32.6 C
Bengaluru
Friday, May 24, 2024

Fake Note: ಬ್ಯಾಂಕ್ ಮ್ಯಾನೇಜರ್ ವಿರುದ್ಧ ಆರ್ ಬಿಐ ದೂರು

ಬೆಂಗಳೂರು, ಜೂ. 30 ;ರಾಜ್ಯಾದ್ಯಂತ ನಕಲಿ ನೋಟುಗಳ ಹಾವಳಿ ಹೆಚ್ಚಾಗಿದ್ದು, 100 ರೂಪಾಯಿಯ ಮುಖಬೆಲೆಯ 30 ನಕಲಿ ನೋಟುಗಳ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ದಿನಗಳಲ್ಲಿ ನಾಲ್ಕು ದೂರುಗಳು ದಾಖಲಾಗಿವೆ. ನೂರು ರೂಪಾಯಿ ಮುಖಬೆಲೆಯ ನಕಲಿ ನೋಟುಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಸಂಬಂಧ ಈಗಾಗಲೇ 4 ಎಫ್‌ಐಆರ್‌ಗಳು ದಾಖಲಾಗಿದೆ.

ಕೆನರಾ,ಯುಬಿಐ,ಬ್ಯಾಂಕ್ ಆಫ್ ಬರೋಡಾ,ಬ್ಯಾಂಕ್ ಮ್ಯಾನೇಜರ್ ಮೇಲೆ ದೂರು ದಾಖಲಾಗಿದೆ.ಉಡುಪಿ, ಮಣಿಪಾಲ,ಹುಬ್ಬಳ್ಳಿ ಹಾಗೂ ಮಲ್ಲೇಶ್ವರ ಬ್ರಾಂಚ್‌ನ ಬ್ಯಾಂಕ್‌ಗಳಲ್ಲಿ ನಕಲಿ ನೋಟು ಪತ್ತೆಯಾಗಿದೆ.ಈ ಮೊದಲು ಬ್ಯಾಂಕ್ ಹೊರತುಪಡಿಸಿ ಉಳಿದ ಚಿಲ್ಲರೆ ಮಾರುಕಟ್ಟೆಗಳಲ್ಲಿ ನಕಲಿ ನೋಟುಗಳು ಕಂಡುಬರುತ್ತಿದ್ದವು ಈಗ ಬ್ಯಾಂಕ್‌ನಿಂದಲೇ ನಕಲಿ ನೋಟು ಹೊರಬರುತ್ತಿವೆ.ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಬ್ಯಾಂಕ್ ಮ್ಯಾನೇಜರ್ ಗಳ ಮೇಲೆ ದೂರು ದಾಖಲಿಸಿದ್ದಾರೆ.

Related News

spot_img

Revenue Alerts

spot_img

News

spot_img