#good news # LIC #employees # central government #Salary hike # LIC employees
ಬೆಂಗಳೂರು ಮಾ.15:ಭಾರತೀಯ ಜೀವ ವಿಮಾ ನಿಗಮ (LIC) ನೌಕರರ ವೇತನವನ್ನು ಶೇ.17ರಷ್ಟು ಹೆಚ್ಚಿಸಲು ಕೇಂದ್ರ ಹಸಿರು ನಿಶಾನೆ ತೋರಿದೆ. ಈ ನಿರ್ಧಾರದಿಂದ 1.10 ಲಕ್ಷ ಜನರಿಗೆ ಅನುಕೂಲವಾಗಲಿದೆ. ವೇತನ ಹೆಚ್ಚಳವು ಆಗಸ್ಟ್ 1, 2022 ರಿಂದ ಜಾರಿಗೆ ಬರಲಿದೆ. ಏಪ್ರಿಲ್ 2010ರ ನಂತರ ಕರ್ತವ್ಯಕ್ಕೆ ಸೇರಿದ ಸುಮಾರು 24,000 ಉದ್ಯೋಗಿಗಳಿಗೆ NPS ಪಾಲನ್ನು 10% ರಿಂದ 14% ಕ್ಕೆ ಹೆಚ್ಚಿಸಲಾಗಿದೆ ಎಂದು LIC ತಿಳಿಸಿದೆ.ಸರ್ಕಾರದ ನಿರ್ಧಾರದಿಂದ 1,10,000 ಕ್ಕೂ ಹೆಚ್ಚು LIC ಉದ್ಯೋಗಿಗಳು ಮತ್ತು 30,000 ಪಿಂಚಣಿದಾರರು ನೇರವಾಗಿ ಪ್ರಯೋಜನ ಪಡೆಯಲಿದ್ದಾರೆ. ಬ್ಯಾಂಕ್ ಉದ್ಯೋಗಿಗಳ ವೇತನ ಹೆಚ್ಚಿಸಿದ ಬೆನ್ನಲ್ಲೇ ಇದೀಗ LIC ಉದ್ಯೋಗಿಗಳಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ.LICಯು ಡಿಸೆಂಬರ್ ತ್ರೈಮಾಸಿಕದಲ್ಲಿ ಗಣನೀಯ ಲಾಭ ಕಂಡಿದೆ. ಮೂರೇ ತಿಂಗಳಲ್ಲಿ ಎಲ್‌ಐಸಿ ಲಾಭವು ಶೇ.49ರಷ್ಟು ಹೆಚ್ಚಾಗಿದೆ. ಒಂದು ವರ್ಷದ ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ನಿವ್ವಳ ಲಾಭವು 6,334 ಕೋಟಿ ರೂ.ನಿಂದ 9,444 ಕೋಟಿ ರೂ.ಗೆ ಏರಿಕೆಯಾಗಿದೆ. ಇದೇ ಕಾರಣಕ್ಕಾಗಿ ಕೇಂದ್ರ ಸರ್ಕಾರವು 2022ರ ಆಗಸ್ಟ್‌ನಿಂದ ಅನ್ವಯವಾಗುವಂತೆ ನೌಕರರ ಸಂಬಳ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.