27.6 C
Bengaluru
Thursday, October 3, 2024

ಕಿಂಗ್ ಖಾನ್ ಅವರ ಮನ್ನತ್ ಮನೆ ಎಷ್ಟು ಕಾಸ್ಟ್ಲಿ ಗೊತ್ತಾ..?

ಬೆಂಗಳೂರು, ಮೇ. 16 : ಬಾಲಿವುಡ್‌ ಸ್ಟಾರ್ ಶಾರುಖ್ ಖಾನ್ ಅವರು ಮುಂಬೈನಲ್ಲಿ ವಾಸವಿದ್ದಾರೆ. ಅವರ ಇಷ್ಟಪಟ್ಟು ಖರೀದಿಸಿದ ಅವರ ಕನಸಿನ ಸೌಧ ‘ಮನ್ನತ್’ ಮುಂಬೈನ ಬಾಂದ್ರಾದ ಅತಿ ದುಬಾರಿ ಪ್ರದೇಶದಲ್ಲಿದೆ. ಇವರ ಮನ್ನತ್ ಮನೆಯಿಂದ ಸಮುದ್ರ ಕೂಡ ಕಾಣುತ್ತದೆ. ಈ ಸಮುದ್ರದ ದಡದಲ್ಲಿ ಶಾರುಖ್‌ ಖಾನ್‌ ಅವರು ನಿತ್ಯ ವಾಕಿಂಗ್‌ ಹಾಗೂ ಜಾಗಿಂಗ್‌ ಮಾಡುತ್ತಾರಂತೆ. ಈ ಮನೆಯಲ್ಲಿ ಶಾರುಖ್‌ ಖಾನ್, ಪತ್ನಿ ಗೌರಿ ಖಾನ್, ಮಕ್ಕಳಾದ ಆರ್ಯನ್ ಖಾನ್, ಸುಹಾನಾ ಖಾನ್, ಅಬ್ರಹಾಂ ವಾಸ ಮಾಡುತ್ತಿದ್ದಾರೆ.

ಈ ಮನೆಯಲ್ಲಿ ಜಿಮ್, ಈಜುಕೊಳ, ಥಿಯೇಟರ್, ಬೃಹತ್ತಾದ ಕೊಠಡಿಗಳು ಸೇರಿ ಎಲ್ಲ ಸವಲತ್ತುಗಳು, ವೈಭೋಗವೂ ಕೂಡ ಇದೆ. ಮನ್ನತ್ 27 ಸಾವಿರ ಚದರ ಅಡಿ ವಿಸ್ತಾರವಾಗಿದೆ. ಈ ಬಂಗಲೆಯನ್ನು ಶಾರುಖ್‌ ಖಾನ್‌ ಅವರು 2001 ರಲ್ಲಿ 13 ಕೋಟಿ ರೂಪಾಯಿ ಕೊಟ್ಟು ಖರೀದಿಸಿದ್ದರು. ಇದನ್ನು 1920 ರಲ್ಲಿ ನಿರ್ಮಿಸಲಾಗಿದ್ದು, ಗ್ರೇಡ್ 3 ಹೆರಿಟೇಜ್ ವಿಲ್ಲಾ ಆಗಿದೆ. ಇನ್ನು ಇದರ ಮತ್ತೊಂದು ವಿಶೇಷವೆಂದರೆ ಇದನ್ನು ಆಧುನಿಕ ಇಟಾಲಿಯನ್ ವಾಸ್ತುಶಿಲ್ಪಿಗಳೊಂದಿಗೆ ನಿರ್ಮಾಣ ಮಾಡಲಾಗಿದೆ.

ಈ ಮನೆಯ ಇಂಟಿರಿಯರ್‌ ಡಿಸೈನರ್‌ ಗೌರಿ ಖಾನ್‌ ಅಗಿದ್ದಾರೆ. ಈಗ ಈ ಬಂಗಲೆಯ ಬೆಲೆ ಸುಮಾರು 200 ಕೋಟಿ ರೂ. ಗೆ ಏರಿಕೆಯಾಗಿದೆ. ಅಂದರೆ, 20 ವರ್ಷಗಳಲ್ಲಿ ಅದರ ಬೆಲೆ 15 ಪಟ್ಟು ಹೆಚ್ಚಾಗಿದೆ. ಇಂಟೀರಿಯರ್ ಡಿಸೈನರ್ ಆಗಿರುವ ಗೌರಿ ಖಾನ್ ಅವರ ಮನೆಗೆ ದುಬಾರಿ ಹೋಂ ಡೆಕೋರೇಷನ್ ಮಾಡುತ್ತಿರುತ್ತಾರೆ. ಶಾರುಖ್ ಅವರ ಮನೆಯ ಡಸ್ಟ್ಬಿನ್ ಬೆಲೆ 15 ಸಾವಿರ ರೂಪಾಯಿ ಅಂತೆ. ಈ ಬಗ್ಗೆ ಜನ ಕೇಳಿ ಟ್ರೋಲ್ ಮಾಡಿದ್ದರು. ಇವರ ಮನೆಯ ನೇಮ್ ಪ್ಲೇಟ್ ಬೆಲೆ 25 ಲಕ್ಷ ರೂಪಾಯಿ.

ಇನ್ನು ಟಿವಿಗೆ ಬರೋಬ್ಬರಿ 30-40 ರೂ. ಅನ್ನು ಖರ್ಷು ಮಾಡಲಾಗಿದೆ. ಮನ್ನತ್ ನಲ್ಲಿ ಒಟ್ಟು 12 ಟಿವಿಗಳಿವೆಯಂತೆ. ಲಿವಿಂಗ್ ರೂಮ್ ಹಾಗೂ ಎಲ್ಲರ ಬೆಡ್ ರೂಮ್, ಜಿಮ್ ರೂಮ್ ಗಳಲ್ಲಿ ಟಿವಿ ಇಡಲಾಗಿದೆಯಂತೆ. ಶಾರುಖ್ ಖಾನ್ ಅವರ ಮನೆಯಲ್ಲಿ ಎಲ್ಲವೂ ಸಿಕ್ಕಾಪಟ್ಟೆ ಕಾಸ್ಟ್ಲಿ ವಸ್ತುಗಳೇ ಇವೆ. ಇನ್ನು ಇಂಟಿರಿಯರ್ ಡಿಸೈನ್ ಅನ್ನು ಗೌರಿ ಖಾನ್ ಬಿಟ್ಟು ಬೇರೆ ಯಾರೂ ಬದಲಿಸುವಂತಿಲ್ಲ.

Related News

spot_img

Revenue Alerts

spot_img

News

spot_img