29.2 C
Bengaluru
Sunday, February 25, 2024

ಸಿದ್ದರಾಮಯ್ಯ ಪ್ರಮಾಣವಚನಕ್ಕೆಯಾವ ಪಕ್ಷದ ಯಾವ ನಾಯಕರಿಗೆ ಆಮಂತ್ರಣ ನೀಡಲಾಗಿದೆ,ಇಲ್ಲಿದೆ ಪಟ್ಟಿ

ಬೆಂಗಳೂರು ಮೇ 20:ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್‌ನ ಹೊಸ ಸರ್ಕಾರ ಶನಿವಾರ ಅಸ್ತಿತ್ವಕ್ಕೆ ಬರಲಿದೆ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಉಪ ಮುಖ್ಯಮಂತ್ರಿಯಾಗಿ ಮತ್ತು 8 ಮಂದಿ ಶಾಸಕರು ಸಚಿವರಾಗಿ ಇಂದು ಮಧ್ಯಾಹ್ನ 12.30 ಕ್ಕೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಜ್ಯಪಾಲರಾದ ತ್ಯಾವರಚಂದ್‌ ಗೆಹ್ಲೋಟ್‌ ಅವರು ಪ್ರತಿಜ್ಞಾವಿಧಿಯನ್ನು ಬೋಧಿಸಲಿದ್ದಾರೆ. ದೇಶದ ರಾಜಕೀಯ ಕ್ಷೇತ್ರದ ಹಲವಾರು ಗಣ್ಯ ವ್ಯಕ್ತಿಗಳನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಯಾವ ಪಕ್ಷದ ಯಾವ ನಾಯಕರಿಗೆ ಆಮಂತ್ರಣ ನೀಡಲಾಗಿದೆ ಎಂಬುದರ ವಿವರವಾದ ಪಟ್ಟಿಯನ್ನು ನಿಯೋಜಿತ ಮುಖ್ಯಮಂತ್ರಿಯವರ ಕಾರ್ಯಾಲಯ ಬಿಡುಗಡೆ ಮಾಡಿದೆ.

ಇಲ್ಲಿದೆ ಪಟ್ಟಿ

 1. ಎಂಕೆ ಸ್ಟಾಲಿನ್ – ತಮಿಳುನಾಡು ಮುಖ್ಯಮಂತ್ರಿ (ಡಿಎಂಕೆ)
 2. ನಿತೀಶ್ ಕುಮಾರ್- ಬಿಹಾರ ಮುಖ್ಯಮಂತ್ರಿ (ಜೆಡಿಯು)
 3. ಮಮತಾ ಬ್ಯಾನರ್ಜಿ- ಪಶ್ಚಿಮ ಬಂಗಾಳ ಮುಖ್ಯಮಂತ್ರಿ (ಟಿಎಂಸಿ)
 4. ಹೇಮಂತ್ ಸೋರೆನ್- ಜಾರ್ಖಂಡ್ ಮುಖ್ಯಮಂತ್ರಿ (ಜೆಎಂಎಂ)
 5. ತೇಜಸ್ವಿ ಯಾದವ್- ಬಿಹಾರದ ಉಪ ಮುಖ್ಯಮಂತ್ರಿ (ಆರ್‌ಜೆಡಿ)
 6. ಶರದ್ ಪವಾರ್- ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ (ಎನ್‌ಸಿಪಿ)
 7. ಉದ್ಧವ್ ಠಾಕ್ರೆ- ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ (ಶಿವಸೇನಾ)
 8. ಅಖಿಲೇಶ್ ಯಾದವ್ – ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ (ಸಮಾಜವಾದಿ ಪಾರ್ಟಿ)
 9. ಫಾರೂಕ್ ಅಬ್ದುಲ್ಲಾ- ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ (ನ್ಯಾಷನಲ್ ಕಾನ್ಫರೆನ್ಸ್)
 10. ಮೆಹಬೂಬಾ ಮುಫ್ತಿ, ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ (ಪಿಡಿಪಿ)
 11. ಸೀತಾರಾಮ್ ಯೆಚೂರಿ- ಸಿಪಿಎಂ ಪ್ರಧಾನ ಕಾರ್ಯದರ್ಶಿ
 12. ಡಿ. ರಾಜ- ಸಿಪಿಐ ಪ್ರಧಾನ ಕಾರ್ಯದರ್ಶಿ
 13. ಲಲ್ಲನ್ ಸಿಂಗ್- ಜೆಡಿಯು ಅಧ್ಯಕ್ಷ
 14. ವೈಕೋ- ಎಂಡಿಎಂಕೆ ಅಧ್ಯಕ್ಷ
 15. ಎನ್.ಕೆ. ಪ್ರೇಮಚಂದ್ರನ್, ಆರ್‌ಎಸ್‌ಪಿ ಅಧ್ಯಕ್ಷ
 16. ದೀಪಂಕರ ಭಟ್ಟಾಚಾರ್ಯ- ಸಿಪಿಐಎಂಎಲ್ ಪ್ರಧಾನ ಕಾರ್ಯದರ್ಶಿ
 17. ಡಾ. ತೋಲ್ ತಿರುಮಾವಳವನ್- ವಿಸಿಕೆ ಅಧ್ಯಕ್ಷ
 18. ಜಯಂತ್ ಚೌಧರಿ- ಆರ್‌ಎಲ್‌ಡಿ ಅಧ್ಯಕ್ಷ
 19. ಜೋಸ್ ಕೆ. ಮಣಿ- ಕೇರಳ ಕಾಂಗ್ರೆಸ್ ಅಧ್ಯಕ್ಷ
 20. ಸಾದಿಕ್ ಅಲಿ ತಂಗಳ್- ಐಯುಎಂಎಲ್ ಅಧ್ಯಕ್ಷ

Related News

spot_img

Revenue Alerts

spot_img

News

spot_img