22.6 C
Bengaluru
Saturday, July 27, 2024

ಕೇವಲ 4 ಪ್ರೀಮಿಯಂಗಳನ್ನು ಪಾವತಿಸುವ ಮೂಲಕ 1 ಕೋಟಿ ರೂಪಾಯಿಗಳ ಲಾಭವನ್ನು ಪಡೆಯಿರಿ

ಭಾರತೀಯ ಜೀವ ವಿಮಾ ಕಾರ್ಪೋರೇಷನ್ (LIC)ಪಾಲಿಸಿಗಳನ್ನು ಖರೀದಿಸುವ ಸಂದರ್ಭದಲ್ಲಿ ಭಾರತೀಯರ ಮೊದಲ ಆಯ್ಕೆಆಗಿದೆ,LIC ಹಲವಾರು ಜನರಿಗೆ ಉಪಯುಕ್ತವಾದ, ಅನುಕೂಲಕರವಾದ ಯೋಜನೆಯಾಗಿದ್ದು, ಜೀವ ವಿಮಾ ನಿಗಮ ಜನರನ್ನು ಗಮನದಲ್ಲಿಟ್ಟುಕೊಂಡು ಪಾಲಿಸಿಯನ್ನು ಸಿದ್ಧಪಡಿಸುತ್ತದೆ,ಭಾರತೀಯ ಜೀವ ವಿಮಾ ನಿಗಮದ ಯೋಜನೆಯಾದ ಎಲ್‌ಐ‌ಸಿ ಜೀವನ್ ಶಿರೋಮಣಿ (LIC Jeevan Shiromani Plan), ನಾಗರೀಕರಿಗೆ ತುಂಬಾ ಪ್ರಯೋಜನಕಾರಿಯಾಗಿದೆ.

ಎಲ್‌ಐ‌ಸಿ ಜೀವನ್ ಶಿರೋಮಣಿ ಪಾಲಿಸಿ

LIC ಜೀವನ್ ಶಿರೋಮಣಿ ಪಾಲಿಸಿಯು ಲಿಂಕ್ ಮಾಡದ, ಭಾಗವಹಿಸುವ, ವೈಯಕ್ತಿಕ, ಜೀವ ವಿಮೆಯಾಗಿದೆ. ಇದೊಂದು ಉಳಿತಾಯ ಯೋಜನೆ. ಇದು ಸೀಮಿತ ಪ್ರೀಮಿಯಂ ಪಾವತಿಯ ಮನಿ ಬ್ಯಾಕ್ ಜೀವ ವಿಮಾ ಯೋಜನೆಯಾಗಿದ್ದು ಅದು ಕನಿಷ್ಠ ರೂ.1 ಕೋಟಿ ಮೊತ್ತವನ್ನು ನೀಡುತ್ತದೆ.ವಾಸ್ತವವಾಗಿ LICಯ ಯೋಜನೆ  ಒಂದು ನಾನ್ ಲಿಂಕ್ಡ್ ಪ್ಲಾನ್ ಆಗಿದೆ. ಇದರಲ್ಲಿ ನೀವು ಕನಿಷ್ಟ 1 ಕೋಟಿ ರೂ. ಮೊತ್ತದ ಖಾತರಿ ಮೊತ್ತವನ್ನು ಪಡೆಯುತ್ತೀರಿ. ಎಲ್‌ಐಸಿ ತನ್ನ ಗ್ರಾಹಕರಿಗೆ ತಮ್ಮ ಜೀವನ ಭದ್ರತೆಗಾಗಿ ಹಲವು ಉತ್ತಮ ಪಾಲಿಸಿಗಳನ್ನು ನೀಡುತ್ತಲೇ ಇದೆ.

ಎಲ್ಐಸಿ ಈ ಜೀವನ್ ಶಿರೋಮಣಿ (Table No. 847) ಯೋಜನೆಯನ್ನು 19 ಡಿಸೆಂಬರ್ 2017 ರಂದು ಆರಂಭಿಸಿತ್ತು. ಈಗಾಗಲೇ ಹೇಳಿದಂತೆ ಇದೊಂದು ನಾನ್ ಲಿಂಕ್ಡ್ ಸ್ಕೀಮ್ ಆಗಿದ್ದು, ಸೀಮಿತ ಪ್ರೀಮಿಯಂ ಪಾವತಿ ಮನಿ ಬ್ಯಾಕ್ ಪ್ಲಾನ್ ಆಗಿದೆ. ಇದು ಮಾರುಕಟ್ಟೆ ಸಂಬಂಧಿತ ಲಾಭ ಯೋಜನೆ. ಈ ಯೋಜನೆಯನ್ನು ವಿಶೇಷವಾಗಿ HNIಗಳಿಗಾಗಿ ಮಾಡಲಾಗಿದೆ

ಎಲ್ ಐಸಿ ಜೀವನ್ ಶಿರೋಮಣಿ ಪಾಲಿಸಿ 14, 16, 18 ಹಾಗೂ 20 ವರ್ಷಗಳ ನಾಲ್ಕು ವಿವಿಧ ಅವಧಿಗಳಲ್ಲಿ ಮೆಚ್ಯುರ್ ಆಗುತ್ತದೆ. ಪಾಲಿಸಿದಾರರು ಪ್ರತಿ ತಿಂಗಳು ಸುಮಾರು 94,000ರೂ. ಮಾಸಿಕ ಪ್ರೀಮಿಯಂ ಪಾವತಿಸಿದ್ರೆ ಮಾತ್ರ ಎಲ್ಐಸಿ ಜೀವನ್ ಶಿರೋಮಣಿ ಪಾಲಿಸಿಯ ಪ್ರಯೋಜನಗಳನ್ನು ಪಡೆಯಲು ಸಾಧ್ಯ.ಈ ಪಾಲಿಸಿಯಲ್ಲಿ ಪಾಲಿಸಿದಾರರು ಕೇವಲ 4 ವರ್ಷ ಹೂಡಿಕೆ ಮಾಡಿದ್ರೆ ಸಾಕು ಒಂದು ಕೋಟಿ ರೂ. ಮೂಲ ಮೊತ್ತ ಸಿಗುತ್ತದೆ.

ಅರ್ಹತೆಗಳೇನು
ಎಲ್ಐಸಿ ಜೀವನ್ ಶಿರೋಮಣಿ ಯೋಜನೆಯನ್ನು ಪಡೆಯಲು ಪಾಲಿಸಿದಾರರು ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು. ಗರಿಷ್ಠ ವಯಸ್ಸಿನ ಮಿತಿ 55 ವರ್ಷಗಳು ಪಾಲಿಸಿ ಅವಧಿಯು 14 ವರ್ಷಗಳು. 51 ವರ್ಷ ವಯಸ್ಸಿನವರಿಗೆ ಪಾಲಿಸಿ ಅವಧಿಯು 16 ವರ್ಷಗಳು, 48 ವರ್ಷ ವಯಸ್ಸಿನವರಿಗೆ ಪಾಲಿಸಿ ಅವಧಿಯು 18 ವರ್ಷಗಳು ಮತ್ತು 45 ವರ್ಷ ವಯಸ್ಸಿನವರಿಗೆ ಪಾಲಿಸಿ ಅವಧಿಯು 20 ವರ್ಷಗಳು. ಪಾಲಿಸಿದಾರರು ಮೆಚ್ಯೂರಿಟಿಯಲ್ಲಿ 69 ವರ್ಷಕ್ಕಿಂತ ಹೆಚ್ಚಿರಬಾರದು.

ಜೀವನ್ ಶಿರೋಮಣಿ ಪಾಲಿಸಿಯ ಪ್ರಯೋಜನಗಳೇನು?
*1.14 ವರ್ಷಗಳ ಪಾಲಿಸಿ ಅವಧಿ: ಪಾಲಿಸಿಯ ಪ್ರತಿ 10ನೇ ಹಾಗೂ 12ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮೂಲ ಮೊತ್ತದ ಶೇ.30ರಷ್ಟನ್ನು ಪಾವತಿಸಲಾಗುತ್ತದೆ.
*16 ವರ್ಷಗಳ ಪಾಲಿಸಿಯಲ್ಲಿ ನೀವು 12ನೇ ಮತ್ತು 14ನೇ ವರ್ಷದಲ್ಲಿ 35% ಎಸ್ ಅಶ್ಯೂರ್ಡ್ ಪಡೆಯುತ್ತೀರಿ.
*ಪಾಲಿಸಿಯಲ್ಲಿ ಪ್ರೀಮಿಯಂ ಪಾವತಿಸುವ ಅವಧಿ ಕೇವಲ 4 ವರ್ಷಗಳು.
*ಎಲ್ಐಸಿ ಜೀವನ್ ಶಿರೋಮಣಿ ಯೋಜನೆಯಡಿ ಸಾಲ ಪಡೆಯುವ ಸೌಲಭ್ಯವೂ ಇದೆ.

LIC ಜೀವನ್ ಶಿರೋಮಣಿ ಪಾಲಿಸಿಗೆ ಅಗತ್ಯವಿರುವ ದಾಖಲೆಗಳು
ID ಪುರಾವೆ

ಜನ್ಮ ದಿನಾಂಕ ಪುರಾವೆ

ವಿಳಾಸ ಪುರಾವೆ

ಇತ್ತೀಚಿನ ಛಾಯಾಚಿತ್ರ

ಬ್ಯಾಂಕ್ ಖಾತೆಯ ವಿವರಗಳು.

 

Related News

spot_img

Revenue Alerts

spot_img

News

spot_img