25.5 C
Bengaluru
Friday, September 20, 2024

ಅಕ್ಟೋಬರ್‌ 1ರಿಂದ ಸ್ಟ್ಯಾಂಪ್ ಡ್ಯೂಟಿ ಮಾರ್ಗಸೂಚಿ ದರ ಹೆಚ್ಚಳ

#Guideline #rates # stamp duty #increased # October 1
ಬೆಂಗಳೂರು;ರಾಜ್ಯದಲ್ಲಿನ ಕಟ್ಟಡ, ಭೂಮಿ,ನಿವೇಶನ ಸೇರಿ ಸ್ಥಿರಾಸ್ತಿಯ ಮಾರ್ಗಸೂಚಿ ದರ ಅಕ್ಟೋಬರ್ 1ರಿಂದ ಪರಿಷ್ಕರಣೆಯಾಗಲಿದ್ದು, ಇದರಿಂದ ಸಹಜವಾಗಿಯೇ ಮುದ್ರಾಂಕ ಶುಲ್ಕ (Stamp duty)ದುಬಾರಿಯಾಗಲಿದೆ.ಭೂಮೌಲ್ಯ ಪರಿಷ್ಕರಣೆಗೆ (Land value revision)ಸಮಿತಿಗಳನ್ನು ರಚಿಸಲಾಗಿದೆ ಈ ಸಂಬಂಧ ಕಂದಾಯ ಇಲಾಖೆ ಸಿದ್ಧತೆ ನಡೆಸಿದ್ದು, ಅಧಿಕಾರಿಗಳನ್ನೊಳಗೊಂಡ ಉಪ ಸಮಿತಿಗಳನ್ನು ರಚಿಸಲಾಗಿದೆ.ಕಂದಾಯ ಸಚಿವ (Revenue Minister)ಕೃಷ್ಣಭೈರೇಗೌಡ ಅವರು ಹಿರಿಯ ಅಧಿಕಾರಿಗಳ ಸಭೆ ನಡೆಸಿ, ಕೆಲವು ಸೂಚನೆಗಳನ್ನು ನೀಡಿದ್ದಾರೆ.ಈ ಹಿಂದಿನ ವರ್ಷಗಳ ಲೆಕ್ಕಾಚಾರದ ಪ್ರಕಾರ ಕನಿಷ್ಠ ಶೇ.20ರಿಂದ ಗರಿಷ್ಠ 30ರವರೆಗೂ ಮಾರ್ಗಸೂಚಿದರ ಪರಿಷ್ಕರಣೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚಿನ ನೋಂದಣಿಗಳ ಡೇಟಾವನ್ನು ಪರಿಗಣಿಸಿ ಮಾರ್ಗಸೂಚಿ ದರ ನಿಗದಿ ಮಾಡುವಾಗ ಕೆಲ ಪ್ರಮುಖ ಪ್ರದೇಶಗಳಲ್ಲಿ ಈ ದರ ಸಹಜವಾಗಿ ಶೇ.70-80ರವರೆಗೂ ಹೆಚ್ಚಾಗಿರುತ್ತದೆ.ವಸತಿ ಹಾಗೂ ವಸತಿಯೇತರ ಪ್ರದೇಶದಲ್ಲಿ ಮಾರ್ಗಸೂಚಿ ದರಕ್ಕಿಂತ ಹೆಚ್ಚಿನ ಮೊತ್ತಕ್ಕೆ ಆಸ್ತಿ(Property) ಮಾರಾಟವಾದ ಸಂದರ್ಭದಲ್ಲಿ ಸಹಜವಾಗಿ ಅಂತ ಕಡೆ ಪರಿಷ್ಕೃತ ಮಾರ್ಗಸೂಚಿ ದರ(Revised Guideline Rate) ಗಣನೀಯವಾಗಿ ಹೆಚ್ಚಳವಾಗಲಿದೆ.ಅಕ್ಟೋಬರ್ 1ರ ಬಳಿಕ ಆಸ್ತಿ ಖರೀದಿಸುವವರು ಮುದ್ರಾಂಕ ಶುಲ್ಕ ಸ್ವತ್ತಿನ ಮಾರುಕಟ್ಟೆ ದರದ ಮೌಲ್ಯದ ಶೇ.5ರಷ್ಟು ಹಾಗೂ ನೋಂದಣಿ ಶುಲ್ಕ(Registration fee) 1ರಷ್ಟು, ಹೆಚ್ಚುವರಿ ಶುಲ್ಕ ಮತ್ತು ಸೆಸ್ ಶೇ.05ರಷ್ಟು ನಿಗದಿಯಾಗಿದ್ದು. ಮಾರ್ಗಸೂಚಿ ದರ ಪರಿಷ್ಕರಣೆಯಾದ ಬಳಿಕ ಈ ಶುಲ್ಕದ ಮೊತ್ತ ಹೆಚ್ಚಾಗಲಿದೆ,ಹೀಗಾಗಿ ಹೆಚ್ಚು ವೆಚ್ಚ ಮಾಡಬೇಕಾಗುತ್ತದೆ.ಪ್ರತಿವರ್ಷ ಸೆಪ್ಟೆಂಬರ್‌ನಲ್ಲಿ ಭೂಮೌಲ್ಯ ಪರಿಷ್ಕರಣೆ ನಡೆಯಬೇಕು,5 ವರ್ಷಗಳಿಂದ ಭೂ ಮೌಲ್ಯ ಪರಿಷ್ಕರಣೆ ಮಾಡಿಲ್ಲ ಚುನಾವಣೆ, ಕೋವಿಡ್ ಕಾರಣಕ್ಕೆ ಮುಂದೂಡಲಾಗಿತ್ತು,2021-220 12,655 ಕೋಟಿ ರೂ. ರಾಜಸ್ವ ಗುರಿ ನೀಡಲಾಗಿತ್ತು. ಶೇ.98 ಗುರಿ ಮುಟ್ಟಿದ್ದರೆ 2022-23ರಲ್ಲಿ 17 ಸಾವಿರ ಕೋಟಿ ರೂ. ಸಂಗ್ರಹವಾಗಿತ್ತು. 2023-24ನೇ ಸಾಲಿಗೆ ನೋಂದಣಿ ಮತ್ತು ಮುದ್ರಾಂಕದಿಂದ 25 ಸಾವಿರ ಕೋಟಿ ರೂ. ಸಂಗ್ರಹ ಗುರಿ ಹೊಂದಿದೆ

Related News

spot_img

Revenue Alerts

spot_img

News

spot_img