# Tirumala # Fakewebsite Dhramareddy # Devotes # Ticket # Rathasapthami
ತಿರುಮಲ: ನಕಲಿ… ನಕಲಿ ಈಗ ಎಲ್ಲೇ ನೋಡಿದ್ರೂ ಬರೀ ನಕಲಿ. ಎಲ್ಲಾ ವಸ್ತುಗಳನ್ನೂ ನಕಲು ಮಾಡೋದು ಈಗ ಸಾಮಾನ್ಯವಾಗಿ ಹೋಗಿದೆ. ಅದು ಎಷ್ಟರ ಮಟ್ಟಿಗೆ ತನ್ನ ಜಾಲವನ್ನ ವಿಸ್ತರಿಸಿಕೊಂಡಿದೆ ಅಂದ್ರೆ.. ಈ ನಕಲಿ ಕೋರರು ಭಗವಂತನಿಗೂ ಟೋಪಿ ಹಾಕೋ ಕರ್ಮಕಾಂಡಕ್ಕೆ ನಿಂತು ಬಿಟ್ಟಿದ್ದಾರೆ. ಕಳೆದ ವರ್ಷ ತಿರುಮಲದ(Tirumala) ಹೆಸರಿನಲ್ಲಿ ನಕಲಿ ವೆಬ್ ಸೈಟ್ ಗಳು ಕಾಣಿಸಿಕೊಂಡಿದ್ದವು. ಇದ್ರಿಂದ ಸಾವಿರಾರು ಭಕ್ತರು ಮೋಸ ಹೋಗಿದ್ದರು. ಇದೀಗ ಮತ್ತೊಮ್ಮೆ ಇದು ಸದ್ದು ಮಾಡ್ತಿವೆ. ಇದರ ಬಗ್ಗೆ ಸ್ವತಃ ಟಿಟಿಡಿಯೇ(Ttd) ಜನರಿಗೆ ಎಚ್ಚರಿಕೆ ನೀಡಿದೆ. ಇದೇ ತಿಂಗಳ 16 ರಂದು ತಿರುಮಲದಲ್ಲಿ ರಥಸಪ್ತಮಿ ನಡೆಯಲಿದ್ದು ಇದನ್ನ ಗಮನದಲ್ಲಿ ಇಟ್ಟುಕೊಂಡು ಈ ಮಾಹಿತಿ ನೀಡಲಾಗಿದೆ.
ಶುಕ್ರವಾರ ಅನ್ನಮಯ್ಯ ಭವನದಲ್ಲಿ ಡಯಲ್ ಯುವರ್ ಈವೋ ಎಂಬ ಕಾರ್ಯಕ್ರಮ ಆಯೋಜನೆ ಮಾಡ್ಲಾಗಿತ್ತು. ಈ ವೇಳೆ ಮಾತಾಡಿದ ಟಿಟಿಡಿ ಇಒ ಧರ್ಮರೆಡ್ಡಿ(Dhramareddy) ನಕಲಿ ವೆಬ್ ಸೈಟ್ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಕೆಲವರು ತಿರುಮಲದ ಹೆಸರಿನಲ್ಲಿ ನಕಲಿ ವೆಬ್ ಸೈಟ್ ತೆರೆದಿದ್ದಾರೆ. ಇದರ ಮುಖಾಂತರ ಭಕ್ತಿರಿಂದ ಹಣ ಪಡದು ಮೋಸ ಮಾಡ್ತಾ ಇದ್ದಾರೆ. ಇದು ತಮ್ಮ ಗಮನಕ್ಕೆ ಬಂದಿದೆ ಎಂದಿದ್ದಾರೆ. ಭಕ್ತರು ತಿರುಪತಿಯ ಅಧಿಕೃತ ವೆಬ್ ಸೈಟ್ ನಿಂದಲೇ ಸೇವಾ ಕಾರ್ಯಗಳನ್ನು ಪಡೆಯಬೇಕು ಅಂತ ಧರ್ಮರೆಡ್ಡಿ ಹೇಳಿದ್ದಾರೆ. ಅಲ್ಲದೇ ಈಗಾಗ್ಲೇ ಟಿಟಿಡಿ ಐಟಿ ಇಲಾಖೆ 52 ನಕಲಿ ವೆಬ್ ಸೈಟ್ ಹಾಗೂ 13 ನಕಲಿ ಆ್ಯಪ್ ಗಳನ್ನು(FakeApp) ಪತ್ತೆ ಮಾಡಿದೆ, ಇದರಿಂದ ಭಕ್ತರು ಯಾವುದೇ ನಕಲಿ ವೆಬ್ ಸೈಟ್ ಗಳಿಗೆ ಮರುಳಾಗಬೇಡಿ ಎಂದು ಧರ್ಮರೆಡ್ಡಿ ಮನವಿ ಮಾಡಿದ್ದಾರೆ. ಇನ್ನು ಟಿಟಿಡಿ ಆಡಳಿತ ಮಂಡಳಿ ಇದರ ಬಗ್ಗೆ ಪೊಲೀಸ್ ದೂರನ್ನೂ ದಾಖಲು ಮಾಡಿದೆ ಎಂದು ಅವರು ತಿಳಿಸಿದ್ದಾರೆ.
ಮತ್ತೊಂದು ವಿಚಾರ ಅಂದ್ರೆ ರಥಸಪ್ತಮಿ ನಡೆಯುವ 15,16 ಹಾಗೂ 17ರಂದು ಸುವದರ್ಶನ ಟೈಮ್ ಸ್ಲಾಟ್ ಟೋಕನ್ ಗಳನ್ನೂ ರದ್ದುಗೊಳಿಸಲಾಗುವುದು ಎಂದು ಟಿಟಿಡಿ ಹೇಳಿದೆ. ಅದೇನೇ ಆಗ್ಲಿ ಭಕ್ತರು ತಿಮ್ಮಪ್ಪನ ಸೇವೆಗೆ ಆನ್ ಲೈನ್ ನಲ್ಲಿ ಟಿಕೆಟ್ ಬುಕ್ ಮಾಡುವಾಗ ಎಚ್ಚರಿಕೆ ವಹಿಸೋದು ಉತ್ತಮ.