26.4 C
Bengaluru
Wednesday, December 4, 2024

Happy Rama Navami 2023;ಶ್ರೀ ರಾಮ ನವಮಿಗೆ ಶುಭ ಕೋರಲು ಶುಭಾಶಯದ ಸಂದೇಶಗಳು

Ramnavami#2023#Greetings#Shukla# Paksha # Chaitra# month

ರಾಮ ನವಮಿ 2023:ಶ್ರೀರಾಮ ನವಮಿಯನ್ನು ಬಹಳ ಶೃದ್ಧೆಯಿಂದ ಆಚರಿಸಿಕೊಂಡು ಬರಲಾಗುತ್ತದೆ.ಚೈತ್ರ ಮಾಸದ ಶುಕ್ಲಪಕ್ಷದಲ್ಲಿ ಶ್ರೀರಾಮ ನವಮಿಯನ್ನು ಆಚರಿಸಲಾಗುತ್ತದೆ. ಈ ವರ್ಷ, ಮಾರ್ಚ್ 30 ರ ಗುರುವಾರದಂದು ಹಬ್ಬವನ್ನು ಆಚರಿಸಲಾಗುತ್ತದೆ.ಈ ಸಂದರ್ಭದಲ್ಲಿ ದೇಗುಲಗಳಲ್ಲಿ ವಿಶೇಷ ಪ್ರಾರ್ಥನೆ, ಪೂಜೆಗಳು ನಡೆಯುತ್ತವೆ. ಶ್ರೀ ರಾಮ ಆದರ್ಶ ಪುರುಷ, ಶ್ರೀರಾಮ ಜನಿಸಿದ ದಿನವನ್ನು ನಾವೆಲ್ಲರೂ ಶ್ರೀರಾಮ ನವಮಿ ಎಂದು ಆಚರಿಸುತ್ತೇವೆ.ಶ್ರೀರಾಮ ನವಮಿಯಂದು ಪಾನಕ, ಕೋಸಂಬರಿಗೆ ವಿಶೇಷ ಮಹತ್ವ. ಅಂದು ಎಲ್ಲರಿಗೂ ಪಾನಕ, ಕೋಸಂಬರಿಯನ್ನು ಹಂಚಲಾಗುತ್ತದೆ. ಶ್ರೀರಾಮನ ಪ್ರಸಾದದ ರೂಪದಲ್ಲಿ ಎಲ್ಲರೂ ಬಲು ಭಕ್ತಿಪೂರ್ವಕವಾಗಿ ಇದನ್ನು ಸ್ವೀಕರಿಸುತ್ತಾರೆ.ಹಬ್ಬದ ಸಂದರ್ಭದಲ್ಲಿ ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಿಕೊಡುವಂತಹ ಕೆಲ ಶುಭಾಶಯದ ಸಂದೇಶಗಳು ಇಲ್ಲಿವೆ.

ಶ್ರೀರಾಮ ನವಮಿಯ ಶುಭಾಶಯಗಳು

* ಈ ಶ್ರೀರಾಮ ನವಮಿಯು ನಿಮ್ಮ ಜೀವನದಲ್ಲಿ ಶಾಂತಿ, ನೆಮ್ಮದಿ, ಆರೋಗ್ಯವನ್ನು ಕರುಣಿಸಲಿ. ಸಕಾರಾತ್ಮಕ ವಿಷಯಗಳು ನಿಮ್ಮ ಬದುಕನ್ನು ಇನ್ನಷ್ಟು ಖುಷಿಯಿಂದ ಕೂಡಿರುವಂತೆ ಮಾಡಲಿ. ಸರ್ವರಿಗೂ ಶ್ರೀರಾಮ ನವಮಿಯ ಶುಭಾಶಯಗಳು

*ದೇವರ ಕೃಪಾಶೀರ್ವಾದ ಸದಾ ನಿಮ್ಮ ಮೇಲಿರಲಿ ಎಂಬುದು ನನ್ನ ಪ್ರಾರ್ಥನೆ. ಹ್ಯಾಪಿ ರಾಮ ನವಮಿ

*ಶ್ರೀರಾಮನ ಆಶೀರ್ವಾದದ ಪ್ರಭೆಯಲ್ಲಿ ನಿಮಗೆ ಸದಾ ಯಶಸ್ಸು ಲಭಿಸಲಿ, ನಿಮ್ಮ ಸಾಧನೆಯ ಹಾದಿ ಸುಗಮವಾಗಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಶ್ರೀರಾಮನವಮಿಯ ಶುಭಾಶಯಗಳು

* ಈ ಸಲದ ಶ್ರೀರಾಮ ನವಮಿಯು ನಿಮ್ಮ ಜೀವನದಲ್ಲಿ ಅದೃಷ್ಟ, ಶಾಶ್ವತ ಸಂತೋಷವನ್ನು ತರಲಿ. ಎಲ್ಲರಿಗೂ ಶ್ರೀರಾಮ ನವಮಿಯ ಹಾರ್ದಿಕ ಶುಭಾಶಯಗಳು

*ಭಗವಾನ್ ರಾಮನು ನಿಮ್ಮ ಜೀವನಕ್ಕೆ ಸಂತೋಷ, ಸಮೃದ್ಧಿ, ಉತ್ತಮ ಆರೋಗ್ಯ ಮತ್ತು ಶಾಂತಿಯನ್ನು ನೀಡಲಿ. ರಾಮ ನವಮಿಯ ಶುಭಾಶಯಗಳು.

*ದೀಪಗಳ ಹೊಳಪು ಮತ್ತು ರಾಮನಾಮದ ಪ್ರತಿಧ್ವನಿಯೊಂದಿಗೆ, ಸಂತೋಷ ಮತ್ತು ತೃಪ್ತಿ ನಿಮ್ಮ ಜೀವನವನ್ನು ತುಂಬಲಿ. ನಿಮಗೆ ರಾಮ ನವಮಿಯ ಶುಭಾಶಯಗಳು.

*ಶ್ರೀ ರಾಮನು ನಿಮಗೆ ಸಕಲೈಶ್ವರ್ಯ, ದೈವಿಕ ಆಶೀರ್ವಾದಗಳನ್ನು ನೀಡಲಿ ಮತ್ತು ನಿಮ್ಮ ಜೀವನವನ್ನು ಬೆಳಗಿಸಲಿ. ರಾಮನವಮಿಯ ಶುಭಕಾಮನೆಗಳು.

*ಶ್ರೀ ರಾಮ ನಿಮ್ಮ ಜೀವನದಲ್ಲಿ ಐಶ್ವರ್ಯ, ಆರೋಗ್ಯ, ನೆಮ್ಮದಿ ಕರುಣಿಸಲು, ಜೈ ಶ್ರೀ ರಾಮ್ ರಾಮ ನವಮಿ ಹಬ್ಬದ ಶುಭಾಶಯಗಳು

*ಹಿಂದೂಗಳ ಹೃದಯ ಸಾಮ್ರಾಟ, ಮರ್ಯಾದ ಪುರುಷೋತ್ತಮ, ದಶರಥ ನಂದನ ಶ್ರೀರಾಮ ಹುಟ್ಟಿದ ದಿನವೇ ರಾಮ ನವಮಿ ಎಲ್ಲಾ ರಾಮನ ಭಕ್ತರಿಗೆ ಶ್ರೀ ರಾಮ ನವಮಿಯ ಶುಭಾಶಯಗಳು

*ಎಲ್ಲಾ ಪ್ರೀತಿಪಾತ್ರರಿಗೆ ಆನಂದದಾಯಕ ಶುಭ ರಾಮ ನವಮಿಯ ಶುಭಾಶಯಗಳು.

*ಈ ಶುಭ ದಿನವು ನಿಮಗೆ ಯಶಸ್ಸು ಮತ್ತು ಸಂತೋಷವನ್ನು ತರಲಿ. ರಾಮ ನವಮಿಯ ಶುಭಾಶಯಗಳು.

Related News

spot_img

Revenue Alerts

spot_img

News

spot_img