ಬೆಂಗಳೂರು;ಸದಾಶಿವನಗರ ಪೊಲೀಸರು ಗುರುವಾರ (March 14) ತಡರಾತ್ರಿ ಬಿಜೆಪಿಯ(BJP) ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ (81) ವಿರುದ್ಧ 17 ವರ್ಷದ ಹೆಣ್ಣು ಮಗಳ ಮೇಲೆ ಲೈಂಗಿಕ ದೌರ್ಜನ್ಯ(Sexual assault) ಎಸಗಿದ ಆರೋಪದ ಮೇಲೆ ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ 2012 (POCSO) ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಪೋಕ್ಸೊ ಕಾಯ್ದೆಯ ಸೆಕ್ಷನ್ 8 ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 ಎ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಪೋಕ್ಸ ಪ್ರಕರಣರಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ. ಒಂದೆರೆಡು ತಿಂಗಳ ಹಿಂದೆ ತಾಯಿ-ಮಗಳು ಅನ್ಯಾಯವಾಗಿದೆ ಎಂದು ನಮ್ಮ ಮನೆಗೆ ಅನೇಕ ಬಾರಿ ಬಂದಿದ್ದರು. ಅವರಿಗೆ ಕಷ್ಟ ಇದೆ ಎಂದು ಹಣವನ್ನು ಕೊಟ್ಟು ಕಳುಹಿಸಿದ್ದೇನೆ. ನಾನು ಆಗ ಪೊಲೀಸ್ ಕಮಿಷನರ್‌ಗೆ ಕರೆ ಮಾಡಿ ಈ ವಿಚಾರದ ಕುರಿತು ಮಾತನಾಡಿದ್ದೆ. ಈಗ ನನ್ನ ವಿರುದ್ಧ ದೂರು ದಾಖಲಾಗಿದೆ ಎಂದು ಗೊತ್ತಾಗಿದೆ. ನಾನು ಇಂತಹದ್ದನ್ನು ನಿರೀಕ್ಷೆ ಮಾಡಿರಲಿಲ್ಲ. ಎಲ್ಲವನ್ನೂ ಎದುರಿಸೋಣ ಎಂದು ಬಿಎಸ್‌ವೈ ಹೇಳಿದ್ದಾರೆ.ಯಡಿಯೂರಪ್ಪ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸ ಪ್ರಕರಣ ದಾಖಲಾಗಿದೆ. ‘ನಮ್ಮ ಮಗಳ ಮೇಲೆ ಲೈಂಗಿಕ ದೌರ್ಜನ್ಯವಾಗಿತ್ತು. ಈ ಕುರಿತು ನ್ಯಾಯ ಕೇಳಲು ಯಡಿಯೂರಪ್ಪ ಮನೆಗೆ ಹೋಗಿದ್ದೆವು. ಈ ವೇಳೆ BSY 9 ನಿಮಿಷ ನಮ್ಮ ಬಳಿ ಮಾತನಾಡಿದರು. ನಂತರ ನನ್ನ ಮಗಳ . ಕೈಹಿಡಿದುಕೊಂಡು ರೂಮ್‌ಗೆ ಹೋಗಿ ಡೋರ್ ಲಾಕ್ ಮಾಡಿ ಐದು ನಿಮಿಷ ಬಿಟ್ಟು ಹೊರಗೆ ಬಂದರು ಅವರು ನನ್ನ ಮಗಳ ಖಾಸಗಿ ಅಂಗಗಳನ್ನು ಮುಟ್ಟಿ ಲೈಂಗಿಕ ದೌರ್ಜನ್ಯ ನೀಡಿದ್ದಾರೆ’ ಎಂದು ಬಾಲಕಿಯ ತಾಯಿ FIRನಲ್ಲಿ ಉಲ್ಲೇಖಿಸಿದ್ದಾರೆ,53 ಮಂದಿ ವಿರುದ್ಧ ದೂರು ನೀಡಿದ ಮಹಿಳೆ ಪ್ರಕರಣ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳು , ಬಿಸಿನೆಸ್ ಮ್ಯಾನ್‌ಗಳು ಸೇರಿದಂತೆ ಒಟ್ಟು 53 ಮಂದಿ ವಿರುದ್ದವೇ ಸಂತ್ರಸ್ತ ಬಾಲಕಿಯ ತಾಯಿ ಸದಾಶಿವನಗರ ಠಾಣೆಗೆ ದೂರು ನೀಡಿದ್ದಾರೆ.