26.3 C
Bengaluru
Friday, October 4, 2024

Government employee;ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ ಆಸ್ತಿ ಖರೀದಿಗೆ ನಿಯಮ ಸರಳ

ಬೆಂಗಳೂರು;ಕರ್ನಾಟಕದ ಸರ್ಕಾರಿ ನೌಕರರಿಗೆ ಶೀಘ್ರವೇ ಶುಭಸುದ್ದಿ ಸಿಗಲಿದೆ. ನೌಕರರು ಆಸ್ತಿ ಖರೀದಿ ಮಾಡುವ ಕಾರ್ಯ ವಿಧಾನ ಇನ್ನಷ್ಟು ಸರಳೀಕರಣಗೊಳಿಸಲಾಗುತ್ತದೆ. ಇದರಿಂದಾಗಿ ನೌಕರರ ಹಲವು ವರ್ಷಗಳ ಬೇಡಿಕೆ ಈಡೇರಿದಂತೆ ಆಗಲಿದೆ,ಈಗ ಸರ್ಕಾರಿ ಉದ್ಯೋಗಿಗಳು ಚರ/ ಸ್ಥಿರ ಆಸ್ತಿ ಖರೀದಿಗೆ ಮುಂಚೆ ಸಕ್ಷಮ ಪ್ರಾಧಿಕಾರದ ಸಮ್ಮತಿ ಪಡೆಯಬೇಕಿದೆ. ಈಗ ಈ ನಿಯಮವನ್ನು ಸಡಿಲಿಸಲು ಮುಂದಾಗಿದ್ದು, ಕಾಲಮಿತಿಯಲ್ಲಿ ಸಂಬಂಧಿಸಿದ ಪ್ರಾಧಿಕಾರಕ್ಕೆ ವರದಿ ಮಾಡುವಂತೆ ನಿಯಮ ತರಲು ಮುಂದಾಗಲಾಗಿದೆ.ರಾಜ್ಯಮಟ್ಟದ ಜಂಟಿ ಸಮಾಲೋಚನಾ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗಿದ್ದು, ಸರ್ಕಾರಿ ನೌಕರರ ಹಲವು ಬೇಡಿಕೆಗಳನ್ನು ಈಡೇರಿಸಲು ಸಭೆಯಲ್ಲಿ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಇವುಗಳ ಸ ಕುರಿತು ಅಧಿಕೃತ ಆದೇಶವಾಗುವುದು ಮಾತ್ರ ಬಾಕಿ ಇದೆ.ಸರಳೀಕೃತ ನಿಯಮದಂತೆ ಕಾಲಮಿತಿಯಲ್ಲಿ ಸಂಬಂಧಿಸಿದ ಪ್ರಾಧಿಕಾರಕ್ಕೆ ವರದಿ ಮಾಡುವಂತೆ ಬದಲಾವಣೆ ಮಾಡಲಾಗುತ್ತದೆ. ಆಗ ನೌಕರರು ಸಂಬಂಧಿಸಿದ ಪ್ರಾಧಿಕಾರಕ್ಕೆ ವರದಿ ನೀಡಿದರೆ ಸಾಕಾಗುತ್ತದೆ. ಸರ್ಕಾರಿ ನೌಕರರ ಆಸ್ತಿ ಮತ್ತು ಹೊಣೆಗಾರಿಕೆಗಳ ವಿವರ ಪಟ್ಟಿಯನ್ನು ನಿಗದಿತ ಸಮಯಕ್ಕೆ ಸಲ್ಲಿಸುವ ಬಗ್ಗೆ ಈಗಾಗಲೇ ಕರ್ನಾಟಕ ಸರ್ಕಾರ ಸುತ್ತೋಲೆ ಹೊರಡಿಸಿದೆ.ತರುವಾಯ ಸರ್ಕಾರಿ ನೌಕರನು ಡಿಸೆಂಬರ್ 31ಕ್ಕೆ ಅಂತ್ಯಗೊಳ್ಳುವ ದೇಡಿಕೆಗಳನ್ನು ಪ್ರತಿ ಹನ್ನೆರಡು ತಿಂಗಳಿಗೊಮ್ಮೆ ತನ್ನ ಮತ್ತು ತನ್ನ ಕುಟುಂಬದ ಎಲ್ಲ ಇದೆ. ಇವುಗಳ ಸದಸ್ಯರ ಆಸ್ತಿಗಳ ಮತ್ತು ಹೊಣೆಗಾರಿಕೆಗಳ ವಾರ್ಷಿಕ ವಿವರ ಪಟ್ಟಿಯನ್ನು ಸಲ್ಲಿಸಬೇಕಾಗಿರುತ್ತದೆ. ಅಲ್ಲದೇ, ನಿಯಮ 24 ರಲ್ಲಿನ ಉಪಬಂಧಗಳಂತೆ ಆಸ್ತಿ ಖರೀದಿ ಪ್ರತಿಯೊಬ್ಬ ಸರ್ಕಾರಿ ನೌಕರನು ಚರ ಮತ್ತು ಸ್ಥಿರಾಸ್ತಿಗೆ ಸಂಬಂಧಿಸಿದಂತೆ ರ್ವಾನುಮತಿ ನಿಯಮಗಳಲ್ಲಿ ತಿಳಿಸಿರುವ ಸಂದರ್ಭಗಳಲ್ಲಿ ಅನುಮತಿ ಪಡೆಯುವುದು ಹಾಗೂ ವರದಿ ಮಾಡುವುದು ಅವಶ್ಯವಾಗಿರುತ್ತದೆ.

ಸಭೆಯ ಇತರ ಪ್ರಮುಖ ನಿರ್ಧಾರಗಳು

* ಲೋಕ ಅದಾಲತ್ ರೀತಿಯಲ್ಲಿ ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ನೇತೃತ್ವದಲ್ಲಿ ಕಾಲಮಿತಿಯಲ್ಲಿ ನೌಕರರ ಇಲಾಖಾ ವಿಚಾರಣೆಗಳನ್ನು ಬೇಗನೆ ತೀರ್ಮಾನಪಡಿಸಲು ನಿರ್ಧರಿಸಲಾಗಿದೆ.

* ಸರ್ಕಾರಿ ನೌಕರರು ಪಾಸ್‌ಪೋರ್ಟ್‌ಗಳ ಆಕ್ಷೇಪಾರ್ಹ ಪ್ರಮಾಣ ಪತ್ರವನ್ನು ಸಂಬಂಧಿಸಿದ ಕಛೇರಿಯ ಮುಖ್ಯಸ್ಥರಿಂದ ಪಡೆಯುವ ಅವಕಾಶವನ್ನು ಜಾರಿಗೆ ತರುವುದು.

*ಜಿಪಿಎಫ್(GPF) ಉಳಿತಾಯ ಖಾತೆಗಳಿಂದ ಮುಂಗಡ/ ಭಾಗಶಃ ವಾಪಸಾತಿ ಪಡೆಯುವ ಸಂದರ್ಭದಲ್ಲಿ ಇದ್ದ ಬಿಗಿ ನಿಯಮಗಳನ್ನು ಸರಳವಾಗಿಸುವುದು.

* ಎಲ್ಲಾ ಇಲಾಖೆಗಳಲ್ಲಿ ಪ್ರತಿ ವರ್ಷ ಮೊದಲ ತಿಂಗಳಿಲ್ಲಿ ಜೇಷ್ಠತಾ ಪಟ್ಟಿಯನ್ನು ತಯಾರಿಸಿ ಪ್ರತಿ ಆರು ತಿಂಗಳಿಗೊಮ್ಮೆ ಮುಂಬಡ್ತಿ ಕೋಟಾದಡಿ ಹುದ್ದೆಗಳನ್ನು ಗುರುತಿಸಿ ಬಡ್ತಿ
ನೀಡುವುದು.

Related News

spot_img

Revenue Alerts

spot_img

News

spot_img