27.6 C
Bengaluru
Saturday, December 21, 2024

Gruha Jyoti:200 ಯೂನಿಟ್ ದಾಟಿದ್ರೆ ಫುಲ್ ಬಿಲ್!

ಬೆಂಗಳೂರು;ಕಾಂಗ್ರೆಸ್ ಸರ್ಕಾರದ ಭರವಸೆಯ ಐದು ಗ್ಯಾರಂಟಿ( guarantee Yojanas)ಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆ( Gruha Jyoti Yojana ) ಈಗ ಜನರಿಗೆ ಭಾರಿ ಶಾಕ್ ನೀಡಿದೆ. ಕಳೆದ ತಿಂಗಳು ಅಧಿಕ ವಿದ್ಯುತ್ ಬಳಕೆಯಿಂದಾಗಿ, ಶೇಕಡಾ 20ರಷ್ಟು ಮಂದಿ ಈಗ ಸಂಪೂರ್ಣ ಬಿಲ್ ಪಾವತಿಸುವ ಆತಂಕದಲ್ಲಿದ್ದಾರೆ.ಗೃಹ ಜ್ಯೋತಿಯಡಿ 200 ಯೂನಿಟ್‌ಗಿಂತ ಹೆಚ್ಚು ವಿದ್ಯುತ್‌ ಬಳಸಿದರೆ, ಅಷ್ಟು ಯೂನಿಟ್‌ಗೆ ಶುಲ್ಕ ಕಟ್ಟಬೇಕಾಗಿದೆ. ಈಗ ಕರ್ನಾಟಕದಲ್ಲಿ ಕಂಡು ಕೇಳರಿಯದಂತಹ ಬಿಸಿಲಿರುವ ಕಾರಣ, ಎಸಿ, ಫ್ಯಾನ್, ಕೂಲರ್ ಬಳಕೆಯಿಂದಾಗಿ ಹೆಚ್ಚಿನ ವಿದ್ಯುತ್‌ ಬಳಸುತ್ತಿರುವ ಪರಿಣಾಮ 200 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಕೆಯಾಗುತ್ತಿದೆ. ಹೀಗಾಗಿ ಹೆಚ್ಚುವರಿಯಾಗಿ ಬಳಸಿದ ವಿದ್ಯುತ್ ಗೆ ಬಿಲ್ ಪಾವತಿ ಮಾಡಬೇಕಿರುವ ಅನಿವಾರ್ಯತೆಗೆ ಜನರು ಸಿಲುಕಿದ್ದಾರೆ.ವಿದ್ಯುತ್ ಬಿಲ್ 200 ಯೂನಿಟ್‌ಗಿಂತ ಹೆಚ್ಚು ಬಂದರೆ ನೀವು, ಸಂಪೂರ್ಣ ಬಿಲ್‌ ಕಟ್ಟಲೇಬೇಕು. ಇನ್ನೂ, ರಾಜ್ಯದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ 3496 ಮಿಲಿಯನ್ ಯೂನಿಟ್ ಹೆಚ್ಚಳವಾಗಿ ಬಳಕೆಯಾಗಿದೆ.ಈ ಯೋಜನೆ ಉದ್ದೇಶ ಮತ್ತು ಜನರಿಗೆ ವಿದ್ಯುತ್ ಲಭ್ಯತೆ ಖಚಿತಪಡಿಸುವುದು ಅವರ ವಿದ್ಯುತ್ ಬಿಲ್‌ಗಳನ್ನು ಕಡಿಮೆ ಮಾಡುವುದು. ಆದರೆ ಈಗ ಈ ಯೋಜನೆ ಜನರಿಗೆ ಭಾರವಾಗಿದೆ.

Related News

spot_img

Revenue Alerts

spot_img

News

spot_img