25.5 C
Bengaluru
Friday, September 20, 2024

ಆದಾಯ ಮೀರಿದ ಆಸ್ತಿ ಗಳಿಕೆ,ಜಮೀರ್ ಅಹ್ಮದ್ ಖಾನ್‌ಅರ್ಜಿ ವಜಾಗೊಳಿಸಿದ‌ ಹೈಕೋರ್ಟ್

#High Court #dismisses #Zameer Ahmed Khans #plea # ​​wealth beyond income

ಬೆಂಗಳೂರು;ಜಮೀರ್ ಅಹ್ಮದ್ ಖಾನ್‌ಗೆ ಭಾರೀ ಹಿನ್ನಡೆ ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಸಚಿವ ಜಮೀರ್ ಅಹ್ಮದ್ ಖಾನ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ₹80.44 ಕೋಟಿ ಮೌಲ್ಯದ ಅಕ್ರಮ ಆಸ್ತಿ ಹೊಂದಿರುವ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ಜಮೀರ್ ವಿರುದ್ಧ ದಾಖಲಿಸಿದ್ದ ಭ್ರಷ್ಟಾಚಾರ(Corruption) ಪ್ರಕರಣದ ತನಿಖೆಯ ರದ್ದು ಕೋರಿ ಜಮೀರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸಚಿವ ಜಮೀರ್ ಅರ್ಜಿ ವಜಾಗೊಳಿಸಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಆದೇಶಿಸಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಈಗಾಗಲೇ ಮೇಲ್ಮನವಿ ಬಾಕಿ ಇದೆ. ಹೀಗಾಗಿ ಹೈಕೋರ್ಟ್(Highcourt) ಆದೇಶ ತಡೆಹಿಡಿಯುವಂತೆ ಜಮೀರ್ ಪರ ವಕೀಲರ ಮನವಿ ಮಾಡಿದ್ದರು.2019 ರ ಜೂನ್​ನಲ್ಲಿ, ಜಮೀರ್ ಮತ್ತು ಐ-ಮಾನಿಟರಿ ಅಡ್ವೈಸರಿ ಪ್ರೈವೇಟ್ ಲಿಮಿಟೆಡ್‌ನ ಪ್ರವರ್ತಕ ಮೊಹಮ್ಮದ್ ಮನ್ಸೂರ್ ಖಾನ್ ನಡುವಿನ ಕೆಲವು ವಹಿವಾಟಿನ ಕುರಿತು ಜಾರಿ ನಿರ್ದೇಶನಾಲಯದಿಂದ ವರದಿಯನ್ನು ಪಡೆದ ನಂತರ ಎಸಿಬಿ(ACB) ಅವರ ವಿರುದ್ಧ ಪ್ರಕರಣ ದಾಖಲಿಸಿತ್ತು.ಫ್ಲ್ಯಾಟ್ ಖರೀದಿಸಲು 9.38 ಕೋಟಿ ರೂ. ಜಮೀರ್‌ಗೆ ಒಟ್ಟು 63 ಕೋಟಿ ರೂ. ಪಾವತಿಸಿದ್ದಾಗಿ ಮನ್ಸೂರ್ ಖಾನ್ ಹೇಳಿಕೆಯನ್ನು ಜಾರಿ ನಿರ್ದೇಶನಾಲಯ(ED) ದಾಖಲಿಸಿಕೊಂಡಿತ್ತು. ಇದರ ನಂತರ, 2021 ರ ಆಗಸ್ಟ್ ನಲ್ಲಿ ಎಸಿಬಿ(ACB) ಅಧಿಕಾರಿಗಳು ಜಮೀರ್ ಅವರ ಕಚೇರಿ ಹಾಗೂ ನಿವಾಸದ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಿದ್ದರು. ಹಲವಾರು ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.

Related News

spot_img

Revenue Alerts

spot_img

News

spot_img