25.5 C
Bengaluru
Friday, September 20, 2024

ಜಿಎಸ್ ಟಿ ಆದಾಯ ಶೇ.15 ರಷ್ಟು ಹೆಚ್ಚಳ;₹1.68 ಲಕ್ಷ ಕೋಟಿ ಜಿಎಸ್ ಟಿ ಸಂಗ್ರಹ

#GST revenue #increased # 15% #GST collection # ₹1.68 lakh crore

ನವದೆಹಲಿ : 2023ರ ನವೆಂಬರ್’ನಲ್ಲಿ ಜಿಎಸ್ಟಿ(GST) ಆದಾಯ ಸಂಗ್ರಹವು ಸುಮಾರು 1.68 ಲಕ್ಷ ಕೋಟಿ ರೂ.ಗಳಷ್ಟಿದ್ದು, ಇದು ವಾರ್ಷಿಕ ಆಧಾರದ ಮೇಲೆ 15% ಹೆಚ್ಚಳವಾಗಿದೆ ಎಂದು ಸರ್ಕಾರ ಶುಕ್ರವಾರ ತಿಳಿಸಿದೆ.ನವೆಂಬ‌ರ್ ತಿಂಗಳಲ್ಲಿ ₹1,67,929 ಕೋಟಿ ಸಂಗ್ರಹವಾಗಿದೆ ಎಂದು ಹಣಕಾಸು ಇಲಾಖೆ ಬಹಿರಂಗಪಡಿಸಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ₹1.45 ಲಕ್ಷ ಕೋಟಿ GST ಸಂಗ್ರಹವಾಗಿತ್ತು. ಅಂದರೆ, ಈ ವರ್ಷದ ನವೆಂಬರ್‌ನಲ್ಲಿ ಶೇ.15ರಷ್ಟು ಒಟ್ಟು ಬೆಳವಣಿಗೆ ದಾಖಲಾಗಿದೆ. ಇದಲ್ಲದೆ, ಸರ್ಕಾರವು ಕೇಂದ್ರ ಜಿಎಸ್ಟಿಗೆ(GST) 37,878 ಕೋಟಿ ರೂ.ಗಳನ್ನು ಮತ್ತು ರಾಜ್ಯ ಜಿಎಸ್ಟಿಗೆ 31,557 ಕೋಟಿ ರೂ.ಗಳನ್ನು ಸಮಗ್ರ ಜಿಎಸ್ಟಿಯಿಂದ ಇತ್ಯರ್ಥಪಡಿಸಿದೆ. ಇದರ ಪರಿಣಾಮವಾಗಿ, ಇತ್ಯರ್ಥದ ನಂತರದ ತಿಂಗಳಲ್ಲಿ ಒಟ್ಟು ಆದಾಯವು ಕೇಂದ್ರಕ್ಕೆ 68,297 ಕೋಟಿ ರೂ ಮತ್ತು ರಾಜ್ಯ ಜಿಎಸ್ಟಿಗೆ 69,783 ಕೋಟಿ ರೂ.ಆಗಿದೆಇದರಲ್ಲಿ CGST ₹30,420 ಕೋಟಿ, SGST 38,226 GST ₹87,009 3 ಸೆಸ್ ₹12,274 ಕೋಟಿ ಸೇರಿವೆ. ಈ ವರ್ಷದ ಅಕ್ಟೋಬರ್‌ಗೆ ಹೋಲಿಸಿದರೆ (₹1.72 ಲಕ್ಷ ಕೋಟಿ) ಸಂಗ್ರಹದಲ್ಲಿ ಇಳಿಕೆಯಾಗಿದೆ.ಸತತ ಆರನೇ ಬಾರಿಗೆ ಜಿಎಸ್‌ಟಿ ಸಂಗ್ರಹವು ₹1.60 ಲಕ್ಷ ಕೋಟಿಯನ್ನು ದಾಟಿದೆ. ‘ಅರುಣಾಚಲ ಪ್ರದೇಶ, ನಾಗಾಲ್ಯಂಡ್‌, ಮಿಜೋರಾಂ, ತ್ರಿಪುರಾ, ಲಡಾಖ್‌ ರಾಜ್ಯಗಳಲ್ಲಿ ಹೆಚ್ಚಿನ ತೆರಿಗೆ ಸಂಗ್ರಹ ಆಗಿದೆ. ದೇಶದಲ್ಲಿ ಖರೀದಿ ಸಾಮರ್ಥ್ಯದಲ್ಲಿ ಏರಿಕೆ ಕಂಡುಬರುತ್ತಿದೆ ಎನ್ನುವುದನ್ನು ಇದು ಸೂಚಿಸುತ್ತಿದೆ ಎಂದು ಇವೈನ ತೆರಿಗೆ ಸಲಹೆಗಾರ ಸೌರಭ್‌ ಅಗರ್ವಾಲ್‌ ಹೇಳಿದ್ದಾರೆ.

Related News

spot_img

Revenue Alerts

spot_img

News

spot_img