23.8 C
Bengaluru
Sunday, January 19, 2025

KSRTCಗೆ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ ;ತುಟ್ಟಿಭತ್ಯೆ ಶೇ.35ರಿಂದ 38.75ಕ್ಕೆ ಹೆಚ್ಚಳ

ಬೆಂಗಳೂರು;KSRTC ನೌಕರರಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್ ನೀಡಿದ್ದು ತುಟ್ಟಿಭತ್ಯೆ ದರವನ್ನು ಶೇ.35 ರಿಂದ ಶೇ.38.75 ಕ್ಕೆ ಹೆಚ್ಚಿಸಿ ಆದೇಶಿಸಿದೆ. ಈ ವರ್ಷದ ಜುಲೈನಿಂದಲೇ ಈ ಆದೇಶ ಪೂರ್ವಾನ್ವಯವಾಗಲಿದ್ದು ನಾಲ್ಕೂ ಸಾರಿಗೆ ನಿಗಮಗಳು ಪರಿಷ್ಕೃತ ತುಟ್ಟಿಭತ್ಯೆ ದರವನ್ನು ಅನುಷ್ಠಾನಗೊಳಿಸಿ ಪಾವತಿಸಲು ಸೂಚಿಸಲಾಗಿದೆ. ಈ ಮಧ್ಯೆ ಆಯಾ ಸಂಸ್ಥೆಗಳ ಆರ್ಥಿಕ ಸ್ಥಿತಿಗಳಿಗೆ ಅನುಗುಣವಾಗಿ ಹಿಂಬಾಕಿ ಪಾವತಿಸಲು ಸರ್ಕಾರ ಆದೇಶ ನೀಡಿ ನೌಕರರಿಗೆ ಶುಭ ಸುದ್ದಿ ನೀಡಿದೆ,ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ: ಆಇ 19 ಎಸ್‌ಆರ್‌ಪಿ 2023, ಬೆಂಗಳೂರು ದಿನಾಂಕ 21.10.2023 ರಲ್ಲಿ ಸರ್ಕಾರಿ ನೌಕರರಿಗೆ ದಿನಾಂಕ 01.07.2023 ರಿಂದ ಅನ್ವಯವಾಗುವಂತೆ ತುಟ್ಟಿಭತ್ಯೆ ದರವನ್ನು ಶೇ.35 ರಿಂದ ಶೇ.38.75 ಕ್ಕೆ ಹೆಚ್ಚಿಸಿ ಆದೇಶಿಸಿರುತ್ತದೆ.ಮಾನ್ಯ ವ್ಯವಸ್ಥಾಪಕ ನಿರ್ದೇಶಕರು, ಕರಾರಸಾ ನಿಗಮ ರವರು ರಾಜ್ಯ ಸಾರಿಗೆ ನಿಗಮಗಳಲ್ಲಿ ಪರಿಷ್ಕೃತ ತುಟ್ಟಿಭತ್ಯೆ ದರವನ್ನು ಅನುಷ್ಠಾನಗೊಳಿಸಿ ಪಾವತಿಸಲು ಆದೇಶಿಸಿರುವ ಪ್ರಯುಕ್ತ ಕೆಳಕಂಡಂತೆ ಕ್ರಮ ಜರುಗಿಸುವುದು.ನಾಲ್ಕೂಸಾರಿಗೆನಿಗಮಗಳಲ್ಲಿ ನವಂಬರ್-2023 ರ ಮಾಹೆಯ ವೇತನದಲ್ಲಿ ಮತ್ತು ಮುಂದಕ್ಕೆ ತುಟ್ಟಿಭತ್ಯೆ ದರವನ್ನು ಅನುಷ್ಠಾನಗೊಳಿಸುವುದು. 86.35 ರಿಂದ 38.75 ಕೈ ಹೆಚ್ಚಿಸಿ ಕರಾರಸಾನಿಗಮದಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಜುಲೈ-2023 ರಿಂದ ಅಕ್ಟೋಬರ್-2023 ರವರೆಗಿನ ತುಟ್ಟಿಭತ್ಯೆ ಹಿಂಬಾಕಿ ಪಾವತಿಯ ಕುರಿತು ಪ್ರತ್ಯೇಕವಾಗಿ ಆದೇಶಿಸಲಾಗುವುದು.

 

Related News

spot_img

Revenue Alerts

spot_img

News

spot_img