25.5 C
Bengaluru
Friday, September 20, 2024

ಗೃಹಲಕ್ಷ್ಮಿಯರಿಗೆ ಗುಡ್ ನ್ಯೂಸ್;ಇಂದಿನಿಂದ ರೇಷನ್ ಕಾರ್ಡ್ ಸೇರ್ಪಡೆ/ತಿದ್ದುಪಡಿಗೆ ಅವಕಾಶ

#householders #Rationcard #amendment #addition #allowed
ಬೆಂಗಳೂರು : ಪಡಿತರ ಚೀಟಿಯಲ್ಲಿ(Rationcard) ಹೆಸರು ಸೇರ್ಪಡೆ/ತಿದ್ದುಪಡಿಗೆ ಆಹಾರ ಇಲಾಖೆಯು ಇಂದಿನಿಂದ ಸೆಪ್ಟೆಂಬರ್ 10 (September)ರವರೆಗೆ ಅವಕಾಶ ನೀಡಿದ್ದು, ಪಡಿತರ ಚೀಟಿದಾರರು ಅಗತ್ಯ ದಾಖಲೆಗಳೊಂದಿಗೆ(Documents) ಹೆಸರು ಸೇರ್ಪಡೆ ಮಾಡಬಹುದಾಗಿದೆ.ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆಯಲು ಪಡಿತರ ಚೀಟಿ(Rationcard) ಮುಖ್ಯವಾಗಿದೆ. ನಿಯಮದ ಪ್ರಕಾರ ಬಿಪಿಎಲ್(BPL) ಕಾರ್ಡ್ ನಲ್ಲಿ ಮಹಿಳೆಯರೇ ಮುಖ್ಯಸ್ಥರಿರಬೇಕು. ವಯಸ್ಕ ಮಹಿಳೆ ಮುಖ್ಯಸ್ಥರಿದ್ದರೆ ಮಾತ್ರ ಗೃಹಲಕ್ಷ್ಮಿ ಸೌಲಭ್ಯ ದೊರೆಯಲಿದೆ.ಬಿಪಿಎಲ್, ಎಪಿಎಲ್, ಮತ್ತು ಅಂತ್ಯೋದಯ ಕಾರ್ಡ್‌ಗಳನ್ನು ಹೊಂದಿದ್ದರೆ ಮಾತ್ರ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಇರಲಿದೆ. ಈ ಪಡಿತರ ಚೀಟಿಗಳಲ್ಲಿ ಹೆಸರು ಸೇರಿಸುವುದು, ಬದಲಾವಣೆ ಮಾಡಲು ಈಗ ಅವಕಾಶ ಕಲ್ಪಿಸಲಾಗಿದೆ. ಯಾವುದೇ ಸದಸ್ಯರ ಹೆಸರನ್ನು ಪಡಿತರ ಚೀಟಿಯಲ್ಲಿ ಸೇರಿಸುವ ಕೆಲಸವನ್ನು ಕೆಲವೇ ನಿಮಿಷದಲ್ಲಿ ಮಾಡಬಹುದು.

 

ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಪಡಿತರ ಚೀಟಿಗೆ(Rationcard) ಹೆಸರು ಸೇರಿಸಬಹುದು. ಇದಕ್ಕೆ ಬೇಕಾಗುವ ದಾಖಲೆಗಳ ಮಾಹಿತಿ ಇಲ್ಲಿದೆ.ಹೊಸ ಸದಸ್ಯರ ಹೆಸರು ಸೇರ್ಪಡೆ  ಮದುವೆಯಾದ ನಂತ್ರ ಮನೆಗೆ ಬರುವ ಸೊಸೆಯ ಹೆಸರನ್ನು ರೇಷನ್ ಕಾರ್ಡ್ ಗೆ ಸೇರಿಸಬೇಕಾಗುತ್ತದೆ. ಮಹಿಳೆಯ ಆಧಾರ್ ಕಾರ್ಡ್, ಮದುವೆ ಪ್ರಮಾಣಪತ್ರ, ಗಂಡನ ಪಡಿತರ ಚೀಟಿಯ ಫೋಟೋ ಕಾಪಿ ನೀಡಬೇಕು. ಹಾಗೆ ಆಕೆಯ ತಂದೆ ಮನೆಯ ರೇಷನ್ ಕಾರ್ಡ್ ನಲ್ಲಿರುವ ಹೆಸರನ್ನು ತೆಗೆಯಬೇಕು.ಪಡಿತರ ಚೀಟಿಯಲ್ಲಿ ಮಾಹಿತಿ ತಿದ್ದುಪಡಿಗೆ(amendment) ಅರ್ಜಿ ಸಲ್ಲಿಸಲು ಆಗಸ್ಟ್ 21 ಕೊನೆಯ ದಿನವಾಗಿತ್ತು. ಸರ್ವರ್ ಸಮಸ್ಯೆಯಿಂದ ಹಲವರಿಗೆ ತಿದ್ದುಪಡಿ ಮಾಡಲು ಸಾಧ್ಯವಾಗಿರಲಿಲ್ಲ. ಸಾರ್ವಜನಿಕರ ಬೇಡಿಕೆಗೆ ಪ್ರತಿಕ್ರಿಯಿಸಿ, ಈಗ ಮತ್ತೆ 10 ದಿನಗಳ ಕಾಲ ಅವಕಾಶ ನೀಡಿದೆ. ಸೆಪ್ಟೆಂಬರ್ 1 ರಿಂದ 10 ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ತಿದ್ದುಪಡಿಗೆ ಅವಕಾಶ ಮಾಡಿಕೊಡಲಾಗಿದೆ.ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ಫಲಾನುಭವಿಗಳು ಪಡಿತರ ಚೀಟಿಯನ್ನು ತಿದ್ದುಪಡಿ ಮಾಡಿಸಿಕೊಳ್ಳಬಹುದಾಗಿದೆ.ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪ್ರಕಾರ, 6 ಲಕ್ಷಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್‌ಗಳು ಕುಟುಂಬದ ಮುಖ್ಯಸ್ಥರಾಗಿ ಪುರುಷರನ್ನು ಹೊಂದಿದ್ದು, ಅವರು ಗೃಹ ಲಕ್ಷ್ಮಿ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಬಯಸಿದರೆ ಬದಲಾವಣೆಗಳನ್ನು ಮಾಡಬಹುದು ಎಂದು ಹೇಳಿದೆ.6 ಲಕ್ಷಕ್ಕೂ ಹೆಚ್ಚು ಬಿಪಿಎಲ್ ಪುರುಷ ಮುಖ್ಯಸ್ಥ ಕಾರ್ಡ್ ದಾರರು ಇದ್ದಾರೆ. ಕಾರ್ಡ್​ನ ಮುಖ್ಯಸ್ಥರು ಪುರುಷಾರಾಗಿದ್ದರೆ ಅನ್ನಭಾಗ್ಯ, ಗೃಹಲಕ್ಷ್ಮಿ ಸ್ಕೀಂ ಸಿಗಲ್ಲ. ಗೃಹಲಕ್ಷ್ಮಿ ಅರ್ಜಿ ಸಲ್ಲಿಸಲು ಬಿಪಿಎಲ್, ಎಪಿಎಲ್ ಕಾರ್ಡ್ ಮನೆಯೊಡತಿಯೇ ಇರಬೇಕು. ಇಲ್ಲದಿದ್ದರೆ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಎರಡೂ ಯೋಜನೆಗೂ ಅನರ್ಹರು

Related News

spot_img

Revenue Alerts

spot_img

News

spot_img