#Hindu #: Gyanavapi, # Mosque,#Varanasi Court# Devotes, #Workship# Mulayam #Lock#Statues
ವಾರಾಣಸಿ: ಉತ್ತರ ಪ್ರದೇಶದ ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಪೂಜೆ ಆರಂಭವಾಗಿದೆ. ಸ್ಥಳೀಯ ಘನ ನ್ಯಾಯಾಲಯ ಬುಧವಾರ ಪೂಜೆಗೆ ಅನುಮತಿ ನೀಡುತ್ತಿದ್ದಂತೆ ಅರ್ಚಕರ ಕುಟುಂಬದವರು ಪೂಜಾ ಕೈಂಕರ್ಯ ನೆರವೇರಿಸಿದ್ದಾರೆ. ವಿವಾದಿತ ಬಾಬ್ರಿ ಮಸೀದಿ ಧ್ವಂಸವಾದ ಬಳಿಕ ಉತ್ತರ ಪ್ರದೇಶದ ಅಂದಿನ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಜ್ಞಾನವಾಪಿ ಮಸೀದಿ ನೆಲಮಾಳಿಗೆಗೆ ಬೀಗ ಹಾಕಲು ಆದೇಶ ನೀಡಿದ್ದರು. ಅದ್ರಂತೆ ಇಲ್ಲಿಗೆ ಬೀಗ ಮುದ್ರೆ ಹಾಕಲಾಗತ್ತು. ಇದಾಗಿ 30 ವರ್ಷವೇ ಕಳೆದಿತ್ತು ಇದೀಗ ಬೀಗ ತೆರವುಗೊಳಿಸಲು ನ್ಯಾಯಾಲಯ ಜಿಲ್ಲಾಡಳಿತಕ್ಕೆ ನಿರ್ದೇಶನ ಕೊಟ್ಟಿತ್ತು.
ಆದೇಶ ಹೊರ ಬೀಳ್ತಾ ಇದ್ದಂತೆ ಮಧ್ಯರಾತ್ರಿಯೇ ನೆಲಮಾಳಿಗೆಯಲ್ಲಿನ ದೇವರ ವಿಗ್ರಹಗಳಿಗೆ ಸಕಲ ಭದ್ರತೆಯೊಂದಿಗೆ ಆರತಿ ಬೆಳಗಲಾಯಿತು. ಮುಂದಿನ ದಿನಗಳಲ್ಲಿ ಬೆಳಗ್ಗೆ ಮಂಗಳ ಆರತಿ, ಭೋಗ ಆರತಿ, ಸೂರ್ಯಾಸ್ತದ ಆರತಿ ಹಾಗೂ ಶಾಯನ್ ಆರತಿಯನ್ನ ಬೆಳಗಲಾಗುವುದು. ವ್ಯಾಸರ ನೆಲಮಾಳಿಗೆಗೆ ಹೋಗುವ ಮಾರ್ಗವನ್ನು ಮಧ್ಯರಾತ್ರಿ 12 ಗಂಟೆ ಸುಮಾರಿಗೆ ತೆರೆಯಲಾಯಿತು. ಈ ಹಿಂದೆ ಜ್ಞಾನವ್ಯಾಪಿ ಮಸೀದಿ ಆವರಣದಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಆ ವೇಳೆ ವಿಗ್ರಹಗಳು ದೊರಕಿದ್ದವು. ಅದೇ ವಿಗ್ರಹಳನ್ನ ಈಗ ಪ್ರತಿಷ್ಛಾಪನೆ ಮಾಡಲಾಗಿದೆ. ಪೂಜೆ ನಡೆಸಲಾಗುತ್ತಿರುವ ಹಿನ್ನೆಲೆಯಲ್ಲಿ ಈ ಪ್ರದೇಶದ ಸುತ್ತ-ಮುತ್ತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಅಲ್ಲದೇ ಇಲ್ಲ-ಸಲ್ಲದ ವದಂತಿಗಳು ಹರಡದಂತೆ ಸಾಮಾಜಿಕ ಜಾಲತಾಣಗಳ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ.
ಈ ಪ್ರತಿಕ್ರಿಯೆ ನೀಡಿರುವ ಕಾಶಿ ವಿಶ್ವನಾಥ ಟ್ರಸ್ಟ್ ಅಧ್ಯಕ್ಷ ನಾಗೇಂದ್ರ ಪಾಂಡೆ ನ್ಯಾಯಾಲಯದ ಆದೇಶದಂತೆ ನಾವು ಅಗತ್ಯ ಪ್ರಕ್ರಿಯೆಗಳನ್ನು ನಡೆಸುತ್ತೇವೆ ಎಂದು ಹೇಳಿದ್ದಾರೆ. ಅಲ್ಲದೇ ನಮ್ಮ ದೇವರನ್ನು ಪೂಜಿಸೋ ನಮ್ಮ ಹಕ್ಕು ನಮಗೆ ಸಿಕ್ಕಿದೆ. ನಮ್ಮ ಬಳಿ ಅಗತ್ಯವಿರುವಷ್ಟು ಅರ್ಚಕರು ಇದ್ದಾರೆ ನಾವು ಪೂಜೆ ಮಾಡುವುದನ್ನು ಮುಂದುವರೆಸುತ್ತೇವೆ ಎಂದಿದ್ದಾರೆ.