ಬೆಂಗಳೂರು: ಕಾಂಗ್ರೆಸ್ ಪಕ್ಷದಿಂದ ಜಾರಿಗೆ ಬರುತ್ತಿರುವ ಮತ್ತೊಂದು ಬಹು ಬೇಡಿಕೆಯ ಗ್ಯಾರೆಂಟಿ ಯೋಜನೆ ‘ಗೃಹಲಕ್ಷ್ಮಿ’ ಈ ಯೋಜನೆಗೆ ಜುಲೈ 16 ರಿಂದ ಗೃಹ ಲಕ್ಮಿ ಕಾರ್ಯಕ್ರಮಕ್ಕೆ ಅರ್ಜಿ ನೋಂದಣಿ ಶುರುವಾಗಲಿದ್ದು, ಆಗಸ್ಟ್ 15 ಇಲ್ಲವೇ 16ರಂದು ನಿಮ್ಮ ಖಾತೆಗೆ ಹಣ ಬರಲಿದೆ ಅಂತ ಸಿಎಂಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಅವರು ಶುಕ್ರವಾರ ಬಜೆಟ್ ಮಂಡನೆ ಮುಗಿಸಿದ ಬೆನ್ನಲೇ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿದರು.ಇದೇ ವೇಳೆ ಅವರು ಮಾತನಾಡಿ, ಈ ಬಜೆಟ್ ಐದು ಗ್ಯಾರಂಟಿಗಳು ಮತ್ತು ನಮ್ಮ ಚುನಾವಣಾ ಪ್ರಣಾಳಿಕೆಗಳಲ್ಲಿ ತಿಳಿಸಿದ್ದ ಭರವಸೆಗಳನ್ನು ಒಳಗೊಂಡಿದೆ. ಇದು ಗ್ಯಾರಂಟಿ ಬಜೆಟ್ ಆಗಿದೆ ಅಂತ ತಿಳಿಸಿದರು.
ಇನ್ನೂ ಗ್ಯಾರಂಟಿಗಳ ಬಗ್ಗೆ ವಿಪಕ್ಷದವರು ನಮ್ಮನ್ನು ಪ್ರಶ್ನೆ ಮಾಡಿದ್ದಾರೆ. ಗ್ಯಾರಂಟಿ ಜಾರಿ ಬಗ್ಗೆ ವ್ಯಂಗ್ಯವಾಡುತ್ತಿದ್ದಾರೆ. ಒಂಬತ್ತು ವರ್ಷಗಳ ಕಾಲ ಪ್ರಧಾನಿ ನರೇಂದ್ರ ಮೋದಿವರು ಪ್ರಶ್ನೆ ಮಾಡುತ್ತಿದ್ದಾರೆ. ನಾವು ಗ್ಯಾರಂಟಿಗಳನ್ನು ಜಾರಿ ಮಾಡುವ ಬಗ್ಗೆ ಹೇಳಿದ್ದೆ, ಅದೇ ರೀತಿ ಈಗ ನಡೆದುಕೊಳ್ಳುತ್ತಿದ್ದೇವೆ. ಎಲ್ಲಾ ಗ್ಯಾರಂಟಿಗಳಿಗೆ ಹಣವನ್ನು ಒದಗಿಸಿದ್ದೇವೆ. ರಾಜ್ಯ ದಿವಾಳಿ ಆಗದೇ ಎಚ್ಚರ ವಹಿಸಿದ್ದೇವೆ.
ನಾನು ಮಂಡನೆ ಮಾಡಿರುವ ಬಜೆಟ್ ಪೂರ್ಣ ಪ್ರಮಾಣದ ಬಜೆಟ್ ಆಗಿದೆ. ಜನ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದಾರೆ ಅಂತ ಅವರು ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದೆ.
ಅದರ ಜೊತೆಗೆ ಬಜೆಟ್ ಮಂಡಿಸಿ ಇದರ ಜೊತೆಗೆ ಎಪ್ಪತ್ತಾರು ಕಾರ್ಯಕ್ರಮಗಳನ್ನು ಜಾರಿ ಮಾಡುವುದಾಗಿ ಬಜೆಟ್ ನಲ್ಲಿ ಉಲ್ಲೇಖ ಮಾಡಲಾಗಿದ್ದು, ಅದಕ್ಕೆ ಹಣವನ್ನು ಕೂಡ ನಿಗದಿ ಪಡಿಸಲಾಗಿದೆ ಅಂತ ತಿಳಿಸಿದರು. ನಮ್ಮ ಗೃಹ ಲಕ್ಮಿ ಕಾರ್ಯಕ್ರಮ ಒಂದು ಕೋಟಿ ಮುವತ್ತು ಲಕ್ಷ ಕುಟುಂಬಗಳ ಯಜಮಾನಿಯರಿಗೆ ತಲುಪಲಿದೆ ಅಂತ ತಿಳಿಸಿದರು. ಇದಕ್ಕೇ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದರು ಅಂತ ಅವರು ಬೇಸರ ವ್ಯಕ್ತಪಡಿಸಿದರು.