪಾವತಿಸಬೇಕಾಗಿದ್ದು, ಹೆಚ್ಚಿನ ಸದಸ್ಯರಿದ್ದರೆ ಪ್ರತಿ ಸದಸ್ಯರಿಗೆ 200 ರೂಪಾಯಿ ಹೆಚ್ಚುವರಿಯಾಗಿ ಪಾವತಿಸಬೇಕು.ಗ್ರಾಮಗಳಲ್ಲಿ ವಾಸಿಸುವ ಮನೆಯ ಕುಟುಂಬದ 4 ಜನ ಸದಸ್ಯರಿಗೆ 500 ರೂಪಾಯಿ ಪಾವತಿಸಬೇಕು. ಹೆಚ್ಚಿನ ಸದಸ್ಯರಿದ್ದರೆ ಪ್ರತಿ ಸದಸ್ಯರಿಗೆ 100 ರೂಪಾಯಿ ಹೆಚ್ಚುವರಿಯಾಗಿ ಪಾವತಿಸಬೇಕು.ಈಗಾಗಲೇ ಕಳೆದ ವರ್ಷ ಈ ಕಾರ್ಡ್ ಅನ್ನು ಮಾಡಿಸಿಕೊಂಡವರು ಮತ್ತೊಮ್ಮೆ ಮೇಲೆ ತಿಳಿಸಿರುವ ಶುಲ್ಕ ಪಾವತಿ ಮಾಡಿ ಮತ್ತೆ ನಿಮ್ಮ ಕಾರ್ಡ್‌ನ್ನು 1 ವರ್ಷಕ್ಕೆ ನವೀಕರಣ ಮಾಡಿಕೊಳ್ಳಬೇಕಾಗುತ್ತದೆ.

ಯಶಸ್ವಿನಿ ಕಾರ್ಡ್ ನ ಪ್ರಯೋಜನಗಳು(Benefits of Yashasvini Card)

*ಸದಸ್ಯತ್ವ ಪಡೆದುಕೊಂಡ ಕುಟುಂಬ 5 ಲಕ್ಷ ರೂಪಾಯಿ ವರೆಗೆ ವಾರ್ಷಿಕವಾಗಿ ನಗದು ರಹಿತ ಚಿಕಿತ್ಸೆ ಪಡೆದುಕೊಳ್ಳಬಹುದು

*ಒಬ್ಬ ವ್ಯಕ್ತಿ ಆಸ್ಪತ್ರೆಗೆ ದಾಖಲಾದ ನಂತರ ಔಷಧಿ ವೆಚ್ಚ, ಆಸ್ಪತ್ರೆಯ ಇತರೆ ವೆಚ್ಚ, ಆಪರೇಷನ್ ವೆಚ್ಚ ಈ ಯಶಸ್ವಿನಿ ಕಾರ್ಡ್ ಗೆ ಸೇರುತ್ತದೆ.

*ಹೃದಯಕ್ಕೆ ಸಂಬಂಧಿಸಿದ ರೋಗಗಳು, ಕಿವಿ, ಕಣ್ಣು, ಮೂಗು, ಗಂಟಲು ಹೀಗೆ ಸಾಮಾನ್ಯ ಕಾಯಿಲೆಗಳವರೆಗೂ ಕೂಡ ಚಿಕಿತ್ಸೆ ಪಡೆದುಕೊಳ್ಳಲು ಅವಕಾಶ ಇದೆ.

*ರಾಜ್ಯಾದ್ಯಂತ 1650 ನೋಂದಾಯಿತ ಆಸ್ಪತ್ರೆಗಳಲ್ಲಿ ಬಳಸಿಕೊಳ್ಳಬಹುದು.

*ಆಸ್ಪತ್ರೆಗೆ ದಾಖಲಾದ ಜನರಲ್ ವಾರ್ಡ್ ನಲ್ಲಿರುವ ವ್ಯಕ್ತಿಗೆ ಮಾತ್ರ ಇದು ಲಭ್ಯವಾಗುತ್ತದೆ.

ಅಗತ್ಯವಿರುವ ದಾಖಲೆಗಳು(Required Documents for Yashasvini Card)

*ಆಧಾರ್ ಕಾರ್ಡ್

*ರೇಷನ್ ಕಾರ್ಡ್

*ಮನೆಯ ಪ್ರತಿಯೊಬ್ಬರ ಎರಡು ಫೋಟೋ

*ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದವರ ಜಾತಿ ಪ್ರಮಾಣ ಪತ್ರ

Related News

spot_img

Revenue Alerts

spot_img

News

spot_img