25.5 C
Bengaluru
Friday, September 20, 2024

ಕುದುರೆ ರೇಸ್ ,ಆನ್‌ಲೈನ್ ಗೇಮಿಂಗ್, ಮೇಲೆ ಶೇ. 28 ರಷ್ಟು ತೆರಿಗೆ

#Horserace #onlinegame #GST #28%

ನವದೆಹಲಿ;ಸಂಸತ್ತಿನ ಮುಂಗಾರು ಅಧಿವೇಶನದ ಕೊನೆಯ ದಿನವಾದ ಇಂದು ಸದನದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು GST ಮಸೂದೆ ಮಂಡಿಸಿದ್ದಾರೆ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಮತ್ತು ಸಮಗ್ರ ಜಿಎಸ್‌ಟಿ ಕಾನೂನುಗಳನ್ನು ಮಾರ್ಪಡಿಸಲು ಎರಡು ಮಸೂದೆಗಳನ್ನು ಲೋಕಸಭೆಯಲ್ಲಿ ಪರಿಚಯಿಸಿ, ಆನ್‌ಲೈನ್ ಗೇಮಿಂಗ್, ಕ್ಯಾಸಿನೋಗಳು ಮತ್ತು ಕುದುರೆ ರೇಸ್ ಕ್ಲಬ್‌ಗಳ ಮೇಲಿನ ಶೇ. 28 ರಷ್ಟು ತೆರಿಗೆ ವಿಚಾರವನ್ನು ವಿಧಿಸುವ ನಿರ್ಧಾರವನ್ನು ಅಕ್ಟೋಬರ್ 1 ರಿಂದ ಜಾರಿಗೆ ತರಲಾಗುವುದು,.ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ತಿದ್ದುಪಡಿ) ಮಸೂದೆ, 2023 ಮತ್ತು ಸಮಗ್ರ ಸರಕು ಮತ್ತು ಸೇವಾ ತೆರಿಗೆ (ತಿದ್ದುಪಡಿ) ಮಸೂದೆ 2023 ಅನ್ನು ಲೋಕಸಭೆಯಲ್ಲಿ ಅಂಗಿಕರಿಸಲಾಗಿದೆ.ಸಮಗ್ರ ಸರಕು ಮತ್ತು ಸೇವಾ ತೆರಿಗೆ (ತಿದ್ದುಪಡಿ) ಮಸೂದೆ-2023 ಅನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಯಿತು.ಆನ್‌ಲೈನ್ ಗೇಮಿಂಗ್ ಮೇಲೆ ತೆರಿಗೆ ವಿಧಿಸುವುದನ್ನು ದೆಹಲಿ ಹಣಕಾಸು ಸಚಿವರು ವಿರೋಧಿಸಿದರೆ, ಗೋವಾ ಮತ್ತು ಸಿಕ್ಕಿಂ ಜಿಜಿಆರ್ (ಒಟ್ಟು ಗೇಮಿಂಗ್ ಆದಾಯ) ಮೇಲೆ ತೆರಿಗೆಯನ್ನು ಬಯಸುತ್ತವೆಯೇ ಹೊರತು ಮುಖಬೆಲೆಯ ಮೇಲೆ ಅಲ್ಲ ಎಂದು ಸೀತಾರಾಮನ್ ಹೇಳಿದರು.

Related News

spot_img

Revenue Alerts

spot_img

News

spot_img