22.9 C
Bengaluru
Friday, July 5, 2024

RTI ಅಡಿ ಆನ್‌ಲೈನ್ ನಲ್ಲಿ ಕಂದಾಯ ಇಲಾಖೆ ದಾಖಲೆ ಪಡೆಯುವುದು ಹೇಗೆ ?

ಬೆಂಗಳೂರು ಡಿ. 01: ಸರ್ಕಾರದ ಸೇವೆಯನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಹಾಗೂ ಆಡಳಿತದಲ್ಲಿ ಪಾರದರ್ಶಕತೆ ತರಲು ಸರ್ಕಾರ ಮಾಹಿತಿ ಹಕಕ್ಉ ಕಾಯ್ದೆ -2005 ಜಾರಿಗೆ ತಂದಿದೆ. ಅದರಲ್ಲೂ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳನ್ನು ಮಾಹಿತಿ ಹಕ್ಕು ಅಧಿನಿಯಮದಡಿ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈ ಸೌಲಭ್ಯ ಬಳಿಸಿ ಸಾರ್ವಜನಿಕರು ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳನ್ನು ಕೂತಲ್ಲಿಗೆ ತರಿಸಿಕೊಳ್ಳಬಹುದು. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಮಾಹಿತಿ ಹಕ್ಕು ಕಾಯಿದೆ 2005 ರ ಸಮಗ್ರ ವಿವರ ಇಲ್ಲಿನೀಡಲಾಗಿದೆ.

ಯಾವುದೆ ವ್ಯಕ್ತಿಯು ದೃಢೀಕೃತ ಸರ್ಕಾರಿ ದಾಖಲೆಗಳು ಬೇಕಾದಾಗ ಸಂಬಂಧ ಪಟ್ಟ ಸರ್ಕಾರಿ ಕಛೇರಿಗಳಲ್ಲಿ ಮಾಹಿತಿ ಹಕ್ಕು ಕಾಯಿದೆ-2005 ಪ್ರಕಾರ ಪಡೆದುಕೊಳ್ಳಬಹುದಾಗಿದೆ. ಇದರ ಪ್ರಕಾರ ಹಾಲಿ ಮ್ಯಾನ್ಯುಯಲ್ ಪದ್ದತಿ ಜಾರಿಯಲ್ಲಿದ್ದು, ಇತ್ತಿಚ್ಚಿನ ಮಾಹಿತಿ ತಂತ್ರಜ್ಞಾನ ಕ್ರಾಂತಿಯಿಂದಾಗಿ ಎಲ್ಲಾ ಶಾಖೆಗಳಲ್ಲೂ ಗಣಕಿಕರಣ ಹಾಗೂ ಆನ್‌ಲೈನ್ ಪದ್ದತಿ ತುಂಬಾ ಹೆಸರುವಾಸಿಯಾಗಿದೆ.

ಮುಂದಿನ ದಿನಗಳಲ್ಲಿ ಪ್ರಪಂಚವೇ ಮಾಹಿತಿ ತಂತ್ರಜ್ಞಾನದ ಮೇಲೆ ನಿಂತಿರುವುದರಿಂದ ಮಾಹಿತಿ ಹಕ್ಕು ಕಾಯಿದೆಯನ್ನು ಸಹ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅಳವಡಿಸಲಾಗಿದೆ. ಅದರ ಪ್ರಕಾರ ಯಾವುದೇ ಭಾರತೀಯ ನಾಗರಿಕ ಸಾರ್ವಜನಿಕ ಪ್ರಾಧಿಕಾರಕ್ಕೆ (ಸರ್ಕಾರಿ/ಅರೇ ಸರ್ಕಾರಿ/ಸರ್ಕಾರಿದಿಂದ ಅನುದಾನ ಪಡೆಯುವ ಸಂಸ್ಥೆಗಳಿಗೆ ಮಾಹಿತಿಯನ್ನು ಕೇಳಿ ಅರ್ಜಿ ಸಲ್ಲಿಸಬಹುದು. ಈ ರೀತಿ ಬಂದ ಅರ್ಜಿಗಳನ್ನು ಸಾರ್ವಜನಿಕ ಪ್ರಾಧಿಕಾರವು 30 ದಿನಗಳ ಒಳಗಾಗಿ ಉತ್ತರ ನೀಡಬೇಕಾಗಿರುತ್ತದೆ).

ಆನ್‌ಲೈನ್ ಅರ್ಜಿ ಸಲ್ಲಿಸುವ ವಿಧಾನ:
ಸಾರ್ವಜನಿಕರು ಮಾಹಿತಿ ಪಡೆಯಲು ಆನ್‌ಲೈನ್ ಮುಖೇನ ಆರ್.ಟಿ.ಐ ಪೋರ್ಟಲ್ ಗೆ ಹೋಗಬೇಕು. ಹೋಗಿ ನಂತರ ಯಾವ ಪ್ರಾಧಿಕಾರದಿಂದ ಏನು ಮಾಹಿತಿ ಬೇಕು ಎಂಬ ಬಗ್ಗೆ ಅರ್ಜಿಯನ್ನು ತುಂಬಿಸಬೇಕು. ತುಂಬಿಸಿದ ನಂತರ ಆನ್‌ಲೈನ್ ನಲ್ಲಿಯೇ ಅರ್ಜಿ ಶುಲ್ಕ 10/- ರೂಗಳನ್ನು ತುಂಬಿಸಬೇಕು. ನಂತರ ಕಂದಾಯ ಇಲಾಖೆಯು ಆನ್‌ಲೈನ್ ಮಾಹಿತಿ ಹಕ್ಕು ನೋಡಲ್ ಅಧಿಕಾರಿಗಳನ್ನು ನೇಮಿಸಿದೆ. ವ್ಯಕ್ತಿಗಳು ಅರ್ಜಿ ತುಂಬಿ ಸಲ್ಲಿಸಿದ ನಂತರ ನೋಡಲ್ ಅಧಿಕಾರಿಗೆ ಆ ವಿಷಯವು ತಲುಪುತ್ತದೆ. ನೋಡಲ್ ಅಧಿಕಾರಿಯು ಸಂಬಂಧಪಟ್ಟ ಸಾರ್ವಜನಿಕೆ ಮಾಹಿತಿ ಅಧಿಕಾರಿಗೆ ವರ್ಗಾಹಿಸುತ್ತಾರೆ.

ಇನ್ನೂಳಿದಂತೆ ಕಾನೂನಿನಂಶಗಳು ಮಾಹಿತಿ ಹಕ್ಕು ಕಾಯಿದೆ 2005 ರನ್ವಯ ಇರುತ್ತದೆ. ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಅರ್ಜಿ ಸಲ್ಲಿಸುವಾಗ ಉತ್ತರವು ಆನ್‌ಲೈನಿನಲ್ಲಿಯೇ ಬೇಕಾ ಅಥವಾ ಭೌತಿಕವಾಗಿ ಬೇಕಿದ್ದರೆ ಸಾರ್ವಜನಿಕರು ತಿಳಿಸಬಹುದು. ಘನ ನ್ಯಾಯಾಲಯಕ್ಕೆ/ ಅರೇ ನ್ಯಾಯಿಕ ನ್ಯಾಯಾಲಯಗಳಿಗೆ, ಸರ್ಕಾರಿ ಪ್ರಾಧಿಕಾರಿಗಳಿಗೆ ಸೂಕ್ತವಾಗಿ ಸಹಿ ಮತ್ತು ಸೀಲ್ ಇರುವ ಮಾಹಿತಿಗಳು ಬೇಕಿದ್ದರೆ ಅವುಗಳನ್ನು ಭೌತಿಕವಾಗಿ ಪಡೆದುಕೊಳ್ಳುವುದು ಅವಶ್ಯವಾಗಿದೆ. ಅದೇ ಪ್ರಕಾರವಾಗಿ ಮಾಹಿತಿ ಅಧಿಕಾರಿಗೆ ಕೋರಿ ಶುಲ್ಕ ಕಟ್ಟಿದರೆ ಅವರು ನೋಂದಾಯಿತ ಅಂಚೆ ಮೂಲಕ ಅಥವಾ ಭೌತಿಕವಾಗಿ ಅರ್ಜಿದಾರರು ಅಥವಾ ಅವರು ನೇಮಿಸುವ ವ್ಯಕ್ತಿಗೆ ನೀಡಬೇಕಾಗುತ್ತದೆ.

ಸಾರ್ವಜನಿಕ ಮಾಹಿತಿ ಅಧಿಕಾರಿಯು ಅರ್ಜಿ ಸ್ವೀಕರಿಸದ ನಂತರ ಅವರಲ್ಲಿ ಲಭ್ಯವಿರುವ ಮಾಹಿತಿಗಳಿಗೆ ಶುಲ್ಕವೆನಾದರೂ ಇದ್ದರೆ ಆನ್‌ಲೈನ್ ನಲ್ಲಿಯೇ ಸಂಬಂಧ ಪಟ್ಟ ಸಾರ್ವಜನಿಕರಿಗೆ ತಿಳಿಸಬಹುದು ಶುಲ್ಕಗಳನ್ನು ಅವರು ಕಟ್ಟಿದ ನಂತರ ಮಾಹಿತಿಗಳನ್ನು ಒದಗಿಸುತ್ತಾರೆ.

ಆನ್‌ಲೈನ್ ಮುಖೇನ ಅರ್ಜಿ ಸಲ್ಲಿಸುವಾಗ ಕಂದಾಯ ಇಲಾಖೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನೋಡಲ್ ಅಧಿಕಾರಿಯನ್ನು ಜಿಲ್ಲಾ ಮಟ್ಟಗಳಲ್ಲಿ ನೇಮಿಸಿದ್ದು, ಅವರು ಆನ್‌ಲೈನ್ ಸ್ವೀಕರಿಸುವ ಅರ್ಜಿಗಳನ್ನು ಸಂಬಂಧಪಟ್ಟ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಆನ್‌ಲೈನ್ ಮೂಲಕ ತಲುಪಿಸುತ್ತಾರೆ. ಇನ್ನೂಳಿದ ಕೆಲಸಗಳು ಮಾಹಿತಿ ಅಧಿಕಾರಿಗಳು ಮಾಹಿತಿ ಕಾಯ್ದೇ ಅನ್ವಯ ಮಾಡಬೇಕಾಗಿರುತ್ತದೆ.
ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ನೋಂದಣಿ ಕಮಿಷನರ್ (IGR) ಇವರ ಕಛೇರಿಯಲ್ಲಿ ನೋಡಲ್ ಅಧಿಕಾರಿ ಇದ್ದು, ಇವರು ಆನ್‌ಲೈನ್ ಮೂಲಕ ಬಂದ ಅರ್ಜಿಗಳನ್ನು ಸಂಬಂಧ ಪಟ್ಟ ಮಾಹಿತಿ ಅಧಿಕಾರಿಗೆ ತಲುಪಿಸುತ್ತಾರೆ.

30 ದಿನಗಳ ಒಳಗಾಗಿ ಸಾರ್ವಜನಿಕ ಮಾಹಿತಿ ಅಧಿಕಾರಿಯು ಮಾಹಿತಿ ನೀಡದಿದ್ದಲ್ಲಿ ಪ್ರಥಮ ಅಪಿಲುಗಳನ್ನು ಆನ್‌ಲೈನ್ ಮುಖಾಂತರವೇ ಹಾಕಬಹುದಾಗಿದೆ. ಆನ್‌ಲೈನ್ ವಿಚಾರದಲ್ಲಿ ಇನ್ನೂ ಹೆಚ್ಚಾಗಿ ತಂತ್ರಾಂಶ ಅಭಿವೃದ್ದಿ ಪಡಿಸುವುದು ಅವಶ್ಯಕವಾಗಿದೆ.ಸಾರ್ವಜನಿಕ ಮಾಹಿತಿ ಅಧಿಕಾರಿಯು ತನ್ನ ಬಳಿ ಅರ್ಜಿದಾರನು ಕೇಳಿದ ಮಾಹಿತಿ ಲಭ್ಯವಿಲ್ಲದೇ ಹೊದ್ದಲ್ಲಿ ಕಲಂ 6(1) ರ ಅನ್ವಯ ಮಾಹಿತಿ ಲಭ್ಯವಿರುವ ಸಂಬಂಧ ಪಟ್ಟ ಮಾಹಿತಿ ಅಧಿಕಾರಿಗೆ ವರ್ಗಾವಣೆ ಮಾಡಿ ಈ ಮಾಹಿತಿಯನ್ನು ಪತ್ರದ ಮೂಲಕ ಅರ್ಜಿದಾರನಿಗೆ ತಿಳಿಸಬೇಕಾಗಿರುತ್ತದೆ.

ಆನ್‌ಲೈನ್ ಮುಖಾಂತರ ಸಹ ಮಾಹಿತಿ ಲಭ್ಯವಿರುವ ಕಛೇರಿಗೆ ವರ್ಗಾವಣೆ ಮಾಡುವಾಗ ಆನ್‌ಲೈನ್ ಸೇವೆಯನ್ನು ಅನುಷ್ಟಾನಗೊಳಿಸಿಕೊಂಡಿರುವ ಕಚೇರಿಗೆ ಮಾತ್ರ ವರ್ಗಾವಣೆ ನೀಡಬಹುದಾಗಿರುತ್ತದೆ. ಒಂದು ವೇಳೆ ಆನ್‌ಲೈನ್ ಸೇವೆ ಅನುಷ್ಟಾನ ವಾಗದೇ ಇದ್ದರೆ ಭೌತಿಕವಾಗಿ ಸಂಬಂಧ ಪಟ್ಟ ಕಚೇರಿಗೆ ವರ್ಗಾವಣೆ ಮಾಡಿ ಅರ್ಜಿದರನಿಗೆ ಮಾಹಿತಿಯನ್ನು ಆನ್‌ಲೈನ್ ಮೂಲಕವೇ ತಿಳಿಸಬಹುದಾಗಿರುತ್ತದೆ.

Related News

spot_img

Revenue Alerts

spot_img

News

spot_img