28.2 C
Bengaluru
Friday, September 20, 2024

ಸರ್ಕಾರಿ ನೌಕರರಿಗೆ ಭರ್ಜರಿ ನ್ಯೂಸ್:ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಿ ಅಧಿಕೃತ ಆದೇಶ ಪ್ರಕಟ

# government employees# Old pension scheme # implemented # official order # published

ಬೆಂಗಳೂರು;ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ.ಏಪ್ರಿಲ್ 1, 2006 ವರ್ಷದಲ್ಲಿ ಹೊರಡಿಸಲಾದ ನೇಮಕಾತಿ ಅಧಿಸೂಚನೆ ಮೂಲಕ ಆಯ್ಕೆಯಾದ ಅಥವಾ ತದನಂತರ ರಾಜ್ಯ ಸರ್ಕಾರಿ ಸೇವೆಗೆ ಸೇರಿ ರಾಷ್ಟ್ರೀಯ ಪಿಂಚಣಿ(National Pension) ಯೋಜನೆಗೆ ಒಳಪಟ್ಟಿರುವ ನೌಕರರನ್ನು ಹಳೆಯ ಡಿಫೈನ್ಸ್ ಪಿಂಚಣಿ(Defense Pension) ಯೋಜನೆ ವ್ಯಾಪ್ತಿಗೆ ಒಳಪಡಿಸುವಂತೆ ಸರ್ಕಾರದ ಉಪ ಕಾರ್ಯದರ್ಶಿ ಆರ್ಥಿಕ ಇಲಾಖೆ ಆದೇಶ ಹೊರಡಿಸಿದ್ದಾರೆ.2006ರ ನಂತರ ನೇಮಕಾತಿಗೊಂಡ 13,000 ಸರ್ಕಾರಿ ನೌಕರರ ಬೇಡಿಕೆಯಂತೆಯೇ ಹೊಸ ಪಿಂಚಣಿಯನ್ನು ರದ್ದುಪಡಿಸಿ, ಹಳೆ ಪಿಂಚಣಿಯನ್ನೇ(Old pension) ಮುಂದುವರೆಸಿ ಆದೇಶಿಸಿದೆ. NPS ಅನ್ನು ಹಿಂಪಡೆದು ಹಳೆ ಪಿಂಚಣಿ(OPS)ಯನ್ನು ಜಾರಿಗೊಳಿಸಿ, ಆರ್ಥಿಕ ಇಲಾಖೆಯ ಉಪಕಾರ್ಯದರ್ಶಿ ಅರುಳ್ ಕುಮಾ‌ರ್ ಅವರು ಅಧಿಕೃತ ಆದೇಶದ ನಡಾವಳಿಗಳನ್ನು ಪ್ರಕಟಿಸಿದ್ದಾರೆ ಅಲ್ಲದೆ, ಸರ್ಕಾರ ಹಳೆಯ ಪಿಂಚಣಿ ಯೋಜನೆಗೆ ಒಳಪಡಲು ಆರು ಷರತ್ತುಗಳನ್ನು ವಿಧಿಸಿದೆ. ಮುಷ್ಕರದ ವೇಳೆ ಕೊಟ್ಟ ಮಾತಿನಂತೆ ಇದೀಗ ಬೇಡಿಕೆ ಈಡೇರಿಸುವ ಮೂಲಕ ಸಾವಿರಾರು ನೌಕರರ ಕುಟುಂಬಗಳಿಗೆ ನಮ್ಮ ನಿರ್ಧಾರ ನೆಮ್ಮದಿ ತಂದಿದೆ ಎಂದು ತಿಳಿಸಿದ್ದಾರೆ.ಸರ್ಕಾರಿ ನೌಕರರು ನಿಗದಿತ ದಿನದಲ್ಲಿ ತಮ್ಮ ಆಯ್ಕೆಯನ್ನು ಸಲ್ಲಿಸದಿದ್ದರೆ ಎನ್‌ಪಿಎಸ್‌ನಲ್ಲೇ(NPS) ಮುಂದುವರಿಯುತ್ತಾರೆ. ಸಕ್ಷಮ ನೇಮಕಾತಿ ಪ್ರಾಧಿಕಾರ ಅರ್ಜಿ ಸಲ್ಲಿಸಿದ ನೌಕರರ ನಿಗದಿತ ಅರ್ಹತೆ ಹೊಂದಿರುವುದನ್ನು ಖಚಿತಪಡಿಸಿಕೊಂಡು 31-07-2024ರೊಳಗಾಗಿ ನೌಕರರನ್ನು ಹಿಂದಿನ ಪಿಂಚಣಿ ಯೋಜನೆಗೆ ಒಳಪಡಿಸಲು ಶಿಫಾರಸ್ಸಿನೊಂದಿಗೆ ಇಲಾಖಾ ಮುಖ್ಯಸ್ಥರಿಗೆ ಕ್ರೋಡೀಕೃತ ಪ್ರಸ್ತಾವನೆ ಸಲ್ಲಿಸಬೇಕು. ಇಲಾಖೆಯ ಮುಖ್ಯಸ್ಥರು ತಮ್ಮ ಅಧೀನದ ಎಲ್ಲ ನೇಮಕಾತಿ ಪ್ರಾಧಿಕಾರಗಳಿಂದ ಸ್ವೀಕೃತವಾದ – ಪ್ರಸ್ತಾವನೆಗಳನ್ನು ಪರಿಶೀಲಿಸಿ ಹಿಂದಿನ ಡಿಫೈನ್ಸ್ ಪಿಂಚಣಿ ಯೋಜನೆಗೆ ಒಳಪಡಲು ಅರ್ಹರಾಗಿರುವ ನೌಕರರ ಪಟ್ಟಿಯನ್ನು 31.08.2024ರೊಳಗೆ ಆರ್ಥಿಕ ಇಲಾಖೆಯ ಅನುಮೋದನೆಗೆ ಸಲ್ಲಿಸಬೇಕು ಎಂದು ಸೂಚಿಸಿದೆ.

ನುಡಿದಂತೆ ನಡೆದಿದ್ದೇವೆ: ಸಿಎಂ ಸಿದ್ದರಾಮಯ್ಯ ಸರ್ಕಾರಿ ನೌಕರರಿಗೆ ಹಳೆ ಪಿಂಚಣಿಯನ್ನೇ ಜಾರಿಗೊಳಿಸಿ ಆದೇಶ ಹೊರಡಿಸಿದ್ದೇವೆ. ಈ ಮೂಲಕ ಹಿಂದೆ ನೀಡಿರುವ ಭರವಸೆಯನ್ನು ಈಡೇರಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಟ್ವಿಟ್ ಮಾಡಿ, 2006ರ ನಂತರ ನೇಮಕಾತಿಗೊಂಡ ರಾಜ್ಯ ಸರ್ಕಾರದ 13,000 ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆಗೆ ಒಳಪಡಿಸಲಾಗಿದೆ. ಮುಷ್ಕರದ ವೇಳೆ ಕೊಟ್ಟ ಮಾತಿನಂತೆ ಇದೀಗ ಬೇಡಿಕೆ ಈಡೇರಿಸುವ ಮೂಲಕ ಸಾವಿರಾರು ನೌಕರರ ಕುಟುಂಬಗಳಿಗೆ ನಮ್ಮ ನಿರ್ಧಾರ ನೆಮ್ಮದಿ ತಂದಿದೆ ಎಂದು ತಿಳಿಸಿದ್ದಾರೆ.

Related News

spot_img

Revenue Alerts

spot_img

News

spot_img