21.8 C
Bengaluru
Friday, February 23, 2024

ರಾಜ್ಯ ಲೋಕಾಯುಕ್ತ ಇಲಾಖೆಯಲ್ಲಿಯೇ ಐತಿಹಾಸಿಕ ದಾಳಿ;ಲಂಚ ಕೊಡ್ತಿದ್ದ ವ್ಯಕ್ತಿ ಮೇಲೆ ಲೋಕಾಯುಕ್ತ ರೇಡ್

#Historic attack #state #Lokayukta department # raid on the #person # giving bribe

ಹಾವೇರಿ;ರಾಜ್ಯ ಲೋಕಾಯುಕ್ತ ಇಲಾಖೆ ಇತಿಹಾಸದಲ್ಲೇ ಐತಿಹಾಸಿಕ ದಾಳಿಯೊಂದು ಹಾವೇರಿ(Haveri)ಯಲ್ಲಿ ನಡೆದಿದೆ.ಸರ್ಕಾರಿ ಅಧಿಕಾರಿಗೆ ಆಮಿಷವೊಡ್ಡಿ ಲಂಚ(Bribe) ನೀಡುತ್ತಿದ ವ್ಯಕ್ತಿಯನ್ನೇ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಲಂಚದ ಹಣ ಕೊಡುವಾಗ ದಾಳಿ ಮಾಡಿದ ಹಾವೇರಿ ಲೋಕಾಯುಕ್ತ(Lokayukta) ಅಧಿಕಾರಿಗಳು, ಲಂಚ ಕೊಡುತ್ತಿದ್ದ ವಕ್ತಿಯನ್ನು ಅರೆಸ್ಟ್‌ ಮಾಡಿದ್ದಾರೆ. ಟೆಂಡರ್ ಮಾಡಿಸಿಕೊಡಿ ಎಂದು ಸರ್ಕಾರಿ ಅಧಿಕಾರಿಯೊಬ್ಬರಿಗೆ 99 ಸಾವಿರ ರೂಪಾಯಿ ಲಂಚ ನೀಡುತ್ತಿದ್ದ ವ್ಯಕ್ತಿ ಮೇಲೆ ಲೋಕಾಯುಕ್ತರು ದಾಳಿ ಮಾಡಿ ಅರೆಸ್ಟ್ ಮಾಡಿದ್ದಾರೆ,ಹಾವೇರಿ ತಾಲೂಕು ಪಂಚಾಯತ್ ಇಓ ಭರತ್ ಹೆಗಡೆ ಎಂಬುವವರಿಗೆ ಶರಣಪ್ಪ ಶೆಟ್ಟರ್ ಎಂಬುವ ವ್ಯಕ್ತಿ ಟೆಂಡರ್ ನನಗೆ ಮಾಡಿಸಿಕೊಡಿ ಎಂದು ಲಂಚದ ಆಮಿಷ ಒಡ್ಡಿದ್ದ. ಈ ಹಿನ್ನೆಲೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭರತ್ ಅವರು ಲೋಕಾಯುಕ್ತರ ಕಚೇರಿಗೆ ತೆರಳಿ ವ್ಯಕ್ತಿ ವಿರುದ್ಧ ದೂರು ನೀಡಿದ್ದರು.ಸಾಮಾಗ್ರಿ ಪೂರೈಕೆ ಟೆಂಡರ್ ನನಗೆ ಮಾಡಿಸಿ ಕೊಡಿ ಎಂದು ಅಧಿಕಾರಿಗೆ ಲಂಚದ ಆಮಿಷ ಒಡ್ಡುತ್ತಿದ್ದರು. ಆಮಿಷ ಒಡ್ಡಿದ ಬಳಿಕ ಲೋಕಾಯುಕ್ತರ ಕಚೇರಿಗೆ ತೆರಳಿದ್ದ ಅಧಿಕಾರಿ ಟೆಂಡರ್‌ದಾರನ ವಿರುದ್ಧ ದೂರು ನೀಡಿದ್ದರು. ಗುರುವಾರ ಇಓ ಭರತ್ ಹೆಗಡೆ ಅವರಿಗೆ ಮುಂಗಡ ಹಣ ಕೊಡುವಾಗ ದಾಳಿ ನಡೆದಿದ್ದು ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ.ಲಂಚ ಪಡೆಯುವುದು ಅಷ್ಟೇಯಲ್ಲ, ಕೊಡುವುದು ಕೂಡ ದೊಡ್ಡ ಅಪರಾಧವೆಂದು ಇಓ ಭರತ್ ಅವರು ತೋರಿಸಿಕೊಟ್ಟಿದ್ದು ಕಳೆದ 15 ವರ್ಷಗಳಲ್ಲಿ ವಿಶೇಷ ಲೊಕಾಯುಕ್ತ ಪ್ರಕರಣವಾಗಿದೆ. ಈ ದಾಳಿ ಲೋಕಾಯುಕ್ತ ಡಿವೈಎಸ್ಪಿ ಚಂದ್ರಶೇಖರ ನೇತೃತ್ವದಲ್ಲಿ ನಡೆದಿದೆ.

Related News

spot_img

Revenue Alerts

spot_img

News

spot_img