22.4 C
Bengaluru
Saturday, June 15, 2024

ದೀಪಾವಳಿ ಹಬ್ಬಕ್ಕೆ ಬಿಬಿಎಂಪಿಯಿಂದ ಮಾರ್ಗಸೂಚಿ

#Guidelines #diwali #festival #bbmp

ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ನಡೆದ ಅತ್ತಿಬೆಲೆ ದುರಂತ, ಸಾಲು ಸಾಲು ಅಗ್ನಿ ಅವಘಡ ಹಿನ್ನೆಲೆ ಬಿಬಿಎಂಪಿಯು ಮುನ್ನೆಚ್ಚರಿಕಾ ಕ್ರಮಕ್ಕೆ ಮುಂದಾಗಿದ್ದು, ವಟಾಕಿ ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ.ಧಾರ್ಮಿಕ ಮೈದಾನಗಳು, ಶಾಲಾ-ಕಾಲೇಜು ಮೈದಾನಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿಯಂತ್ರಣಕ್ಕೆ ಒಳಪಡುವ ಕಾರ್ಖಾನೆ, ರಕ್ಷಣಾ ಇಲಾಖೆ ಮೈದಾನಗಳು ಸೇರಿದಂತೆ ಖಾಸಗಿ ಮೈದಾನಗಳಲ್ಲಿಯೂ ಪಟಾಕಿ ಮಾರಾಟವನ್ನು ನಿಷೇಧಿಸಲಾಗಿದೆ.ಬೆಂಕಿ ಅವಘಡ ಮತ್ತು ಪರಿಸರ ಮಾಲಿನ್ಯ ತಡೆ ಗಟ್ಟಲು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಬಿಬಿ ಎಂಪಿ(BBMP) ಆಯುಕ್ತರು ಮಾರ್ಗಸೂಚಿ ಹೊರಡಿಸಿದ್ದು, ಎಲ್ಲೆಂದರಲ್ಲಿ ಪಟಾಕಿ ಅಂಗಡಿಯನ್ನು ತೆರೆಯುವಂತಿಲ್ಲ ಮತ್ತು ಪಟಾಕಿ ಸಿಡಿಸುವಂತೆಯೂ ಇಲ್ಲ. ನಗರದಲ್ಲಿ ದೀಪಾವಳಿಗೆ ಗುರುತಿಸಿರುವ ಜಾಗದಲ್ಲಿ ಮಾತ್ರ ತಾತ್ಕಾ ಲಿಕ ಪಟಾಕಿ ಮಳಿಗೆ ತೆರೆಯಬೇಕು ಎಂದು ಹೇಳಿದ್ದಾರೆ.ದೀಪಾವಳಿ ಹಬ್ಬಕ್ಕೆ ಕೌಂಡ್ ಡೌನ್ ಆರಂಭವಾಗಿದೆ. ಪಟಾಕಿ ಮಾರಾಟ ವಿಚಾರಕ್ಕೆ ಕೆಲ ಪಾಲಿಕೆಯಿಂದ ಮುನ್ನೆಚ್ಚರಿಕೆಯಾಗಿ 70 ಮೈದಾನನದಲ್ಲಿ 426 ಪಟಾಕಿ ಮಳಿಗೆಗೆ ಒಪ್ಪಿಗೆ ದೊರೆತಿದೆ.ಪಟಾಕಿ ಮಳಿಗೆಗೆ ಎಲ್ಲಿ ಒಪ್ಪಿಗೆ;ಬೆಂಗಳೂರು ದಕ್ಷಿಣ ವಲಯದ 9 ಮೈದಾನಗಳಲ್ಲಿ 87 ಮಳಿಗೆ, ಮಹದೇವಪುರ ವಲಯದ 13 ಮೈದಾನಗಳಲ್ಲಿ 50 ಮಳಿಗೆ, ಬೊಮ್ಮನಹಳ್ಳಿ ವಲಯದ 3 ಮೈದಾನಗಳಲ್ಲಿ 6 ಮಳಿಗೆ, ಪಶ್ಚಿಮ ವಲಯದ 4 ಮೈದಾನಗಳಲ್ಲಿ 63 ಮಳಿಗೆ, ಪೂರ್ವ ವಲಯದಲ್ಲಿ 23 ಮೈದಾನಗಳಲ್ಲಿ 101 ಮಳಿಗೆ, ದಾಸರಹಳ್ಳಿ ವಲಯದ 2 ಮೈದಾನಗಳಲ್ಲಿ 18 ಮಳಿಗೆ, ಆರ್.ಆರ್.ನಗರ ವಲಯದಲ್ಲಿ 5 ಮೈದಾನಗಳನ್ನು ಗುರುತಿಸಿ 62 ಮಳಿಗೆಗೆ ತಾತ್ಕಾಲಿಕ ಅನುಮತಿ ನೀಡಲಾಗಿದೆ.

ಮಾರ್ಗಸೂಚಿಗಳೇನು?

*ಪಾಲಿಕೆವತಿಯಿಂದ 70 ಮೈದಾನಗಳಲ್ಲಿ 426 ಮಳಿಗೆಗಳಿಗೆ ಅನುಮತಿ ನೀಡಲಾಗಿದೆ.

* ಬಿಬಿಎಂಪಿ ಗುರುತಿಸಿದ ಮೈದಾನ

*ಪ್ರತಿ ಮಳಿಗೆಯ ನಡುವೆ ಮೂರರಿಂದ 4 ಅಡಿ ಅಂತರವಿದ್ದು, ಬೆಂಕಿ ನಂದಿಸುವ ಉಪಕರಣ ಕೂಡ ಕಡ್ಡಾಯವಾಗಿ ಇರಬೇಕು

*ಅವಧಿ ಮುಗಿದ ಪಟಾಕಿ ಮಾರಾಟ ಮಾಡಿದರೆ ದಂಡ ವಿಧಿಸುವಂತೆ ಸೂಚಿಸಿದೆ.

*ಒಂದು ಮೈದಾನದಲ್ಲಿ 10 ಮಳಿಗೆಗಳಿಗೆ ಮಾತ್ರ ಅವಕಾಶ

*ಮಳಿಗೆಯ ಪರವಾನಗಿ ಪ್ರದರ್ಶಿಸಬೇಕು

*ಬಿಬಿಎಂಪಿ ಗುರುತು ಮಾಡಿದ ಸ್ಥಳಗಳಲ್ಲಿ ಮಾತ್ರ ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ

*ಆಯಾ ವಲಯ ಆಯುಕ್ತರು ಹಾಗೂ ಜಂಟಿ ಆಯುಕ್ತರಿಂದ ಸುರಕ್ಷತೆ ಪರಿಶೀಲನೆ ನಡೆಸಿ ಮಳಿಗೆ ಸ್ಥಾಪನೆಗೆ ಅವಕಾಶ ನೀಡಲಾಗುವುದು.

Related News

spot_img

Revenue Alerts

spot_img

News

spot_img