28.2 C
Bengaluru
Friday, September 20, 2024

ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್: ಇನ್ನಷ್ಟು ಅಗ್ಗವಾಗಲಿದೆ ಮೊಬೈಲ್

ಹೊಸದಿಲ್ಲಿ: ಈ ವರ್ಷ ಮೊಬೈಲ್ ಖರೀದಿ ಮಾಡುವವರಿಗೆ ಶುಭ ಸುದ್ದಿಯನ್ನು ಕೇಂದ್ರ ಸರ್ಕಾರ ನೀಡಿದೆ. ದೇಶದಲ್ಲಿ ಮೊಬೈಲ್ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲು ನಿರ್ಧಾರ ಮಾಡಿದ್ದು, ಈ ನಿಟ್ಟಿನಲ್ಲಿ ಆಮದು ಸುಂಕವನ್ನು ಕಡಿಮೆ ಮಾಡಲು ಮುಂದಾಗಿದೆ. ಇದರಿಂದ ಈ ವರ್ಷ ಮೊಬೈಲ್ ಬೆಲೆ ಗಣನೀಯವಾಗಿ ಇಳಿಕೆ ಕಾಣಲಿದೆ.

ಕೇಂದ್ರ ಸರ್ಕಾರ ಕೆಲವು ಮೊಬೈಲ್ ಉತ್ಪಾದನಾ ಘಟಕಗಳ ಮೇಲಿನ ಆಮದು ಸುಂಕವನ್ನು ಈ ಹಿಂದೆ ಇದ್ದ ಶೇಕಡಾ 15ರಿಂದ ಶೇಕಡಾ 10 ಇಳಿಕೆ ಮಾಡುವುದಾಗಿ ಘೋಷಣೆ ಮಾಡಿದೆ. ಸರ್ಕಾರದ ಗೆಜೆಟ್ ಅಧಿಸೂಚನೆಯಂತೆ ಜಿಎಸ್ ಆಂಟೆನಾ, ಬ್ಯಾಟರಿ ಕವರ್ ಹಾಗೂ ಮುಖ್ಯ ಕವರ್ ಮೇಲೆ ಆಮದು ಸುಂಕ ಕಡಿಮೆ ಆಗಲಿದೆ ಇದರ ಜೊತೆಗೆ ಇತರೆ ಘಟಕಗಳಂತಹ ಮೇಲಿನ ಆಮದು ಸುಂಕವನ್ನೂ ಸರ್ಕಾರ ಶೇಕಡ 10ಕ್ಕೆ ಇಳಿಸಿದೆ. ಇದರಿಂದ ದೇಶದಲ್ಲಿ ಎಲೆಕ್ಟ್ರಾನಿಕ್ ಉತ್ಪಾದನೆಗೆ ವೇಗ ದೊರೆಯುವುದು ಮಾತ್ರವಲ್ಲದೇ ಸ್ಮಾರ್ಟ್ ಫೋನ್ ರಪ್ತು ಕೂಡಾ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.

ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಮುಂದಿನ ಎರಡು ವರ್ಷದಲ್ಲಿ ಮೊಬೈಲ್ ಫೋನ್ ರಫ್ತು $39
ಶತಕೋಟಿ ಹೆಚ್ಚಾಗಬಹುದು ಎನ್ನಲಾಗಿದೆ. ಇನ್ನು ಭಾರತ ಕೆಲ ವರ್ಷಗಳ ಹಿಂದೆ ಎಲೆಕ್ಟ್ರಾನಿಕ್ ವಸ್ತುಗಳ ತಯಾರಿಕಾ ಮತ್ತು ರಫ್ತು ವಿಚಾರದಲ್ಲಿ 9ನೇ ಸ್ಥಾನದಲ್ಲಿತ್ತು. ಈ ವರ್ಷ 5ನೇ ಸ್ಥಾನಕ್ಕೆ ಬರಲಿದೆ ಎನ್ನಲಾಗಿದೆ.

Related News

spot_img

Revenue Alerts

spot_img

News

spot_img