28.8 C
Bengaluru
Friday, February 23, 2024

ಇಂದಿನಿಂದ ದೇವಸ್ಥಾನಗಳಿಗೆ ತುಂಡುಡುಗೆಗೆ ತೊಟ್ಟು ಬಂದ್ರೆ ನೋ ಎಂಟ್ರಿ

#From now on #there will # entry # temples # piece-clothing

ಬೆಂಗಳೂರ:ದೇವಾಲಯದ ಒಳಗೆ ವಿದೇಶಿ ವಸ್ತ್ರಗಳು(Foreign garments) ಹಾಗೂ ತುಂಡುಡುಗೆ ಧರಿಸಿದವರಿಗೆ ದೇವಾಲಯದ ಒಳಗೆ ಪ್ರವೇಶಕ್ಕೆ ಅವಕಾಶ ನೀಡದಂತೆ ‘ಟೆಂಪಲ್ ಇನ್‌ಸೈಡ್ ನೋ ವೆಸ್ಟರ್ನ್ ಡ್ರೆಸ್'(Temple Inside No Western Dress’) ಅಭಿಯಾನ ಮತ್ತೆ ಮುನ್ನೆಲೆಗೆ ಬಂದಿದೆ. ದೇಗುಲಗಳಲ್ಲಿ ವಸ್ತ್ರಸಂಹಿತೆ ಕುರಿತು ಕರ್ನಾಟಕ ದೇವಸ್ಥಾನ-ಮಠ, ಧಾರ್ಮಿಕ ಸಂಸ್ಥೆಗಳ ಮಹಾಸಂಘ ಇಂದಿನಿಂದ ಅಭಿಯಾನ ನಡೆಸಲಿದೆ. ಇಂದು ಮಧ್ಯಾಹ್ನ 12 ಗಂಟೆಗೆ ವಸಂತನಗರದ ಶ್ರೀಲಕ್ಷ್ಮಿ ವೆಂಕಟರಮಣ ದೇವಾಲಯದಲ್ಲಿ ವಸ್ತ್ರ ಸಂಹಿತೆ(dress code)ಬೋರ್ಡ್ ಹಾಕುವ ಅಭಿಯಾನಕ್ಕೆ ಚಾಲನೆ ದೊರೆಯಲಿದೆ,ಬೆಂಗಳೂರಲ್ಲಿ ಅರೆಬರೆ ಬಟ್ಟೆ ಹಾಕಿಕೊಂಡು ಅವರಿಗೆ ದೇವಸ್ಥಾನದಲ್ಲಿ ಪ್ರವೇಶವಿಲ್ಲ ಎಂದು ನಿರ್ಬಂಧ ಹೇರಿ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ.ಬೆಂಗಳೂರಿನ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿ ಆರಂಭಿಸಿದ್ದು ಕರ್ನಾಟಕ ದೇವಸ್ಥಾನ ಮಠ ಧಾರ್ಮಿಕ ಸಂಸ್ಥೆಗಳ ಮಹಾಸಂಘ ಅಭಿಯಾನ ಆರಂಭಿಸಿದೆ.ದೇವಾಲಯಗಳಿಗೆ ಅರೆಬರೆ ಬಟ್ಟೆ ಧರಿಸಿ ಬರುವವರಿಗೆ ಪ್ರವೇಶ(Entry) ನಿರ್ಬಂಧಿಸಬೇಕು.ಸ್ಕರ್ಟ್, ಮಿಡ್ಡಿ, ಹರಿದ ಜೀನ್ಸ್, ಶಾರ್ಟ್ಸ್ ಧರಿಸಿ ಬರುವವರಿಗೆ ನಿರ್ಬಂಧ ಹೇರಬೇಕು. ದರ್ಶನಕ್ಕೆ ಅವಕಾಶ ನೀಡದಂತೆ ಸಂಘವು ಆಗ್ರಹಿಸಿದೆ ಕರ್ನಾಟಕ ದೇವಸ್ಥಾನ ಮಠ ಧಾರ್ಮಿಕ ಸಂಸ್ಥೆಗಳ ಮಹಾಸಂಘ ಈ ಕುರಿತಂತೆ ಅಭಿಯಾನ ಆರಂಭಿಸಿದೆ.ಈ ಕುರಿತಂತೆ ದೇಗುಲಗಳ ಮುಂದೆ ಹಿಂದೂ ಕಾರ್ಯಕರ್ತರು ಬೋರ್ಡ್ ಹಾಕಲಿದ್ದಾರೆ.

Related News

spot_img

Revenue Alerts

spot_img

News

spot_img