ಬೆಂಗಳೂರು, ಏ. 20 : ಮನೆಯಲ್ಲಿ ಭೂಮಿಯ ಮಟ್ಟ ಯಾವಾಗಲೂ ವಾಯುವ್ಯ ಹಾಗೂ ಆಗ್ನೇಯದಲ್ಲಿ ಯಾವಾಗಲೂ ಒಂದೇ ಮಟ್ಟದಲ್ಲಿ ಇರಬೇಕು. ನೆಲಮಟ್ಟ ನೈರುತ್ಯದಲ್ಲಿ ಎತ್ತರವಾಗಿದ್ದು, ಈಶಾನ್ಯದಲ್ಲಿ ತಗ್ಗಿರಬೇಕು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಹೀಗಿದ್ದಾಗ ನೀರನ್ನು ನೈರುತ್ಯದಲ್ಲಿ ಹಾಕಿದರೆ, ಅದು ನೇರವಾಗಿ ಈಶಾನ್ಯ ದಿಕ್ಕಿಗೆ ಬರಬೇಕು ಎಂಬುದು ವಾಸ್ತುವಿನಲ್ಲಿ ಹೇಳಲಾಗಿದೆ.
ಆದರೆ, ಸುಮಾರು ಮನೆಗಳಲ್ಲಿ ಸ್ಟೆಪ್ಸ್ ಗಳನ್ನು ಮಾಡಿರುತ್ತಾರೆ. ಪಶ್ಚಿಮದಿಂದ ಪೂರ್ವಕ್ಕೆ ಅಂದರೆ, ಪೂರ್ವದಲ್ಲಿ ಮನೆಯ ಮುಖ್ಯದ್ವಾರ ಇದ್ದಾಗ ಮೆಟ್ಟಿಲುಗಳನ್ನು ಮಾಡುತ್ತಾರೆ. ಆಗ ಪೂರ್ವಕ್ಕೂ ಪಶ್ಚಿಮಕ್ಕು ಎರಡೂವರೆ ಅಡಿ ಅಷ್ಟು ಎತ್ತರವನ್ನು ಮಾಡಿರುತ್ತಾರೆ. ಇನ್ನೂ ಕೆಲವು ಮನೆಗಳು ಉತ್ತರದಲ್ಲಿ ರೋಡ್ ಇತ್ತು ಎಂಬುದಾದರೆ, ದಕ್ಷಿಣದಲ್ಲಿ ಎತ್ತರವನ್ನು ಮಾಡಿ ಮನೆಯ ಮಧ್ಯದಲ್ಲಿ ಮೆಟ್ಟಿಲುಗಳನ್ನು ಹಾಕಿ ಉತ್ತರದಲ್ಲಿ ಕೆಳಗಿಳಿಸಿ ಒಂದೂವರೆ ಅಡಿ ಅಷ್ಟು ಕೆಳಗಿಳಿಸುತ್ತಾರೆ.
ಹೀಗೆ ಮನೆಯ ಮಟ್ಟವನ್ನು ಏರುಪೇರು ಮಾಡುವುದು ಯಾವತ್ತಿಗೂ ಶುಭವಲ್ಲ. ಮನೆಯ ಒಳಗಡೆಯ ನೆಲಮಟ್ಟವನ್ನು ಏರುಪೇರು ಮಾಡಬಾರದು. ಮೆಟ್ಟಿಲುಗಳನ್ನು ಹಾಕಿಕೊಂಡು ಮನೆಯೊಳಗೆ ಓಡಾಡುತ್ತಿದ್ದರೆ, ಜೀವನದಲ್ಲೂ ಸಾಕಷ್ಟು ಏರುಪೇರುಗಳನ್ನು ಎದುರಿಸಬೇಕಾಗುತ್ತದೆ. ಮೆಟ್ಟಿಲನ್ನು ಹತ್ತಿದ ಮೇಲೆ ಇಳಿಯಲೇ ಬೇಕು. ಹಾಗೆಯೇ ಜೀವನದಲ್ಲಿ ಒಂದು ಸ್ಟೆಪ್ ಹತ್ತಿದ ಮೇಲೆ ಮತ್ತೆ ಇಳಿಯಬೇಕಾಗುವ ಸಂದರ್ಭಗಳು ಬರುತ್ತವೆ.
ಇಂತಹ ಮನೆಗಳಲ್ಲಿ ಯಾರಲ್ಲಾದರೂ ಒಬ್ಬರಲ್ಲಿಯಾದರೂ ಈ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇನ್ನು ಮೆಟ್ಟಿಲನ್ನು ಕಟ್ಟುವಾಗ ಮೂಲೆಯಲ್ಲಿ ಶಾರ್ಪ್ ಕಟ್ ಇರುತ್ತದೆ. ಇದರಿಂದ ಈ ಮೂಲೆಗಳು ಶಾರ್ಪ್ ಆಗಿರುತ್ತದೆ. ಇದರಿಂದ ನಮಗೆ ಮನೆಯೊಳಗೆ ವಿಷ ಬಾಣಗಳು ಉಂಟಾಗಿ ಎಲ್ಲಾ ಕಡೆಗೂ ಬಿಡುತ್ತಿರುತ್ತವೆ ಎಂದು ಹೇಳುತ್ತವೆ. ಇದನ್ನು ಚೈನೀಸ್ ವಾಸ್ತುವಿನಲ್ಲೂ ಹೇಳಲಾಗಿದೆ. ಫೆಂಗ್ ಶೂಯಿಯಲ್ಲೂ ಈ ತರದ ಶಾರ್ಪ್ ಮೂಲೆಗಳನ್ನು ವಿಷ ಕಾರುವ ಸ್ಥಳಗಳು ಎಂದು ಹೇಳಲಾಗಿದೆ.
ಇನ್ನು ವಾಸ್ತುವಿನ ಗ್ರೇಡಿಂಟ್ ಪ್ರಕಾರ, ಮನೆಯ ನೆಲಮಟ್ಟ ಸ್ಮೂತ್ ಇರಬೇಕು. ಅಕಸ್ಮಾತ್ ಏರು ಪೇರು ಇದ್ದರೂ ಕೂಡ ಅಲ್ಲಿ ಯಾವುದೇ ಕಾರಣಕ್ಕೂ ಮೆಟ್ಟಿಲುಗಳನ್ನು ಮಾಡುವುದು ಸರಿಯಲ್ಲ. ಇದರಿಂದ ಮನೆಯಲ್ಲಿ ಸಮಸ್ಯೆಗಳು ಹೆಚ್ಚಾಗುತ್ತವೆ.