26.3 C
Bengaluru
Friday, October 4, 2024

ರೇಷನ್ ಕಾರ್ಡ್ ಗಾಗಿ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ..?

ಬೆಂಗಳೂರು, ಜೂ. 04: ನೀವು ರೇಷನ್ ಕಾರ್ಡ್ ಅನ್ನು ಮಾಡಿಸಬೇಕೇ..? ಆದರೆ, ಹೊಸ ರೇಷನ್ ಕಾರ್ಡ್ ಅನ್ನು ಪಡೆಯುವುದು ಹೇಗೆ ಎಂಬುದು ತಿಳಿದಿಲ್ಲವೇ..? ಹಾಗಾಗದರೆ ಇಂದಿನ ಈ ಲೇಖನದಲ್ಲಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ..? ಯಾವೆಲ್ಲಾ ದಾಖಲೆಗಳನ್ನು ನೀಡಬೇಕು ಎಂಬುದನ್ನು ತಿಳಿದುಕೊಳ್ಳೋಣ. ಅಲ್ಲದೇ ಜೂನ್ 5ರಿಂದ ರೇಷನ್ ಕಾರ್ಡ್ ಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.

ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬೇಕಾದ ಮುಖ್ಯ ದಾಖಲಾತಿಗಳು ಯಾವುವು ಎಂದರೆ, ಆಧಾರ್ ಕಾರ್ಡ್, ಜನನ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಮತ್ತು ಹಳೆಯ ರೇಷನ್ ಕಾರ್ಡ್ ನ ಸಂಖ್ಯೆ ಇದ್ದರೆ ಬೇಕಾಗುತ್ತದೆ. ರೇಷನ್ ಕಾರ್ಡ್ ಗೆ ಆನೈನ್ ನಲ್ಲಿ ಅರ್ಜಿ ಸಲ್ಲಿಸಲು ಮೊಟ್ಟ ಮೊದಲಿಗೆ ahara.kar.nic.in ವೆಬ್ ಸೈಟ್ ಗೆ ಭೇಟಿ ನೀಡಬೇಕು. ಬಳಿಕ ವೆಬ್ ಸೈಟ್ ನಲ್ಲಿ ಕಾಣಿಸುವ ಇ ಸೇವೆಗಳ ಮೇಲೆ ಕ್ಲಿಕ್ ಮಾಡಬೇಕು. ಇದಾದ ನಂತರ ಹೊಸ ಪಡಿತರ ಚೀಟಿಯನ್ನು ಇಲ್ಲಿ ಆಯ್ಕೆ ಮಾಡಿಕೊಳ್ಳಬೇಕು. ಬಳಿಕ ಹೊಸ ಪಡಿತರ ಚೀಟಿ ವಿನಂತಿ ಮಾಡಿಕೊಳ್ಳಿ.

ಇನ್ನು ಬಿಪಿಎಲ್ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲುಆದ್ಯತಾ ಹೌಸ್ ಹೋಲ್ಡ್ ಪಡಿತರ ಚೀಟಿ ಮೇಲೆ ಕ್ಲಿಕ್ ಮಾಡಿ. ಇಲ್ಲಿ ಆಧಾರ್ ಸಂಖ್ಯೆಯನ್ನು ನಮೂದಿಸಿ ಬಳಿಕ ಗೋ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ ಗೆ ಬರುವ ಓಟಿಪಿ ಹಾಕಿ ರಿಜಿಸ್ಟ್ರೇಷನ್ ಮಾಡಿ. ಇದರಲ್ಲಿ ನಿಮ್ಮ ಆಧಾರ್ ಮಾಹಿತಿಯನ್ನು ತೋರಿಸಲಾಗುತ್ತದೆ. ಆಗ ಆಡ್ ಮಾಡಿ ಈಗ ಅಪ್ಲಿಕೇಶನ್ ಕ್ರಿಯೇಟ್ ಆಗುತ್ತದೆ. ಬಳಿಕ ಕೇಳುವ ಎಲ್ಲಾ ದಾಖಲೆಗಳನ್ನು ಭರ್ತಿ ಮಾಡಿ ಸಬಿಟ್ ಮಾಡಿದ ಬಳಿಕ ಬಯೋಮೆಟ್ರಿಕ್ ನ ಅವಶ್ಯಕತೆ ಇರುತ್ತದೆ. ಇದಕ್ಕೆ ನೀವು ಸೈಬರ್ ಸೆಂಟರ್ ಹೋಗಿ ಅರ್ಜಿಯನ್ನು ಸಲ್ಲಿಸಿದರೆ ಸುಲಭವಾಗುತ್ತದೆ.

Related News

spot_img

Revenue Alerts

spot_img

News

spot_img