ಬೆಂಗಳೂರು, ಮೇ. 30 : ನೀವು ಹಣ ಉಳಿತಾಯ ಮಾಡುವ ಸಲುವಾಗಿ ಆರ್ ಡಿ, ಎಫ್ ಡಿ ಅಲ್ಲಿ ಹಣವನ್ನೂ ಹೂಡಿಕೆ ಮಾಡುತ್ತಿದ್ದೀರಾ..? ಹಾಗಾದರೆ, ಹೆಚ್ಚಿನ ಬಡ್ಡಿಯನ್ನು ನೀಡುವ ಬ್ಯಾಂಕ್ ನಲ್ಲಿ ಎಫ್ ಡಿ ಖಾತೆಯನ್ನು ತೆರೆಯಿರಿ. ನಿಮ್ಮ ಸ್ಥಿರ ಠೇವಣಿ ಹಣಕ್ಕೆ ಆಗ ಅಧಿಕ ಬಡ್ಡಿ ಸಿಗುತ್ತದೆ. ಇದರಿಂದ ನಿಮ್ಮ ರಿಟರ್ನ್ಸ್ ಹೆಚ್ಚಾಗುತ್ತದೆ. ಇತ್ತೀಚೆಗೆ ಎಚ್‌ಡಿಎಫ್‌ಸಿ ಬ್ಯಾಂಕ್ ಎರಡು ವಿಶೇಷ ಫಿಕ್ಸಿಡ್ ಡೆಪಾಸಿಟ್ ಗಳಿಗೆ ಬಡ್ಡಿದರವನ್ನು ಹೆಚ್ಚಳ ಮಾಡಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ನಲ್ಲಿ ಬಡ್ಡಿದರ ಎಷ್ಟಿದೆ ಎಂಬುದನ್ನು ತಿಳಿಯೋಣ ಬನ್ನಿ..
ಎಚ್‌ಡಿಎಫ್‌ಸಿ ಬ್ಯಾಂಕ್ ಬಡ್ಡಿ ದರಗಳನ್ನು ಹೆಚ್ಚಳ ಮಾಡಿದ್ದು, ಇದರ ಮಾಹಿತಿಯನ್ನು ತನ್ನ ವೆಬ್ ಸೈಟ್ ನಲ್ಲಿ ನೀಡಿದೆ. ಇದರ ಪ್ರಕಾರ ಯಾವ ಯೋಜನೆಗೆ ಎಷ್ಟು ಬಡ್ಡಿ ದರವೆಂದು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಜೊತೆಗೆ ಎಚ್‌ಡಿಎಫ್‌ಸಿ ಬ್ಯಾಂಕ್ ನ ಹೊಸ ಎರಡು ಪ್ಲಾನ್ ಗಳ ಬಗ್ಗೆಯೂ ಮಾಹಿತಿಯನ್ನು ತಿಳಿಯಿರಿ.
ಎಚ್‌ಡಿಎಫ್‌ಸಿ ಬ್ಯಾಂಕ್ ಫಿಕ್ಸಿಡ್ ಡೆಪಾಸಿಟ್ ನಲ್ಲಿ ಹೊಸ ಎರಡು ವಿಶೇಷ ಪ್ಲಾನ್ ಗಳನ್ನು ನೀಡಿದೆ. ಅದರ ಪ್ರಕಾರ, 35 ತಿಂಗಳ ಅವಧಿಯ ಎಫ್‌ಡಿ ಮೇಲೆ ಶೇ. 7.20 ರಷ್ಟು ಬಡ್ಡಿದರವನ್ನು ನೀಡುತ್ತಿದ್ದು, 55 ತಿಂಗಳ ಎಫ್ ಡಿ ಮೇಲೆ ಶೇ. 7.25ರಷ್ಟು ಬಡ್ಡಿ ದರವನ್ನು ನೀಡುತ್ತಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವನ್ನು ಪರಿಷ್ಕರಿಸಿದೆ. ಸಾಮಾನ್ಯ ನಾಗರಿಕರಿಗೆ 7 ದಿನದಿಂದ 10 ವರ್ಷಗಳ ಅವಧಿಯ ಎಫ್‌ಡಿ ಮೇಲೆ ಶೇ. 3 ರಿಂದ ಶೇ. 7.25ರಷ್ಟು ಬಡ್ಡಿದರ ನಿಗದಿಪಡಿಸಿದೆ. ಹಿರಿಯ ನಾಗರಿಕರಿಗೆ ಎಲ್ಲದರ ಮೇಲೂ ಐವತ್ತು ಪೈಸೆ ಹೆಚ್ಚಿನ ಬಡ್ಡಿ ಅನ್ನು ನೀಡುತ್ತಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್ ನಲ್ಲಿ 2 ವರ್ಷ 11 ತಿಂಗಳು ಅಂದರೆ 35 ತಿಂಗಳ ಎಫ್‌ಡಿ ಮೇಲೆ ಸಾಮಾನ್ಯರಿಗೆ ಶೇಕಡ 7.20 ಬಡ್ಡಿದರ ಹಾಗೂ ಹಿರಿಯ ನಾಗರಿಕರಿಗೆ ಶೇಕಡ 7.70 ಬಡ್ಡಿದರ ಸಿಗುತ್ತದೆ. 4 ವರ್ಷ 7 ತಿಂಗಳ ವಿಶೇಷ ಎಫ್‌ಡಿ ಗೆ ಸಾಮಾನ್ಯರಿಗೆ ಶೇ. 7.25 ಬಡ್ಡಿದರವನ್ನು ಹಾಗೂ ಹಿರಿಯ ನಾಗರಿಕರಿಗೆ ಶೇಕಡ 7.75ರಷ್ಟು ವಿಧಿಸಲಾಗುತ್ತಿದೆ.