28.6 C
Bengaluru
Thursday, May 23, 2024

ಆನ್ಲೈನ್ ಮೂಲಕ ಪಡಿತರ ಚೀಟಿ ತಿದ್ದುಪಡಿ ಹೆಸರು ಸೇರ್ಪಡೆ ಮಾಡಲು ಇಲ್ಲಿದೆ ಮಾಹಿತಿ

#Here # information # add ration card# correction name #through online

ಬೆಂಗಳೂರು;ದೇಶದಲ್ಲಿನ ಜನರಿಗೆ ಪಾನ್ ಕಾರ್ಡ್(Pancard), ಆಧಾರ್ ಕಾರ್ಡ್(Aadhaar card), ಮತದಾರರ ಗುರುತಿನ ಚೀಟಿ, ಮತ್ತು ಪಡಿತರ ಚೀಟಿ ಮುಖ್ಯ ದಾಖಲೆಯಾಗಿದೆ. ಯಾವುದೇ ಕಚೇರಿಗಳಿಗೆ ಅಲೆದಾಡದೇ ಆನ್‌ಲೈನ್ ಸಹಾಯದಿಂದ ನಿಮ್ಮ ಮನೆಯಲ್ಲೇ ಕುಳಿತು ರೇಷನ್ ಕಾರ್ಡ್‌(Rationcard)ಗೆ ಕುಟುಂಬದ ಹೊಸ ಸದಸ್ಯರ ಹೆಸರನ್ನು ಸೇರ್ಪಡೆ ಮಾಡಬಹುದು ಹಾಗೂ ಹೆಸರು ತಿದ್ದುಪಡಿ ಮಾಡಬಹುದು.ರೇಷನ್ ಕಾರ್ಡ್ ನಲ್ಲಿ ಸಣ್ಣ ತಪ್ಪಾಗಿದ್ದರು ಕೂಡ ನಿಮ್ಮ ಬ್ಯಾಂಕ್ ಖಾತೆಗೆ ಸರ್ಕಾರದಿಂದ ಡಿ ಬಿ ಟಿ (DBT) ಬಾರದೇ ಇರಬಹುದು. ಇದರ ಜೊತೆಗೆ ರೇಷನ್ ಕಾರ್ಡ್ ಈ ಕೆ ವೈ ಸಿ (E-KYC) ಆಗುವುದು ಕೂಡ ಕಡ್ಡಾಯವಾಗಿದೆ. ನೀವು ನಿಮ್ಮ ರೇಷನ್ ಕಾರ್ಡ್ ನೊಂದಿಗೆ ಆಧಾರ್ ಲಿಂಕ್ ಮಾಡಿಕೊಳ್ಳದೆ ಇದ್ದರೆ ಸರ್ಕಾರದ ಯೋಜನೆ ಪಡೆದುಕೊಳ್ಳಲು ಸಾಧ್ಯವಿಲ್ಲ.ನಿಮ್ಮ ಪಡಿತರ ಚೀಟಿಯ ಮೂಲ ದಾಖಲೆ ಮತ್ತು ಮಗುವಿನ ಜನನ ಪ್ರಮಾಣಪತ್ರ ಜೊತೆಗೆ ಮಗುವಿನ ಪೋಷಕರ ಆಧಾರ್ ಕಾರ್ಡ್‌ ಅನ್ನು ಹೊಂದಿರಬೇಗುತ್ತದೆ. ಹೆಂಡತಿಯ ಹೆಸರನ್ನು ಸೇರ್ಪಡೆ ಮಾಡುವಾಗ ಆ ಮಹಿಳೆಯ ಆಧಾರ್ ಮತ್ತು ಗಂಡನ ಮನೆಯ ಪಡಿತರ ಚೀಟಿ ಪ್ರತಿಯನ್ನು ನೀಡಬೇಕಾಗುತ್ತದೆ.

ಆನ್‌ಲೈನ್‌ ಮೂಲಕ ಪಡಿತರ ಚೀಟಿ ತಿದ್ದುಪಡಿಗೆ ಈ ಹಂತಗಳನ್ನು ಅನುಸರಿಸಿ

*ರಾಜ್ಯ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಾ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ

*ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವೆಬ್ಸೈಟ್ ಎಂದರೆ https://ahar.kar.nic.in/ ಈ ವೆಬ್ಸೈಟ್ ಗೆ ನೀಡುವುದರ ಮೂಲಕ ಲಾಗಿನ್ ಆಗಬೇಕು

*ಲಾಗಿನ್ ಆದ ನಂತರ ಆ ಪುಟದಲ್ಲಿರಿ ಈ ಸೇವೆಗಳು ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಅದರಲ್ಲಿ ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿ ಅಥವಾ ಹೊಸ ಸೇರ್ಪಡೆಗೆ ವಿನಂತಿ ಆಯ್ಕೆಯನ್ನು ಕ್ಲಿಕ್ ಮಾಡಿ

*ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿದ ನಂತರ ಎಲ್ಲ ದಾಖಲೆಗಳನ್ನು ಸ್ಕ್ಯಾನ್ ಪ್ರತಿಗಳನ್ನು ಅಪ್ಲೋಡ್ ಮಾಡಬೇಕು

*ಫಾರ್ಮ್ ಅನ್ನು ಸಬ್‌ಮಿಟ್ ಮಾಡಿದ ನಂತರ ನೋಂದಣಿ ಸಂಖ್ಯೆ ಸಿಗುತ್ತದೆ. ಆ ನೋಂದಣಿ ಸಂಖ್ಯೆ ಮೂಲಕ ವೆಬ್‌ಸೈಟ್ ಗೆ ಲಾಗ್‌ಇನ್‌ ಆಗಬಹುದು ಹಾಗೂ ಫಾರ್ಮ್ ಅನ್ನು ಟ್ರ್ಯಾಕ್ ಮಾಡಬಹುದು.

*ನೀವು ಕೊಟ್ಟಿರುವ ಎಲ್ಲಾ ಮಾಹಿತಿಗಳು ಸರಿಯಾಗಿ ಇದ್ದಲ್ಲಿ ನಿಮ್ಮ ಅಪ್ಲಿಕೇಶನ್ ಸಕ್ಸಸ್ ಆಗುತ್ತದೆ.ನೀಡಲಾದ ಎಲ್ಲ ದಾಖಲಾತಿ ಸರಿಯಾಗಿದ್ದರೆ ಮನೆಗೆ ಹೊಸ ಪಡಿತರ ಚೀಟಿಯನ್ನೂ ಕಳಿಸಲಾಗುತ್ತದೆ.

Related News

spot_img

Revenue Alerts

spot_img

News

spot_img