22.9 C
Bengaluru
Friday, July 5, 2024

ಸರ್ಕಾರಿ ಭೂಮಿ ಕಬಳಿಕೆ ಕುರಿತ ದೂರು ಬಂದರೆ ಪೊಲೀಸರು ಏನು ಮಾಡಬೇಕು ?

ಎಷ್ಟೋ ರಾಜಕಾರಣಿಗಳಿಗೆ, ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಶ್ರೀಮಂತಿಕೆ ತಂದುಕೊಟ್ಟಿರುವುದೇ ಸರ್ಕಾರಿ ಭೂಮಿ ಹಾಗೂ ಲ್ಯಾಂಡ್ ಡೀಲ್ ಗಳು ಎಂಬುದರಲ್ಲಿ ಎರಡು ಮಾತಿಲ್ಲ. ಭೂ ಪರಿವರ್ತನೆ ಮಾಡದೇ ಲೇಔಟ್ ನಿರ್ಮಾಣ, ಕೃಷಿ ಭೂಮಿ ಕೃಷಿಯೇತರ ಚಟುವಟಿಕೆಗೆ ಬಳಕೆ, ಸರ್ಕಾರಿ ಭೂ ಕಬಳಿಕೆ, ಸರ್ಕಾರಿ ಭೂಮಿಗೆ ನಕಲಿ ದಾಖಲೆ ಸೃಷ್ಟಿಸುವುದು ಹೊಸತೇನಲ್ಲ. ಇಂತಹ ಸಂದರ್ಭದಲ್ಲಿ ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದರೆ ಏನು ಮಾಡಬೇಕು? ಸರ್ಕಾರಿ ಭೂಮಿ ಅಕ್ರಮ ಸ್ವಾಧೀನ ಮಾಡಿದರೆ, ಒತ್ತುವರಿ ಮಾಡಿದರೆ ಅಥವಾ ನಕಲಿ ದಾಖಲೆ ಸೃಷ್ಠಿಸಿ ಸ್ವಾಧೀನ ಪಡಿಸಿಕೊಂಡ ಸಂದರ್ಭದಲ್ಲಿ ಜನ ಸಾಮಾನ್ಯರು ನೀಡುವ ದೂರಿಗೆ ಪೊಲೀಸರು ಹೇಗೆ ಸ್ಪಂದಿಸಬೇಕು? ಅಕ್ರಮ ಭೂ ಪರಿವರ್ತನೆ, ಭೂ ಪರಿವರ್ತನೆ ಮಾಡದೇ ಭೂ ವಿವಾದ ಸಿವಿಲ್ ವ್ಯಾಜ್ಯ ಎಂದು ಕೈಕಟ್ಟಿ ಕೂರಬೇಕಾ ? ಕಾನೂನು ಕ್ರಮ ಜರುಗಿಸಬೇಕಾ ? ಈ ಕುರಿತು ಭೂ ಕಂದಾಯ ತಿದ್ದುಪಡಿ ಅಧಿನಿಯಮ ಹಾಗೂ ಪೊಲೀಸ್ ಮಾರ್ಗಸೂಚಿಯ ಸಂಪೂರ್ಣ ಚಿತ್ರಣ ಇಲ್ಲಿ ನೀಡಲಾಗಿದೆ. ಪ್ರತಿಯೊಬ್ಬರಿಗೂ ಈ ನಿಯಮಗಳು ಗೊತ್ತಿರಲಿ.

ಸರ್ಕಾರಿ ಭೂಮಿ ರಕ್ಷಣೆ ಮಾಡುವ ಸಲುವಾಗಿ ಕರ್ನಾಟಕ ಸರ್ಕಾರ ಭ ಕಂದಾಯ ಅಧಿನಿಯಮಕ್ಕೆ 2006 ರಲ್ಲಿ ತಿದ್ದುಪಡಿ ಮಾಡಿದೆ. ಈ ಮೂಲಕ ಈ ಅಧಿನಿಯಮದ ಅಧ್ಯಾಯ 14 ರಲ್ಲಿ ವಿವಿಧ ಕಲಂಗಳನ್ನು ಸೇರ್ಪಡೆ ಮಾಡಿದ್ದು, ಈ ತಿದ್ದುಪಡಿ ಅಧಿನಿಯಮ ಕರ್ನಾಟಕದಲ್ಲಿ 2006 ರಿಂದಲೇ ಜಾರಿಗೆ ಬಂದಿದೆ. ಈ ಅಧಿನಿಯಮದಡಿ ಕಲಂ 192 (ಎ), 192(ಬಿ), 192(ಸಿ), 192(ಡಿ)ಗಳನ್ನು ಸೇರ್ಪಡೆ ಮಾಡಲಾಗಿದೆ.
ಸರ್ಕಾರದ ಭೂ ಕಂದಾಯ ತಿದ್ದುಪಡಿ ಅಧಿನಿಯಮ 192 (ಎ) ಅಪರಾಧ ಮತ್ತು ದಂಡನೆಗಳು:
ಸರ್ಕಾರದ ಭೂ ಕಂದಾಯ ತಿದ್ದುಪಡಿ ಅಧಿನಿಯಮ 192 (ಎ) ಅಡಿ ಭೂ ಒತ್ತುವರಿ, ನಕಲಿ ದಾಖಲೆ ಸೃಷ್ಠಿ ಸೇರಿದಂತೆ ವಿವಿಧ ಅಪರಾಧ ಮತ್ತು ದಂಡನಾರ್ಹ ಶಿಕ್ಷೆಗಳ ಬಗ್ಗೆ ವಿವರಿಸಲಾಗಿದೆ. ಈ ಅಧಿನಿಯಮದಲ್ಲಿ ರಚಿಸಿದ ನಿಯಮಗಳಲ್ಲಿ ಏನೇ ಒಳಗೊಂಡಿದ್ದರೂ ಈ ಕೆಳಗಿನ ಅಪರಾಧಗಳಲ್ಲಿ ಯಾವುದೇ ಅಪರಾಧವನ್ನು ಮಾಡಿದ ಯಾವೋಬ್ಬ ವ್ಯಕ್ತಿಯು, ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟೇಟರಿಂದ ಅಪರಾಧ ನಿರ್ಣಯವಾದ ಮೇಲೆ ಶಿಕ್ಷೆಗೆ ಗುರಿಯಾಗುತ್ತಾರೆ.

ಅಪರಾಧ 01:
ಸರ್ಕಾರಿ ಭೂಮಿ ಅಕ್ರಮ ಸ್ವಾಧೀನ :
ಸರ್ಕಾರಿ ಭೂಮಿಯನ್ನು ಹಿಡುವಳಿ ಹೊಂದುವ ಉದ್ದೇಶದಿಂದ ಯಾವುದೇ ಸರ್ಕಾರಿ ಭೂಮಿಯಲ್ಲಿ ಕಾನೂನು ಬಾಹಿರವಾಗಿ ಪ್ರವೇಶಿಸುವುದು ಅಥಾವಾ ಅದನ್ನು ಸ್ವಾಧಿನ ಪಡಿಸಿಕೊಂಡರೆ, ಅಂತವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ನಡೆಸಬಹುದು. ಮಾತ್ರವಲ್ಲ, ಆರೋಪಿತರ ವಿರುದ್ಧ ದೋಷಾರೋಪ ಪಟ್ಟಿಯನ್ನು ಸಂಬಂಧಪಟ್ಟ ನ್ಯಾಯಾಲಯಕ್ಕೆ ಸಲ್ಲಿಸಬಹುದು.
ಶಿಕ್ಷೆ : ಅರೋಪ ಸಾಬೀತಾದಲ್ಲಿ ಆರೋಪಿಗೆ ಒಂದೂ ವರ್ಷ ಕಾರಗೃಹವಾಸ ಮತ್ತು 5000/- ರೂ ಗಳ ಜುಲ್ಮಾನೆ ಅಥವಾ ಎರಡನ್ನೂ ವಿಧಿಸುವ ಅಧಿಕಾರ ನ್ಯಾಯಾಲಯಕ್ಕಿದೆ.

ಅಪರಾಧ -2.
ಸರ್ಕಾರಿ ಭೂಮಿ ಮಾರಾಟ, ಅಡಮಾನ ಇಟ್ಟರೆ:
ಸರ್ಕಾರಿ ಭೂಮಿಯನ್ನು ಮಾರುವ , ಅಡಮಾನ ಇಡುವ ಅಥವಾ ಅನ್ಯತ ವರ್ಗಾವಣೆ ಮಾಡುವ ಉದ್ದೇಶದಿಂದ ಮೋಸ ಮಾಡುವುದು ಮತ್ತು ಆ ಮೂಲಕ ಅಪ್ರಮಾಣಿಕವಾಗಿ ದಾಖಲೆಗಳನ್ನು ಸೃಷ್ಟಿಸಿದ್ದರೆ, ಅಂತವರ ವಿರುದ್ಧ ದೂರು ಬಂದರೆ, ಪೊಲೀಸರು ಪ್ರಥಮ ವರ್ತಮಾನ ವರದಿ ದಾಖಲಿಸಿ ಆರೋಪಿಗಳ ವಿರುದ್ಧ ಕ್ರಮ ಜರುಗಿಸಬಹುದು.
ಶಿಕ್ಷೆ: ಈ ಆರೋಪ ಸಾಬೀತಾದರೆ, ಅರೋಪಿಗೆ ಮೂರು ವರ್ಷ ಕಾರಾಗೃಹ ವಾಸ ಹಾಗೂ ಹತ್ತು ಸಾವಿರ ದಂಡ ವಿಧಿಸಿ ಶಿಕ್ಷೆಗೆ ಗುರಿಪಡಿಸಬಹದು.

ಅಪರಾಧ 03:
ಸರ್ಕಾರಿ ಭೂಮಿಗೆ ನಕಲಿ ದಾಖಲೆ ಸೃಷ್ಠಿ:
ಸರ್ಕಾರದ ಉದ್ದೇಶಕ್ಕಾಗಿ ಮೀಸಲಿಟ್ಟಿರುವ ವಿಚಾರ ತಿಳಿದು ಸರ್ಕಾರಿ ಭೂಮಿಗೆ ಸಂಬಂಧಿಸಿದಂತೆ ನಕಲಿ ದಾಖಲೆಯನ್ನು ಸೃಷ್ಟಿಸುವುದು ಅಥವಾ ಸರ್ಕಾರಿ ಭೂಮಿಯನ್ನು ಕಬಳಿಕೆ ಮಾಡುವುದು ಅಪರಾಧ. ಇಂತಹ ಸಂದರ್ಭದಲ್ಲಿ ಸಹ ಪೊಲೀಸರು ತನಿಖೆ ನಡೆಸಿ ಅರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬಹುದು.
ಶಿಕ್ಷೆ: ಇಂತಹ ಅಪರಾಧ ಸಾಬೀತಾದರೆ ಆರೋಪಿಗಳಿಗೆ ಮೂರು ವರ್ಷದ ವರೆಗೆ ಕಾರಾಗೃಹ ಶಿಕ್ಷೆ ಮತ್ತು ಐದು ಸಾವಿರ ರೂ. ದಂಡ ವಿಧಿಸಿ ಶಿಕ್ಷೆ ವಿದಿಸಬಹುದು.

ಅಪರಾಧ 04:
ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸದಿದ್ದರೆ:
ಸರ್ಕಾರಿ ಭೂಮಿಯ ಕಾನೂನು ಬಾಹಿರ ಅಧಿಬೋಗದಾರಿಕೆ ಬಗ್ಗೆ ವರದಿಯನ್ನು ನೀಡುವ ಅಥವಾ ಅಂತಹ ಕಾನೂನು ಬಾಹಿರ ಅಧಿಭೋಗದಾರರನ್ನು ಹೋರ ಹಾಕುವ ಜವಾಬ್ಧಾರಿಯನ್ನು ಹೊಂದಿದ್ದು, ಅಂತಹ ವರದಿಯನ್ನು ನೀಡಲು ತಪ್ಪಿದ ಅಥವಾ ಅಂತಹ ಕಾನೂನು ಬಾಹಿರ ಅಧಿಬೋಗದಾರರನ್ನು ಒರಹಾಕುವುದಕ್ಕೆ ಕ್ರಮಕೈಗೊಳ್ಳುವಲ್ಲಿ ವಿಫಲನಾದ ಕಂದಾಯ ಅಧಿಕಾರಿಯ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ನಡೆಸಬಹುದು.
ಶಿಕ್ಷೆ: ಆರೋಪ ಸಾಬೀತಾದರೆ ಆರೋಪಿಗಳಿಗೆ ಮೂರು ವರ್ಷದ ವರೆಗೆ ಕಾರಾಗೃಹವಾಸ ಮತ್ತು ಹತ್ತು ಸಾವಿರ ರೂ. ದಂಡ ವಿಧಿಸಿ ಶಿಕ್ಷೆಗೆ ಗುರಿಪಡಿಸಬಹುದು.

ಅಪರಾಧ 05:
ಕೃಷಿ ಭೂಮಿ ಕೃಷಿಯೇತರ ಉದ್ದೇಶಕ್ಕೆ ಬಳಕೆ:
ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕಾಗಿ ಬಳಸಿದರೆ, ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕಾಗಿ ಪರಿವರ್ತಿಸದೇ ಅಥವಾ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮೋದನೆ ಪಡೆಯದೇ ಮಾರಾಟ ಮಾಡುವುದು ಸಹ ಕರ್ನಾಟಕ ಭೂ ಕಂದಾಯ ನಿಯಮಗಳ ಉಲ್ಲಂಘನೆಯಾಗುತ್ತದೆ. ಇಂತಹ ಪ್ರಕರಣಗಳು ಕಂಡು ಬಂದರೆ ಪೊಲೀಸರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸಬಹುದು.
ಶಿಕ್ಷೆ: ಅರೋಪ ಸಾಬೀತಾದರೆ ನ್ಯಾಯಾಲಯವು ಮೂರು ವರ್ಷ ಕಾರಾಗೃಹ ವಾಸ ಮತ್ತು ಹತ್ತು ಸಾವಿರ ದಂಡ ವಿಧಿಸಿ ಶಿಕ್ಷೆ ನೀಡಬಹುದು.

ಅಪರಾಧ 06:
ಭೂ ಪರಿವರ್ತನೆ ನಕಲಿ ದಾಖಲೆ ಸೃಷ್ಠಿ:
ಕೃಷಿ ಭೂಮಿಯನ್ನು ಕೃಷಿಯೇತರ ಬಳಕೆಗಾಗಿ ಪರಿವರ್ತಿಸಿದ ಬಗ್ಗೆ ನಕಲಿ ದಾಖಲೆಗಳನ್ನು ಸೃಜಿಸುವುದು ಅಥವಾ ಕೃಷಿ ಭೂಮಿಯನ್ನು ಹೊಂದಿರುವವನು ಅದನ್ನು ಕೃಷಿ ಏತರ ಉದ್ದೇಶಗಳಿಗಾಗಿ ಬಳಸುತ್ತಿರುವನೆಂದು ಪ್ರಾಧಿಕರಿಸಿ ಕಂಡು ಬಂದರೆ, ಅಂತವರ ವಿರುದ್ಧ ಬರುವ ದೂರನ್ನು ಪೊಲೀಸರು ಸ್ವೀಕರಿಸಿ ತನಿಖೆ ನಡೆಸಬಹುದು.
ಶಿಕ್ಷೆ: ಈ ಆರೋಪ ಸಾಬೀತಾದರೆ, ಅಪರಾಧಿಗಳಿಗೆ ಒಂದು ವರ್ಷದ ಕಾರಾಗೃಹ ವಾಸ ಮತ್ತು ಐದು ಸಾವಿರ ದಂಡ ವಿಧಿಸಲಾಗುತ್ತದೆ.

ಅಪರಾಧ 07:
ಅಕ್ರಮ ಭೂ ಪರಿವರ್ತನೆ ಮಾಡಿದ ಅಧಿಕಾರಿ ವಿರುದ್ಧ ಕ್ರಮ:
ಭೂ ದಾಖಲೆಗಳನ್ನು ನಿರ್ವಹಿಸುವ ಹೊಣೆಗಾರಿಕೆ ಹೊಂದಿದ ಸಾರ್ವಜನಿಕ ನೌಕರ ಕೃಷಿ ಭೂಮಿಯನ್ನು ನಿಯಮ ಬಾಹಿರವಾಗಿ ಕೃಷಿಯೇತರ ಉದ್ದೇಶಕ್ಕಾಗಿ ಪರಿವರ್ತನೆ ಮಾಡುವುದು, ಪರಿವರ್ತನೆ ಮಾಡಿದ ಬಗ್ಗೆ ಸಕ್ಷಮ ಪ್ರಾಧಿಕಾರಕ್ಕೆ ವರದಿ ನೀಡದೇ ಇರುವುದು ಅಥವಾ ಕಾನೂನು ಬಾಹಿರ ಭೂ ಪರಿವರ್ತನೆ ಮಾಡಿದವರ ವಿರುದ್ಧ ಕ್ರಮ ಜರುಗಿಸದ ಅಧಿಕಾರಿಗಳ ವಿರುದ್ಧ ಕರ್ನಾಟಕ ಭೂ ಕಂದಾಯ ತಿದ್ದುಪಡಿ ಅಧಿನಿಯಮ ಅಡಿ ಅಪರಾಧವಾಗುತ್ತದೆ. ಇಂತಹ ಪ್ರಕರಣಗಳನ್ನು ಪೊಲೀಸರು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬಹುದು.
ಶಿಕ್ಷೆ: ಮೂರು ವರ್ಷದ ವರೆಗೆ ಕಾರಾಗೃಹ ವಾಸ, ಹತ್ತು ಸಾವಿರ ರೂ. ದಂಡ ವಿಧಿಸಬಹುದು.

ಕಾನೂನು ಬದ್ಧ ಆದೇಶಗಳ ಉಲ್ಲಂಘನೆ:
ಕರ್ನಾಟಕ ಭೂ ಕಂದಾಯ ಅಧಿನಿಯಮ ಅಡಿಯಲ್ಲಿ ಹೊರಡಿಸಿದ ಯಾವುದೇ ಕಾನೂನು ಬದ್ಧ ಆದೇಶಗಳ ಉಲ್ಲಂಘನೆ ಮಾಡಿದರೆ, ಅಂತಹ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಐದು ಸಾವಿರ ರೂ. ವರೆಗೆ ಜುಲ್ಮಾನೆ, ಎರಡನೇ ಅವಧಿಗೆ ತದನಂತರದ ಅಪರಾಧಗಳಿಗೆ ಜುಲ್ಮಾನೆಯ ಐದರಷ್ಟು ಹೆಚ್ಚುವರಿ ದಂಡ ವಿಧಿಸಿ ಶಿಕ್ಷೆಗೆ ಗುರಿಪಡಿಸಲಾಗುವುದು.

192-(ಬಿ) ಅಡಿ ಅಪರಾಧಗಳ ದುಷ್ಪ್ರೇರಣೆ: ಈ ಅಧಿನಿಯಮದ ಅಡಿಯಲ್ಲಿ ದಂಡನಿಯವಾದ ಯಾವುದೇ ಅಪರಾದದ ದುಷ್ಪ್ರೇರಣೆ ಮಾಡುವ ಅಥವಾ ಅಂತಹ ಅಪರಾಧವನ್ನು ಮಾಡಲು ಪ್ರಯತ್ನಿಸುವ ಯಾವೊಬ್ಬ ವ್ಯಕ್ತಿಯು ಈ ಅಧಿನಿಯಮದ ಅಡಿಯಲ್ಲಿ ಅಂತಹ ಅಪರಾಧವನ್ನು ಎಸಗಿದ್ದಕ್ಕಾಗಿ ಉಪಬಂದಿಸಲಾದ ಶಿಕ್ಷೆಯಿಂದ ದಂಡಿತನಾಗತಕ್ಕದ್ದು.

192-(ಸಿ) ಇತರ ಕಾನೂನು ಗಳ ಅಡಿಯಲ್ಲಿಯ ದಂಡನೆಗಳಿಗೆ ಪ್ರತಿಷೇದವಿಲ್ಲ: ಈ ಅಧಿನಿಯಮದಲ್ಲಿ ಇರುವುದು ಯಾವುದು, ಈ ಅಧಿನಿಯಮದಡಿಯಲ್ಲಿ ದಂಡನಿಯವಾದ ಯಾವುದೇ ಕೃತ್ಯ ಎಸಗಿದ್ದಕ್ಕಾಗಿ ಅಥವಾ ಲೋಪಕ್ಕಾಗಿ ಪ್ರಸ್ತುತ ಜಾರಿಯಲ್ಲಿರುವ ಯಾವುದೇ ಇತರ ಕಾನೂನಿನಿಂದ ಯಾವೊಬ್ಬ ವ್ಯಕ್ತಿಯು ಅಭಿಯೋಗಕ್ಕೆ ಒಳಗಾಗುವುದನ್ನು ಅಥವಾ ದಂಡನೆಗೆ ಗುರಿಯಾಗುವುದನ್ನು ತಪ್ಪಿಸತಕ್ಕದಲ್ಲ. ಒಂದೇ ಅಪರಾದಕ್ಕಾಗಿ ಯಾವುಬ್ಬ ವ್ಯಕ್ಯಿಯು ಹೆಚ್ಚು ಸಲ ಅಭಿಯೋಗಕ್ಕೆ ಒಳಪಡಿಸುವಂತಿಲ್ಲ.

Related News

spot_img

Revenue Alerts

spot_img

News

spot_img