22.1 C
Bengaluru
Friday, July 19, 2024

ಗ್ಯಾರಂಟಿಗಳ ಬೃಹತ್ ಬಜೆಟ್:ಸಿದ್ದು ಸರ್ಕಾರದ ಹೊಸ ಘೋಷಣೆಗಳೇನು?

ಬೆಂಗಳೂರು;ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಅಧಿಕಾರದ ಗದ್ದುಗೆ ಹಿಡಿದಿರುವ ಕಾಂಗ್ರೆಸ್ ತನ್ನ ಮೊದಲ ಬಜೆಟ್ ಮಂಡನೆಗೆ ಸಿದ್ಧತೆ ಮಾಡಿಕೊಂಡಿದೆ.ಸಿಎಂ.ಸಿದ್ದರಾಮಯ್ಯ ಇಂದು ಶುಕ್ರವಾರ 2023-24ನೇ ಸಾಲಿನ ಹಣಕಾಸು ವರ್ಷದ ಬಜೆಟ್ ಮಂಡಿಸಲಿದ್ದಾರೆ.ಸಿದ್ದರಾಮಯ್ಯ ಪಾಲಿಗೆ ಇದು ಆರನೇ ಬಜೆಟ್ ಮಂಡನೆ ರಾಜ್ಯದ 14ನೇ ಬಜೆಟ್ ಮಂಡಿಸುತ್ತುರುವ ಸಿಎಂ ಸಿದ್ದರಾಮಯ್ಯ ಮೇಲೆ ಜನತರ ಭಾರೀ ನಿರೀಕ್ಷೆ ಹೊತ್ತಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರದ ಬಹು ನಿರೀಕ್ಷಿತ ಬಜೆಟ್ ಇಂದು ಮಂಡನೆಯಾಗಲಿದೆ.ಇಂದು ಮಧ್ಯಾಹ್ನ 12 ಗಂಟೆಗೆ ಹಣಕಾಸು ಇಲಾಖೆಯ ಸಚಿವರೂ ಆಗಿರುವ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಲಿದ್ದಾರೆ.ವರದಿಗಳ ಪ್ರಕಾರ, ಸುಮಾರು 3.30 ಲಕ್ಷ ಕೋಟಿಯ ಆಯವ್ಯಯ ಮಂಡನೆಯಾಗಲಿದೆ.ಸಿದ್ದರಾಮಯ್ಯನವರು ಮಂಡಿಸುವ ಬಜೆಟ್ ಅನ್ನು ಸರ್ಕಾರದ ವಿಧಾನಸಭೆ ಅಧಿವೇಶನದ ವೆಬ್ ಪೋರ್ಟಲ್‌ನಲ್ಲಿ ಲೈವ್ ವೀಕ್ಷಿಸಬಹುದು,ಸಿದ್ದರಾಮಯ್ಯ ಬಜೆಟ್ ನಲ್ಲಿ ಹೊಸ ಘೋಷಣೆಗಳೇನು ಅನ್ನೋ ಕುತೂಹಲ ಹೆಚ್ಚಾಗಿದೆ.ಹೊಸ ಸರ್ಕಾರ ಹೊಸ ಬಜೆಟ್ ಮಂಡಿಸುತ್ತಿರುವುದರಿಂದ ಸಹಜವಾಗಿ ಜನರಲ್ಲಿ ಕುತೂಹಲ ಮೂಡಿದೆ.

ಸಿದ್ದು ಸರ್ಕಾರದ ಹೊಸ ನಿರೀಕ್ಷೆಗಳು?

*ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮೀ ಸೇರಿದಂತೆ 5 ಗ್ಯಾರಂಟಿ ಕಾರ್ಯಕ್ರಮಗಳ ಜಾರಿಗೆ

*ಕೃಷಿ ಭಾಗ್ಯ ಯೋಜನೆ ಮರು ಜಾರಿ,

*ಪಶು ಭಾಗ್ಯ ಯೋಜನೆ

*ಎಪಿಎಂಸಿಗಳ ಸುಧಾರಣೆ, ಶುದ್ಧ ಕುಡಿಯುವ ನೀರು ಪೂರೈಕೆಗೆ ಆದ್ಯತೆ

*ಹಿಂದುಳಿದ ವರ್ಗಗಳ ಗುತ್ತಿಗೆದಾರರಿಗೆ ಗುತ್ತಿಗೆಯಲ್ಲಿ 1 ಕೋಟಿ ರೂ. ಮೀಸಲು

*ಹಿಂದುಳಿದ ವರ್ಗಗಳ ಉದ್ಯಮಿಗಳಿಗೆ 20 ಕೋಟಿ ರೂ. ತನಕ ಶೇ.6ರ ಬಡ್ಡಿದರದಲ್ಲಿ ಸಾಲ,

*ಎಸ್‌ಸಿಪಿ-ಟಿಎಸ್ಎಪಿ ಅನುದಾನ 34 ಸಾವಿರ ಕೋಟಿ ರೂ.ಗಳಿಗೆ ಏರಿಕೆ

*ಪತ್ರಕರ್ತರ ಪಿಂಚಣಿ 12 ಸಾವಿರಕ್ಕೆ ಕುಟುಂಬ ಪಿಂಚಣಿ 3 ರಿಂದ 6 ಸಾವಿರಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ

*ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ, ಅಹಿಂದ ಶೋಷಿತ ವರ್ಗಗಳಿಗೆ ವಿಶೇಷ ಕಾರ್ಯಕ್ರಮಗಳ ನಿರೀಕ್ಷೆ,

*ನಾಲ್ಕೂ ತೆರಿಗೆ ಮೂಲಗಳಿಂದ ಹೆಚ್ಚುವರಿ ಆದಾಯ ಸಂಗ್ರಹದ ಗುರಿ ನಿಗದಿ

Related News

spot_img

Revenue Alerts

spot_img

News

spot_img