21 C
Bengaluru
Sunday, October 27, 2024

ಬ್ಯಾಂಕ್ ನಲ್ಲಿ ಸಾಲ ಪಡೆದು ಮೃತಪಟ್ಟರೆ, ಲೋನ್ ತೀರಿಸುವುದು ಯಾರು ಗೊತ್ತೇ..?

ಬೆಂಗಳೂರು, ಏ. 07 : ಮೊದಲೆಲ್ಲಾ ಬ್ಯಾಂಕ್ ನಲ್ಲಿ ಸಾಲ ಪಡೆಯುವುದು ಬಹಳ ಕಷ್ಟಕರವಾದ ಕಾರ್ಯವಾಗಿತ್ತು. ಆದರೆ, ಈಗ ಹಾಗೇನಿಲ್ಲ. ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಗಳು ಲಿಂಕ್ ಆಗಿದ್ದು, ಪ್ರತಿಯೊಬ್ಬ ವ್ಯಕ್ತಿಯ ಬ್ಯಾಂಕ್ ವ್ಯವಹಾರಗಳು ಕೂಡ ತಿಳಿದಿರುವುದರೀಮದ ಸುಲಭವಾಗಿ ಸಾಲವನ್ನು ಬ್ಯಾಂಕ್ ಗಳು ನೀಡುತ್ತವೆ. ಸಾಲವನ್ನೇನೋ ಬ್ಯಾಮಕ್ ಗಳು ನೀಡುತ್ತವೆ. ಅಕಸ್ಮಾತ್ ವ್ಯಕ್ತಿ ಸಾಲವನ್ನು ಮರುಪಾವತಿಸದಿದ್ದರೆ, ವಿವಿಧ ದಾರಿಯಲ್ಲಿ ಹಣವನ್ನು ಪಡೆಯಲು ಬ್ಯಾಂಕ್ ಗಳು ಯತ್ನಿಸುತ್ತವೆ. ಅದೇ, ಸಾಲ ಪಡೆದಾತ ಮರಣವನ್ನು ಹೊಂದಿದರೆ, ಏನು ಂಆಡುವುದು..? ಆ ಸಾಲವನ್ನು ಬ್ಯಾಂಕ್ ಗೆ ಯಾರು ಮರು ಪಾವತಿ ಮಾಡುತ್ತಾರೆ ಗೊತ್ತೇ..?

ಬ್ಯಾಂಕ್‌ ನಲ್ಲಿ ವ್ಯಕ್ತಿ ಗೃಹಸಾಲವನ್ನು ಪಡೆದಿದ್ದರೆ, ಆತ ತೀರಿಸುವ ಮುನ್ನವೇ ಸಾವನ್ನಪ್ಪಿದರೆ, ವ್ಯಕ್ತಿಯ ಉತ್ತರಾಧಿಕಾರಿ ಸಾಲವನ್ನು ಮರುಪಾವತಿ ಮಾಡಬೇಕು. ಅಕಸ್ಮಾತ್ ವಾರಸುದಾರ ಸಾಲವನ್ನು ಮರುಪಾವತಿ ಮಾಡುವ ಸ್ಥಿತಿಯಲ್ಲಿ ಇಲ್ಲದಿದ್ದರೆ, ಸತ್ತವರ ಆಸ್ತಿಯನ್ನು ಸ್ವಾಧೀನಪಡಿಸಿಕೊಂಡು ಬ್ಯಾಂಕ್ ತನ್ನ ಸಾಲವನ್ನು ಪಡೆಯುತ್ತದೆ. ಸ್ಥಳವನ್ನು ಹರಾಜಿನಲ್ಲಿ ಮಾರಾಟ ಮಾಡಿ, ಬಂದ ಹೆಚ್ಚಿನ ಮೊತ್ತವನ್ನು ಕುಟುಂಬಕ್ಕೆ ನೀಡುತ್ತದೆ.

ಬ್ಯಾಂಕ್‌ ನಲ್ಲಿ ಸಣ್ಣ ಅಥವಾ ದೊಡ್ಡ ಉದ್ಯಮಕ್ಕಾಗಿ ಸಾಲವನ್ನು ನೀಡುತ್ತದೆ. ಈ ಸಾಲವನ್ನು ನೀಡುವಾಗ ಸಾಲಗಾರನಿಂದ ಮರಣದ ಸಂದರ್ಭದಲ್ಲಿ ಯಾರು ಮರುಪಾವತಿ ಮಾಡುತ್ತಾರೆ ಎಂಬುದರ ಬಗ್ಗೆ ಮಾಹಿತಿ ಪಡೆಯುತ್ತವೆ. ಇನ್ನು ವ್ಯಾಪಾರಸ್ಥರು ಸಾಲದ ಜೊತೆಗೆ ವಿಮಾ ರಕ್ಷಣೆಯನ್ನು ಕೂಡ ಪಡೆದಿರುತ್ತಾರೆ. ಹಾಗಾಗಿ ವ್ಯಕ್ತಿ ಸಅವನ್ನಪ್ಪಿದಾಗ ವಿಮಾ ಕಂಪನಿ ಸಾಲವನ್ನು ಮರುಪಾವತಿ ಮಾಡುತ್ತದೆ. ಇಲ್ಲವೇ, ಚಿನ್ನ, ಭೂಮಿ, ಮನೆ ಅಥವಾ ಪ್ಲಾಟ್, ಷೇರುಗಳ ಮೂಲಕ ಸಾಲವನ್ನು ಪಡೆಯುತ್ತದೆ.

ಕ್ರೆಡಿಟ್ ಕಾರ್ಡ್ ಅನ್ನು ಈಗ ಎಲ್ಲರೂ ಬಳಸುತ್ತಾರೆ. ಇದರ ಮೂಲಕ ಪಡೆಯುವ ಸಾಲವನ್ನು ವ್ಯಕ್ತಿ ಅಕಾಲಿಕ ಮರಣ ಹೊಂದಿದರೆ, ಬ್ಯಾಂಕ್ ಕುಟುಂಬದವರನ್ನು ಸಂಪರ್ಕಿಸಿ, ಉತ್ತರಾಧಿಕಾರಿಯಿಂದ ಹಣ ಪಡೆಯುತ್ತದೆ. ಇಲ್ಲದೇ ಹೋದಲ್ಲಿ ಆಸ್ತಿ ಜಪ್ತಿ ಮಾಡಿ ಸಾಲವನ್ನು ಮರುಪಾವತಿ ಮಾಡಿಕೊಳ್ಳುತ್ತದೆ.

ವೈಯಕ್ತಿಕ ಸಾಲವನ್ನು ವಿಮಾ ಕಂಪನಿಯಿಂದ ಬ್ಯಾಂಕ್‌ ಗಳು ಮರು ಪಡೆಯುತ್ತದೆ. ಕೆಲವೊಮ್ಮೆ ಬ್ಯಾಂಕ್ ವೈಯಕ್ತಿಕ ಸಾಲವನ್ನು ಸಾಲಗಾರನ ವಾರಸುದಾರನಿಂದ ಪಡೆಯುತ್ತದೆ. ಇಲ್ಲದಿದ್ದರೆ ಆಸ್ತಿಯನ್ನು ವಶಕ್ಕೆ ಪಡೆದು, ಸಾಲವನ್ನು ಹಿಂಪಡೆಯುತ್ತದೆ.

Related News

spot_img

Revenue Alerts

spot_img

News

spot_img