ಹಾವೇರಿ:ಹಾವೇರಿ ಜಿಲ್ಲೆಯ ಸವಣೂರು (Savanooru) ತಾಲೂಕಿನ ಕಾರಡಗಿ ಗ್ರಾಮದ ಗ್ರಾಮ ಪಂಚಾಯತ್ ಸದಸ್ಯನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.ಗ್ರಾಮ ಪಂಚಾಯತ್ ಸದಸ್ಯ (Member) ಮಹಮ್ಮದ್ ಜಾಪರ್ ಸಂಶಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಮಂಜೂರಾದ ಮನೆಯ ಜಿಪಿಎಸ್ ಮಾಡಿಸಿ ಕೊಡಲು ಲಂಚ(bribe) ಸ್ವೀಕರಿಸುತ್ತಿದ್ದ ಗ್ರಾಮ ಪಂಚಾಯತ್ ಸದಸ್ಯನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಸವಣೂರು ತಾಲೂಕಿನ ಕಾರಡಗಿ ಗ್ರಾಮದ ಗ್ರಾಮ ಪಂಚಾಯತ್ ಸದಸ್ಯ ಮಹಮ್ಮದ್ ಜಾಪರ್ ಸಂಶಿ ಬಂಧಿತ ಆರೋಪಿ.ದಾದಾಪೀರ್ ಲೋಹರ್ ಎಂಬವರಿಗೆ ಸರ್ಕಾರದಿಂದ 5 ಲಕ್ಷ ರೂಪಾಯಿ ಮನೆ ಮಂಜೂರಾಗಿತ್ತು. ಈ ಮನೆಗೆ ಜಿಪಿಎಸ್(GPS) ಮಾಡಿಸಲು ಮಹಮ್ಮದ್ ಜಾಪರ್ ಸಂಶಿ 40 ಸಾವಿರ ರೂಪಾಯಿ ಲಂಚ ಬೇಡಿಕೆಯಿಟ್ಟದ್ದರು. ಅದೇ ರೀತಿಯಾಗಿ 20 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತರ ಪೊಲೀಸರ ಬಲೆಗೆ ಬಿದ್ದಿದ್ದಾರೆ.ಈ ಕುರಿತು ಹಾವೇರಿ (Haveri) ಲೋಕಾಯುಕ್ತ (Lokayukta)ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ದಾಳಿಯ ನೇತೃತ್ವವನ್ನು ಲೋಕಾಯುಕ್ತ ಡಿವೈಎಸ್ಪಿ ಬಿ.ಪಿ. ಚಂದ್ರಶೇಖರ ವಹಿಸಿದ್ದು, ತನಿಖಾಧಿಕಾರಿಗಳಾದ ಆಂಜನೇಯ ಎನ್.ಎಚ್., ಮುಸ್ತಾಕ್ ಅಹ್ಮದ್ ಶೇಖ್, ಮಂಜುನಾಥ ಪಂಡಿತ ಮತ್ತಿತರ ಅಧಿಕಾರಿಗಳು ಇದ್ದರು.